ಈ ನೆಕ್ಲೆಸ್ ಅನ್ನು ಜಗದೀಶ್ ಕೊಟ್ಟಿದ್ದಾ? ಇಲ್ಲ ಬೇರೆ ಯಾರಾದರೂ ಪ್ರಭಾವಿ ವ್ಯಕ್ತಿ ಕೊಟ್ಟಿದ್ದಾ?Jagadish-Presenting-Gift-to-Actress-Rachita-Ram
ಸಿನಿಮಾ ಮಂದಿಗೆ ಅಭಿಮಾನಿಗಳು ಎಲ್ಲಾ ಫೀಲ್ಡ್ನಲ್ಲೂ ಸಿಗ್ತಾರೆ. ಸಾಮಾನ್ಯ ಜನರಿಂದ ಹಿಡಿದು ಭೂಗತಲೋಕದವರೆಗೂ ನಟಿಯರನ್ನು ಇಷ್ಟ ಪಡುವ ಅಭಿಮಾನಿಗಳು ಸಿಕ್ಕೇ ಸಿಗುತ್ತಾರೆ. ನಟಿಯರೊಂದಿಗೆ ನಿಂತು ಫೋಟೊ ತೆಗಿಸಿಕೊಳ್ಳುವುದಕ್ಕೆ ಬಯಸುತ್ತಾರೆ. ಸೆಲ್ಫಿ ಬೇಕು ಅಂತ ಒದ್ದಾಡುತ್ತಾರೆ. ಅಭಿಮಾನಕ್ಕೆ ಮಣಿದು ಅವರೊಂದಿಗೆ ಸೆಲ್ಫಿ ಕೊಟ್ಟೇ ಬಿಡುತ್ತಾರೆ. ಇಂತಹದ್ದೊಂದು ಇಕ್ಕಟ್ಟಿನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಸಿಕ್ಕಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಭಾರತಿನಗರ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಚಲನ ಸೃಷ್ಟಿಸುತ್ತಿದೆ. ಪೊಲೀಸರು ತನಿಖೆ ವೇಳೆ ಒಂದೊಂದೇ ಹೆಸರುಗಳು ಹೊರಬರುತ್ತಿದೆ. ಬಿಕ್ಲು ಶಿವ ಹತ್ಯೆ ಪ್ರಕರಣದ ಆರೋಪಿ ಜಗದೀಶ್ಗೂ ಸಿನಿಮಾ ಮಂದಿಗೂ ನಂಟಿ ಇದೆ ಎಂಬ ವಿಷಯ ಕೂಡ ಹೊರ ಬಿದ್ದಿದೆ. ಡಿಂಪಲ್ ಕ್ವೀನ್ ರಚಿತಾ ರಾಮ್ಗೆ ಈ ಆರೋಪಿ ದುಬಾರಿ ಗಿಫ್ಟ್ ಕೊಟ್ಟಿರುವ ಬಗ್ಗೆ ವರದಿಯಾಗಿವೆ.
ಬೆಂಗಳೂರಿನಲ್ಲಿ ಭಾರತಿನಗರ ರೌಡಿ ಶಿವಪ್ರಕಾಶ್ ಉರ್ಫ್ ಬಿಕ್ಲು ಶಿವ ಹತ್ಯೆ ನಡೆದಿತ್ತು. ಆ ಪ್ರಕರಣದ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಕೆಲವು ಹೆಸರುಗಳು ಹೊರ ಬಿದ್ದಿವೆ.Jagadish-Presenting-Gift-to-Actress-Rachita-Ram ಈ ಮಧ್ಯೆ ಜಗ್ಗನಿಗೂ ಸಿನಿಮಾ ಮಂದಿಗೂ ನಂಟಿದೆ ಎಂಬ ಸಂಗತಿ ಕೂಡ ರಿವೀಲ್ ಆಗಿದೆ. ಹಾಗೇ ನಟಿ ರಚಿತಾ ರಾಮ್ಗೆ ಸಿನಿಮಾ ಸೆಟ್ಟಿಗೆ ಹೋಗಿ ದುಬಾರಿ ಬೆಲೆಯ ಆಭರಣಗಳನ್ನು ಉಡುಗೊರೆಯಾಗಿ ಕೊಟ್ಟಿದ್ದನೆಂಬ ಸುದ್ದಿಯ ಜೊತೆಗೆ ಫೋಟೊಗಳು ಕೂಡ ವೈರಲ್ ಆಗುತ್ತಿವೆ.
ಸದ್ಯ ರಚಿತಾ ರಾಮ್ ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ಹೌದು, ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೋಟೊಗಳು ವೈರಲ್ ಆಗುತ್ತಿವೆ. ಅದರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ರಚಿತಾ ರಾಮ್ ಹಾಗೂ ಬಿಕ್ಲು ಶಿವ ಕೊಲೆಯ ಆರೋಪಿ ಜಗದೀಶ್ ಇದ್ದಾರೆ. ಹಾಗೇ ಈ ಫೋಟೊದಲ್ಲಿ ರಚಿತಾ ರಾಮ್ ದುಬಾರಿ ಬೆಲೆಯ ನೆಕ್ಲೆಸ್ ಹಿಡಿದು ಖುಷಿಯಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಇದೇ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡದಾಗಿ ಚರ್ಚೆಯಾಗುತ್ತಿದೆ. ರಚಿತಾ ರಾಮ್ಗೂ ಆರೋಪಿ ಜಗದೀಶ್ ಹೇಗೆ ಪರಿಚಯ? ದುಬಾರಿ ಬೆಲೆಯ ನೆಕ್ಲೆಸ್ ಕೊಟ್ಟು ಕ್ಯಾಮರಾ ಪೋಸ್ ಕೊಟ್ಟರೇ? ಎಂಬ ಬಗ್ಗೆ ಚರ್ಚೆಯಾಗುತ್ತಿದೆ.