“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು ನೀಡಿದ್ದಾರೆ.
ಚಿತ್ರ ಪ್ರೇಕ್ಷಕರಿಗೆ ಯಾವುದೇ ರೀತಿ ಮೋಸವಾಗದಂತೆ ಚಿತ್ರ ಮೂಡಿ ಬರುವಂತೆ ಕಥೆ ಚಿತ್ರಕಥೆ ಬರೆದು ನಿರ್ದೇಶಿಸಿ ಅಧ್ಬುತವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸಂಜಯ್,ಇನ್ನೂ ಚಿತ್ರಕ್ಕೆ ಆರ್.ವಿಕ್ರಮ್ RVD ಅವರು ಸಂಭಾಷಣೆ ಬರೆದು ತಮ್ಮ ಕೈಚಳಕವನ್ನು ತೋರಿಸಿದ್ದಾರೆ .
“ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರ ಸೆನ್ಸಾರ್ ಮಂಡಳಿಯ ತಂಡದಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಒಂದೇ ಒಂದು ದೃಶ್ಯಕ್ಕಾಗಲಿ, ಸಂಭಾಷಣೆಗಾಗಲಿ ಕತ್ತರಿ ಹಾಕದೆ ಇದೊಂದು ಸಾಮಾಜಿಕ ಹಾಗೂ ಸಮಾಜಕ್ಕೆ ಒಂದೊಳ್ಳೆ ಸಂದೇಶ ಕೊಡುವ ಚಿತ್ರ ಜೊತೆಗೆ ಅದ್ಭುತವಾದ ಥ್ರಿಲ್ಲರ್ ಎಂಬ ಪ್ರಶಂಸೆಯನ್ನು ಕೊಟ್ಟು U/A ಪ್ರಮಾಣ ಪತ್ರ ನೀಡಿದ್ದಾರೆ .
ಕನ್ನಡ ಚಿತ್ರರಂಗದಲ್ಲಿ ಕೆಲವೊಂದು ಸಿನೆಮಾದ ಹೆಸರುಗಳೂ ಆಗಾಗ ಒಂದೊಂದು ರೀತಿಯಲ್ಲಿ ಪ್ರಚಾರ ಪಡೆದುಕೊಳ್ಳುತ್ತದೆ . “ಐ ಆಮ್ ಪ್ರೆಗ್ನೆಂಟ್” But I am not a female ಎಂಬ ಅಡಿಬರಹ ಹೊಂದಿದೆ . ಕೇಳಿದ ತಕ್ಷಣ ಆಶ್ಚರ್ಯ ಆಗೋದು ಖಂಡಿತ . ಈ ಚಿತ್ರದಲ್ಲಿ ಪುರುಷ ಪ್ರಗ್ನೆನ್ಸಿ ಆಗುವುದನ್ನು ಕಾಣಬಹುದು. ಹೌದು ಇದು ಸಾಧ್ಯನಾ ಎಂದು ಸುಮಾರು ಜನ ಹುಬ್ಬೇರಿಸುವುದಂತೂ ಸತ್ಯ . ಇದೊಂದು ಫ್ಯಾಮಿಲಿ ಎಂಟರ್ಟೇನ್ಮೆಂಟ್ ಎಂಬುದರಲ್ಲಿ ಯಾವುದೇ ಸಂದೇಹ ಇಲ್ಲ ಅಂತ ಮನಸ್ಪೂರ್ವಕವಾಗಿ ಸೆನ್ಸಾರ್ ತಂಡದಿಂದ ಪ್ರತಿಕ್ರಿಯೆ ಬಂದಿದೆ .
“ಅನು ಸಿನಿಮಾಸ್” ಬ್ಯಾನರ್ ನ ಅಡಿಯಲ್ಲಿ ನಿರ್ಮಾಪಕರಾದ ಶ್ರೀಮತಿ ಅನಿತ ಸಂಜಯ್ ಬಂಡವಾಳ ಹೂಡಿದ್ದಾರೆ . ಇವರು ವೃತ್ತಿಯಲ್ಲಿ ಮೇಕಪ್ ಆರ್ಟಿಸ್ಟ್ ಆಗಿದ್ದು ತಮ್ಮ ಸಿನಿಮಾ ಮೇಲಿನ ಪ್ರೀತಿಗೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ ಜೊತೆಗೆ ಸಹ ನಿರ್ಮಾಪಕರಾಗಿ ಬಿಡದಿಯ ಎಚ್ ಪಿ ಗೋಪಿ ಯವರು ಬಂಡವಾಳವನ್ನು ಹೂಡಿದ್ದಾರೆ.ಇವರಿಬ್ಬರ ಸಹಕಾರದಿಂದ ಚಿತ್ರ ಬಹಳ ಅದ್ದೂರಿಯಾಗಿ ಮೂಡಿಬಂದಿದೆ ಎಂದು ನಿರ್ದೇಶಕ ಸಂಜಯ್ ಯವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ .ತಾರಾಬಳಗದಲ್ಲಿ ನಾಯಕನಟರಾಗಿ ಪ್ರತಾಪ್ ನಾರಾಯಣ್,ಅರ್ಪಿತಾ ಗೌಡ ಪ್ರಿಯಾಂಕಾ ಸುರೇಶ್ ,ಕೆ ಎಸ್ ಶ್ರೀಧರ್ ,ಮಠ ಕೊಪ್ಪಳ, ಧರ್ಮಣ್ಣ ಕಡೂರ್ ,ಚೈತ್ರ ಕೊಟ್ಟೂರ್ ,ರಾಘವ್ ನಾಗ್ , ವಿನಯ್, ಅನುಭವಿ ಕಲಾವಿದರೊಂದಿಗೆ ಚಿತ್ರ ಮೂಡಿಬಂದಿದೆ .
ಸಂಕಲನಕಾರರಾಗಿ ,ವೆಂಕಿ ಯುಡಿ ವಿ ,ಕ್ಯಾಮೆರಾಮನ್ ಪುಗಳ್ ಪಾಂಡಿಯನ್, ಎಸ್ ಪ್ರದೀಪ್ ವರ್ಮ ಸಂಗೀತ ಸಂಯೋಜನೆ ಆರ್.ವಿಕ್ರಮ್RVD ಅವರ ಸಂಭಾಷಣೆ ಚಿತ್ರಕ್ಕೆ ಪೂರಕವಾಗಿದೆ.