ಕೊಡಗಿನ ಬೆಡಗಿ ಕನ್ನಡತಿ ಹರ್ಷಿಕಾ ಪೂಣಚ್ಚ ಸಾಂಪ್ರದಾಯಿಕ ಧಿರಿಸಿ ಧರಿಸಿ ಮಿಂಚಲೂ ಸೈ.. ಗ್ಲಾಮರ್ ಲುಕ್ ನಲ್ಲಿ ಕಾಣಿಸಿಕೊಳ್ಳಲು ಜೈ ಎನ್ನುವುದನ್ನು ಮತ್ತೆ ಮತ್ತೆ ನಿರೂಪಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಸೀರೆ ಉಟ್ಟು ತಮ್ಮ ಅಂದ ಮತ್ತಷ್ಡು ಹಿಮ್ಮಡಿಗೊಳಿಸುವಂತೆ ಮಾಡಿದ್ದ ಹರ್ಷಿಕಾ ಪೂಣಚ್ಚ ಈಗ ಹಾಟ್ ಲುಕ್ ನಲ್ಲಿ ಪಡ್ಡೆ ಹುಡುಗೆ ನಿದ್ದೆ ಕೆಡಿಸಿದ್ದಾರೆ.
ನಿರ್ದೇಶಕ ನಂಜುಂಡೇಗೌಡ ನಿರ್ದೇಶನದಲ್ಲಿ ಚಿತ್ರೀಕರಣ ಗೊಳ್ಳುತ್ತಿರುವ ” ಕಾಸಿನ ಸರ” ಚಿತ್ರದಲ್ಲಿ ಗ್ರಾಮೀಣ ಮಹಿಳೆಯ ಪಾತ್ರದಲ್ಲಿ ಡೀ ಗ್ಲಾಮರ್ ನಲ್ಲಿ ಕಾಣಿಸಿಕೊಂಡು ಗದ್ದೆಯಲ್ಲಿ ನಾಟಿ ಮಾಡಿದ್ದ ನಟಿ ಈಗ ಮತ್ತೆ ವಿಭಿನ್ನ ಪೋಟೋ ಶೂಟ್ ಮಾಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ತಮ್ಮ ಕೂದಲಿಗೆ ಬಿಳಿ ಬಣ್ಣದ ಲುಕ್ ನೀಡಿರುವ ಅವರ ತಮ್ಮ ಅಂದವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ ಲಕ್ಣ್ಮಿಲೇಬಲ್ ಅವರ ಡಿಸೈನರ್ ನಲ್ಲಿ ಮೂಡಿ ಬಂದಿರುವ ಹೊಸ ಧಿರಿಸಿಗೆ ಅಚ್ಚು ತಮ್ಮ ಕ್ಯಾಮರಾ ಕಣ್ಣಲ್ಲಿ ಅಂದವಾದ ಪೋಟೋಗಳನ್ನು ಸೆರೆ ಹಿಡಿಯಲಾಗಿದೆ