ಇತ್ತೀಚೆಗೆ ಯುವ ಸಮುದಾಯ ಡೇಟಿಂಗ್ ಆಪ್‌ಗಳ ಮೊರೆ ಹೋಗುತ್ತಿರುವುದು ಹೆಚ್ಚಾಗಿದೆ.Indian-Film-Celebrities-are-Dating-Apps
ಅದಕ್ಕಾಗಿಯೇ ಕೆಲವು ಡೇಟಿಂಗ್ ಆಪ್‌ಗಳು ಇವೆ. ಸಿನಿಮಾ ಸ್ಟಾರ್‌ಗಳು ಕೂಡ ಈ ಡೇಟಿಂಗ್ ಆಪ್‌ಗಳನ್ನು ಬಳಸುತ್ತಾರೆ. ಕೆಲವು ಆಪ್‌ಗಳು ಸೆಲೆಬ್ರಿಟಿಗಳಿಗಾಗಿ, ಉದ್ಯಮಿಗಳಿಗಾಗಿ ಅಂತಾನೇ ಇವೆ. indian-film-celebrities-are-dating-appsಹೈ ಪ್ರೋಫೈಲ್ ಇರುವವರಿಗೆ ಮಾತ್ರ ಈ ಆಪ್‌ಗಳಲ್ಲಿ ಪ್ರವೇಶ ನೀಡಲಾಗುತ್ತೆ. ಇಲ್ಲಿ ಹುಡುಗ, ಹುಡುಗಿಯರ ಪ್ರೊಫೈಲ್ ಮ್ಯಾಚ್ ಆದರೆ, ಡೇಟಿಂಗ್‌ಗೆ ಹೋಗುತ್ತಾರೆ.
ಕೆಲವರು ಈ ಡೇಟಿಂಗ್ ಆಪ್‌ಗಳ ಮೂಲಕವೇ ಪಾರ್ಟ್ನರ್‌ಗಳನ್ನು ಹುಡುಕಿಕೊಂಡಿದ್ದಾರೆ. ಮದುವೆ ಆಗಿ ಸುಖ ಸಂಸಾರವನ್ನು ಕಟ್ಟಿಕೊಂಡಿದ್ದಾರೆ. ಸಾಮಾನ್ಯವಾಗಿ ಡೇಟಿಂಗ್ ಆಪ್‌ಗಳನ್ನು ಬಳಸುವವರ ವಿವರಗಳನ್ನು ಇಲ್ಲಿ ಗೌಪ್ಯವಾಗಿ ಇಡಲಾಗುತ್ತೆ. ಆದರೂ, ಕೆಲವೊಮ್ಮೆ ಸೆಲೆಬ್ರೆಟಿಗಳ ಪ್ರೊಫೈಲ್‌ಗಳು ಲೀಕ್ ಆಗಿದ್ದೂ ಇವೆ.
ಸ್ಯಾಂಡಲ್‌ವುಡ್ ತಾರೆಯರು ಕೂಡ ಡೇಟಿಂಗ್ ಆಪ್‌ಗಳನ್ನು ಗೌಪ್ಯವಾಗಿ ಬಳಸುತ್ತಿದ್ದಾರೆ. ಈಗ ಈ ಡೇಟಿಂಗ್ ಆಪ್‌ಗಳು ಸೆಲೆಬ್ರೆಟಿಗಳ ಪಾಲಿಗೆ ಮ್ಯಾಟ್ರಿಮೊನಿ ಸೈಟ್‌ಗಳಾಗಿ ಕಾರ್ಯನಿರ್ವಹಿಸುತ್ತಿವೆ. ಇತ್ತೀಚೆಗೆ ಕಿರುತೆರೆ ನಟಿಯೊಬ್ಬರು ತನ್ನ ಲೈಫ್ ಪಾರ್ಟ್ನರ್ ಅನ್ನು ಇಂತಹದ್ದೇ ಡೇಟಿಂಗ್ ಆಪ್‌ಗಳ ಮೂಲಕ ಹುಡುಕಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
ಹೆಚ್ಚುತ್ತಿದೆ ಡೇಟಿಂಗ್ ಆಪ್ ಕ್ರೇಜ್
“ನಾನು ಡೇಟಿಂಗ್ ಆಪ್ ಸುದ್ದಿಗೆ ಹೋಗಿರಲಿಲ್ಲ. ಅದೇ ವೇಳೆ ನಾನು ಸಪರೇಟ್ ಆಗಿದ್ದೆ. ನನಗೆ ಇನ್ನೂ ಡಿವೋರ್ಸ್ ಕೂಡ ಸಿಕ್ಕಿರಲಿಲ್ಲ. ಆ ಪ್ರಕ್ರಿಯೆ ಒಂದು ಕಡೆ ನಡೆಯುತ್ತಿತ್ತು. ಹೀಗೆ ಯಾವುದೋ ಕಾರ್ಯಕ್ರಮಕ್ಕೆ ಹೋದಾಗ ನಮ್ಮ ಇಂಡಸ್ಟ್ರಿಯಲ್ಲಿ ಇರೋರು ಅವರು ನೀನು ಈಗ ಬೇರೆಯಾಗಿದ್ದೀಯಲ್ಲ. ಲೈಫ್ ಪೂರ್ತಿ ನೀನು ಹೀಗೆ ಇರುತ್ತೀಯಾ? ನಿನ್ನ ಭಾವನೆಗಳನ್ನು ಹಂಚಿಕೊಳ್ಳುವುದಕ್ಕಾದರೂ ಯಾರಾದರೂ ಬೇಕಲ್ಲ. ನೋಡು ಈ ರೀತಿ ಒಂದು ಆಪ್ ಇದೆ. ನೀನು ಯಾಕೆ ಟ್ರೈ ಮಾಡಬಾರದು ಅಂತ ಹೇಳಿದರು. ಆಗ ಟ್ರೈ ಮಾಡಿದೆ” ಎಂದು ಡೇಟಿಂಗ್ ಆಪ್ ಬಗ್ಗೆ ಹೇಳಿಕೊಂಡಿದ್ದಾರೆ.
