ಕನ್ನಡ ನಟಿ ನಿಶ್ವಿಕಾ ನಾಯ್ಡು ಇತ್ತ ಸಿನಿಮಾಗಳಲ್ಲಿ ಅತ್ತ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.
ಪರಭಾಷೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಇತ್ತೀಚೆಗೆ ನಿಶ್ವಿಕಾ ಟಾಲಿವುಡ್ ಎಂಟ್ರಿ ಬಗ್ಗೆ ಬಿಸಿಬಿಸಿ ಚರ್ಚೆ ನಡೆದಿತ್ತು. ಚಿರಂಜೀವಿ ಸಿನಿಮಾದಲ್ಲಿ ಆಕೆ ಹೆಜ್ಜೆ ಹಾಕುತ್ತಾರೆ ಎನ್ನಲಾಗಿತ್ತು.hot-beauty-nishvika-naidu-special-song ಅದು ಸುಳ್ಳಾಗಿದೆ.
ವಸಿಷ್ಠ ಮಲ್ಲಿಡಿ ನಿರ್ದೇಶನದ ಸೋಶಿಯೋ ಫ್ಯಾಂಟಸಿ ಸಿನಿಮಾ ‘ವಿಶ್ವಂಭರ’. ಮೆಗಾಸ್ಟಾರ್ ಚಿರಂಜೀವಿ ಹೀರೊ ಆಗಿ ನಟಿಸುತ್ತಿರುವ ಸಿನಿಮಾ ಇದು. ಆಶಿಕಾ ರಂಗನಾಥ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. ತ್ರಿಷಾ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ.
‘ವಿಶ್ವಂಭರ’ ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಯಾರು ಹೆಚ್ಚು ಹಾಕುತ್ತಾರೆ ಎಂದು ಭಾರೀ ಚರ್ಚೆ ನಡೆದಿತ್ತು. ಸಾಕಷ್ಟು ನಟಿಯರ ಹೆಸರು ಕೇಳಿಬಂದಿತ್ತು. ಕನ್ನಡ ನಟಿ ನಿಶ್ವಿಕಾ ನಾಯ್ಡು ಹೆಸರು ಮುಂಚೂಣಿಯಲ್ಲಿತ್ತು. ಆದರೆ ಈಗ ಮೌನಿ ರಾಯ್ ಚಿತ್ರದಲ್ಲಿ ಹೆಜ್ಜೆ ಹಾಕಿದ್ದಾರೆ. ಹಾಡಿನ ಚಿತ್ರೀಕರಣ ನಡೆದಿದೆ. ಚಿರು ಜೊತೆ ಇರುವ ಫೋಟೊವನ್ನು ಮೌನಿ ರಾಯ್ ಹಂಚಿಕೊಂಡಿದ್ದಾರೆ.
‘ಕೆಜಿಎಫ್’-1 ಚಿತ್ರದ ಹಿಂದಿ ವರ್ಷನ್‌ನಲ್ಲಿ ಮೌನಿ ಹೆಜ್ಜೆ ಹಾಕಿದ್ದರು.hot-beauty-nishvika-naidu-special-song
ಬಳಿಕ ಸ್ಪೆಷಲ್ ಸಾಂಗ್ಸ್ ಮೂಲಕವೇ ಆಕೆ ಹೆಚ್ಚು ಗಮನ ಸೆಳೆದಿದ್ದರು. ಇದೀಗ ತೆಲುಗು ಚಿತ್ರರಂಗ ಪ್ರವೇಶಿಸಿದ್ದಾರೆ. ನಿಶ್ವಿಕಾ ನಾಯ್ಡು ಒಳ್ಳೆ ಡ್ಯಾನ್ಸರ್. ‘ಕರಟಕ ದಮನಕ’ ಚಿತ್ರದಲ್ಲಿ ಪ್ರಭುದೇವಗೆ ಸಮನಾಗಿ ಹೆಜ್ಜೆ ಹಾಕಿ ಹುಬ್ಬೇರಿಸಿದ್ದರು. ಈ ಸಾಂಗ್ ಭಾರೀ ವೈರಲ್ ಆಗಿ ಪರಭಾಷಿಕರ ಕಣ್ಣಿಗೂ ಬಿದ್ದಿತ್ತು. ಇದೇ ಹಾಡು ನೋಡಿ ‘ವಿಶ್ವಂಭರ’ ಚಿತ್ರಕ್ಕೆ ಆಕೆಯನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಆ ಸುದ್ದಿ ಸುಳ್ಳಾಗಿದೆ.
‘ಅಮ್ಮ ಐ ಲವ್ ಯು’ ಸಿನಿಮಾ ಮೂಲಕ ಬೆಂಗಳೂರು ಬೆಡಗಿ ನಿಶ್ವಿಕಾ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ಪಡ್ಡೆಹುಲಿ, ಜಂಟಲ್‌ಮನ್, ಗುರುಶಿಷ್ಯರು, ದಿಲ್ ಪಸಂದ್ ಹೀಗೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ದೊಡ್ಡದಾಗಿ ಬ್ರೇಕ್ ಮಾತ್ರ ಸಿಗಲೇ ಇಲ್ಲ. ಇತ್ತೀಚೆಗೆ ಕನ್ನಡದ ನಟಿಯರು ಒಬ್ಬೊಬ್ಬರಾಗಿ ಪರಭಾಷೆಯತ್ತ ಮುಖ ಮಾಡುತ್ತಿದ್ದಾರೆ. ನಿಶ್ವಿಕಾ ಕೂಡ ತೆಲುಗು, ತಮಿಳಿನಲ್ಲಿ ನಟಿಸಿ ಗೆಲ್ಲುವ ಲೆಕ್ಕಾಚಾರದಲ್ಲಿದ್ದಾರೆ.