“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ ಎಂದು ಈ ಚಿತ್ರದ ನಿರ್ದೇಶಕ ನಾಗರಾಜ್ ಎಂ.ಜಿ ಗೌಡ ರವರು ತಿಳಿಸಿದ್ದಾರೆ.
ಇನ್ನು ಈ ಚಿತ್ರವು 10 ಫೆಬ್ರುವರಿ 2023 ರಂದು ಬಿಡುಗಡೆಯಾಗಿ ತೆರೆಯ ಮೇಲೆ ಅಬ್ಬರಿಸಲಿದೆ. ಈ ಚಿತ್ರದಲ್ಲಿ ಒಂದು ಮುಖ್ಯವಾದ ಪಾತ್ರದಲ್ಲಿ ಆನಂದ್ ಪಟೇಲ್ ಹುಲಿಕಟ್ಟಿ ರವರು ಅಭಿನಯಿಸಿದ್ದಾರೆ.
ಮೆಡಿಕಲ್ ರಿಸರ್ಚ್ ಗೆ ಸಂಬಂಧಪಟ್ಟ ಒಂದಷ್ಟು ಘಟನೆಗಳನ್ನು ಇಟ್ಟುಕೊಂಡು ರೆಡಿಯಾಗಿರುವ “ಡಿಸೆಂಬರ್ 24” ಸಿನಿಮಾ ವನ್ನು ನಾಗರಾಜ್ ಎಂ.ಜಿ ಗೌಡ ರವರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಈ ಚಿತ್ರದಲ್ಲಿ 2015 ರಿಂದ 2019ರ ನಡುವೆ ನಡೆಯುವ ಕೆಲವೊಂದು ನೈಜ ಘಟನೆಗಳನ್ನು ಇಟ್ಟುಕೊಂಡು ಕಥೆ ಬರೆದಿದ್ದಾರೆ ನಿರ್ದೇಶಕರು. ಫ್ಯಾಮಿಲಿ ಲವ್ ಫ್ರೆಂಡ್ಶಿಪ್ ಹಾಗೂ ಹಾರರ ಥ್ರಿಲ್ಲರ್ ನಂತಹ ಎಲ್ಲಾ ಮನರಂಜನಾತ್ಮಕ ಎಲಿಮೆಂಟ್ಗಳು ಸಹ ಚಿತ್ರದಲ್ಲಿ ಇರುತ್ತವೆ.ಈ ಚಿತ್ರದಲ್ಲಿ ನಾಯಕರಾಗಿ ಅಪ್ಪು ಬಡಿಗೇರ್, ರವಿ ಕೆ ಆರ್ ಪೇಟೆ, ರಘು ಶೆಟ್ಟಿ, ಸಾಗರ್ ರಾಮಾಚಾರಿ, ಜಗದೀಶ್ ಎಚ್ ಜಿ ದೊಡ್ಡಿ. ಹಾಗೂ ನಾಯಕಿಯರಾಗಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮಿ ಧಾರಾವಾಯಿಯಲ್ಲಿ ಅಭಿನಯಿಸುತ್ತಿರುವ ಲಕ್ಷ್ಮಿ ಖ್ಯಾತಿಯ ಭೂಮಿಕಾ ರಮೇಶ್,ದಿವ್ಯ ಆಚಾರ್ ಹಾಗು ಮಿಲನ ರಮೇಶ್ ಅಭಿನಯಿಸಿದ್ದಾರೆ. ಇನ್ನುಳಿದ ತಾರಾಗಣದಲ್ಲಿ ಅಭಿನಯ,ಭಾಸ್ಕರ್,ಅನುಪಮ,ಮೈಕೋ ದೇವರಾಜ್, ಅಭಿನಯಿಸಿದ್ದಾರೆ.
ಇನ್ನು ಈ ಚಿತ್ರಕ್ಕೆ ವಿನಯ್ ಗೌಡ ರವರ ಛಾಯಾಗ್ರಾಹಣ ಇದೆ. ಪ್ರವೀಣ್ ನಿಕೇತನ ಮತ್ತು ವಿಶಾಲ್ ಆಲಾಪ್ ರವರು ಸಂಗೀತ ನೀಡಿದ್ದಾರೆ. ವೆಂಕಿ ಯು ಡಿ ವಿ ಅವರ ಸಂಕಲನವಿದೆ. ” ಅರಳೋಕೆ ಮುಂಚೇನೆ ” ಎಂಬ ಒಂದು ಸುಂದರವಾದ ಹಾಡಿಗೆ ಸರಿಗಮಪ ಖ್ಯಾತಿಯ ಅಂಕಿತ ಕುಂಡು ಹಾಡಿದ್ದಾರೆ . ಡಾ. ವಿ ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ಬರೆದಿದ್ದಾರೆ.