ಸುಂದರ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಭಾಗಿ.
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಮಹತ್ವದ ಸ್ಥಾನ. ಹುಟ್ಟಿದ ಮನೆ ಹಾಗೂ ಸೇರಿದ ಮನೆ ಎರಡು ಮನೆಗಳಿಗೂ ಕೀರ್ತಿ ತರುವವಳು ಹೆಣ್ಣು. ಶ್ರೀಮತಿ ಗುಲಾಬ್ ಪದ್ಮನಾಭಸಾ ಖೋಡೆ ಅವರು ಸಹ ಆದರ್ಶ ಮಹಿಳೆ. ತುಂಬು ಜೀವನ ನಡೆಸಿ, ಗಂಡ, ಮಕ್ಕಳು, ಮೊಮ್ಮಕ್ಕಳು ಹೀಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಕೆಲವು ವರ್ಷಗಳ ಹಿಂದೆ ನಿಧನರಾದರು. ಇವರ ಮೊಮ್ಮಗ ಕೆ.ಆರ್.ಕೃಷ್ಣ(ನಿಖಿಲ್) ಅಜ್ಜಿಯ ನೆನಪಿನಲ್ಲಿ ಗುಲಾಬ್ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಇದರ ಮೊದಲ ಪ್ರಯತ್ನವಾಗಿ “streets of ಬೆಂಗಳೂರು” ಎಂಬ ಕಿರುಚಿತ್ರ ನಿರ್ಮಾಣ ಮಾಡಿದ್ದಾರೆ. ಮುಂದೆ ಅದ್ದೂರಿ ಚಿತ್ರ ನಿರ್ಮಾಣ ಮಾಡುವ ಆಶಯ ಕೂಡ ಕೃಷ್ಣ ಅವರಿಗಿದೆ.
ಇತ್ತೀಚೆಗೆ “ಗುಲಾಬ್ ಪ್ರೊಡಕ್ಷನ್ಸ್” ಸಂಸ್ಥೆ ಅನಾವರಣ ಅದ್ದೂರಿಯಾಗಿ ನಡೆಯಿತು. ಕೃಷ್ಣ ಅವರ ತಾತಾ ಪದ್ಮನಾಭ ಸಾ ಖೋಡೆ ಅವರು ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಕರ್ನಾಟಕ ರಾಜ್ಯದ ಪ್ರಸಿದ್ಧ ರಾಜಕಾರಣಿಗಳಾದ ಎಸ್.ಎಂ.ಕೃಷ್ಣ, ಕೆ.ಹೆಚ್ ಮುನಿಯಪ್ಪ, ಯೂತ್ ಕಾಂಗ್ರೆಸ್ ಮುಖಂಡರಾದ ಬಿ.ವಿ.ಶ್ರೀನಿವಾಸ್, ಲಹರಿ ವೇಲು ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು, ಟಿ.ಎಸ್.ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ಕಲಾವಿದರಾದ ದೊಡ್ಡಣ್ಣ, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ಪ್ರಮಿಳಾ ಜೋಷಾಯಿ, ಕುಮಾರ್ ಗೋವಿಂದು, ಟೆನ್ನಿಸ್ ಕೃಷ್ಣ ಸೇರಿದಂತೆ ಅನೇಕ ಕಲಾವಿದರು ಆಗಮಿಸಿ ನೂತನ ನಿರ್ಮಾಣ ಸಂಸ್ಥೆಗೆ ಶುಭಕೋರಿದರು.
ಇದೇ ಸಂದರ್ಭದಲ್ಲಿ “ಅನಂತಾಮೃತ” ಎಂಬ ಭಕ್ತಿಗೀತೆಗಳ ಧ್ವನಿಸಾಂದ್ರಿಕೆ ಸಹ ಬಿಡುಗಡೆಯಾಯಿತು. ಕೃಷ್ಣ ಅವರ ನಿರ್ಮಾಣದಲ್ಲಿ ಪ್ರೀತಮ್ ಶಿವಕುಮಾರ್ ನಿರ್ದೇಶಿಸಿರುವ 27 ನಿಮಿಷಗಳ “Streets of ಬೆಂಗಳೂರು” ಕಿರುಚಿತ್ರದ ಪ್ರದರ್ಶನ ಸಹ ನಡೆಯಿತು. ಕಿರುಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಈ ಕಿರುಚಿತ್ರದ ಮೂಲಕ ಪ್ರಜ್ವಲ್ ಗೌಡ ಎಂಬ ಯವನಟನನ್ನು “ಗುಲಾಬ್ ಪ್ರೊಡಕ್ಷನ್ಸ್” ಮೂಲಕ ಚಿತ್ರರಂಗಕ್ಕೆ ಪರಿಚಯಿಸಲಾಗುತ್ತಿದೆ.