ಸೆಲೆಬ್ರಿಟಿಗಳಿಗೆ ಯಾಕೆ ಬೇಕು ಡೇಟಿಂಗ್ ಆಪ್?
ಬಾಲಿವುಡ್ ಸೇರಿದಂತೆ ಹಲವು ಚಿತ್ರರಂಗದ ಸೆಲೆಬ್ರಿಟಿಗಳಿಗೆ ಡೇಟಿಂಗ್ ಆಪ್ ಕಾಮನ್. ಕನ್ನಡದಲ್ಲೂ ಕೆಲವರು ಡೇಟಿಂಗ್ ಆಪ್ ಅನ್ನು ಬಳಸುತ್ತಿದ್ದಾರೆ. ಆದರೆ, ಅದು ಖಾಸಗಿಯಾಗಿಯೇ ಇಟ್ಟುಕೊಂಡಿದ್ದಾರೆ. ಆದ್ಯಾಕೆ ಡೇಟಿಂಗ್ ಆಪ್‌ಗಳ ಮೊರೆ ಹೋಗುತ್ತಿದ್ದಾರೆ? ಅಲ್ಲಿಯೇ ಯಾಕೆ ಪಾರ್ಟ್ನರ್‌ಗಳನ್ನು ಹುಡುಕುತ್ತಿದ್ದಾರೆ?
ಯಾವ್ಯಾವ ಡೇಟಿಂಗ್ ಆಪ್‌ಗಳಿವೆ?
ಭಾರತದಲ್ಲಿ ನಾಲ್ಕೈದು ಡೇಟಿಂಗ್ ಆಪ್‌ಗಳು ಇವೆ. ಇವುಗಳಲ್ಲಿ ಎರಡು ಡೇಟಿಂಗ್ ಆಪ್‌ಗಳನ್ನು ಸೆಲೆಬ್ರೆಟಿಗಳು ಹೆಚ್ಚಾಗಿ ಬಳಸುತ್ತಾರೆ. ಅವುಗಳು ಯಾವುವು ಅಂತ ನೋಡುವುದಾರೇ,
ರಾಯ (Raya): ಬಾಲಿವುಡ್‌ನಿಂದ ಹಿಡಿದು ಬಹುತೇಕ ಸೆಲೆಬ್ರಿಟಿಗಳು ಬಳಸುವ ಆಪ್ ಇದೆ. ಇತ್ತೀಚೆಗೆ ಬಾಲಿವುಡ್ ನಟಿ ಜಾಹ್ನವಿ ಕಪೂರ್, ಶ್ರದ್ಧಾ ಕಪೂರ್, ಹೃತಿಕ್ ರೋಷನ್, ಆದಿತ್ಯ ರಾಯ್ ಕಪೂರ್ ಹೆಸರುಗಳು ಈ ಡೇಟಿಂಗ್ ಆಪ್ ಜೊತೆ ತಳುಕು ಹಾಕಿಕೊಂಡಿದ್ದವು.
ಟಿಂಡರ್ (Tinder): ಇತ್ತೀಚೆಗೆ ಸಾಮಾನ್ಯ ಜನರ ಬಾಯಲ್ಲಿ ಕೇಳಿ ಬರುತ್ತಿರುವ ಡೇಟಿಂಗ್ ಆಪ್ ಇದು. ಆದರೆ, ಫೇಕ್ ಪ್ರೊಪೈಲ್ ಹಾಗೂ ಖಾಸಗಿತನದ ಕೊರೆತೆಯಿಂದ ಇದು ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ.
ಬಂಬಲ್ (Bumble): ಟಿಂಡರ್ ಜನಪ್ರಿಯತೆ ಪಡೆದುಕೊಂಡ ಬೆನ್ನಲ್ಲೇ ಬಂಬಲ್ ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ಇದೂ ಕೂಡ ಫೇಕ್ ಪ್ರೊಫೈಲ್ ಹಾಗೂ ಖಾಸಗಿತನವನ್ನು ಕಾಪಾಡುವಲ್ಲಿ ಸೋತಿತ್ತು.
ಹಿಂಜ್ (Hinge): ಸದ್ಯ ಚಾಲ್ತಿಯಲ್ಲಿ ಇರೋ ಡೇಟಿಂಗ್ ಆಪ್ ಹಿಂಜ್. ಇದು ಸೆಲೆಬ್ರಿಟಿಗಳ ಫೇವರಿಟ್. ಇಲ್ಲಿ ಬೇರೆ ಭಾಷೆಯ ಸೆಲೆಬ್ರಿಟಿಗಳು ಇದ್ದಾರೆ. ದಕ್ಷಿಣ ಭಾರತದ ತಾರೆಯರು ಹೆಚ್ಚಾಗಿ ಹಿಂಜ್ ಡೇಟಿಂಗ್ ಆಪ್ ಅನ್ನು ಬಳಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಇತ್ತೀಚೆಗೆ ಇದು ಕೂಡ ಸಮಸ್ಯೆಯನ್ನು ಎದುರಿಸುತ್ತಿದೆ ಎನ್ನಲಾಗಿದೆ.