ಯುವ ರಾಜ್‌ಕುಮಾರ್ ಎರಡನೇ ಸಿನಿಮಾ ‘ಎಕ್ಕ’ ರಿಲೀಸ್ ಆಗಿ ಏಳನೇ ದಿನಕ್ಕೆ ಕಾಲಿಟ್ಟಿದೆ.Ekka-Kannada-Movie-Day-6Box-Offcie-Collection
ಒಂದು ವಾರವನ್ನು ಯಶಸ್ವಿಯಾಗಿ ಪೂರೈಸುತ್ತಿರುವ ಯುವ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಸದ್ದು ಮಾಡುತ್ತಿದೆಯೇ? ಸೋಲಿನಿಂದ ಕಂಗೆಟ್ಟು ಹೋಗಿರುವ ಸ್ಯಾಂಡಲ್‌ವುಡ್‌ಗೆ ಆಸರೆ ಆಯಿತೇ. ವೀಕ್ ಡೇಸ್‌ನಲ್ಲಿ ಈ ಸಿನಿಮಾದ ಬಾಕ್ಸಾಫೀಸ್ ಪರ್ಫಾಮೆನ್ಸ್ ಹೇಗಿದೆ? ಅನ್ನೋದನ್ನು ಸಿನಿಮಾ ಮಂದಿ ಲೆಕ್ಕಾಚಾರ ಹಾಕುತ್ತಿದ್ದಾರೆ.
‘ಎಕ್ಕ’ ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಒಂದು. Ekka-Kannada-Movie-Day-6Box-Offcie-Collection ಯುವ ರಾಜ್‌ಕುಮಾರ್ ಎರಡನೇ ಸಿನಿಮಾ ಅನ್ನೋದು ಒಂದು ಕಡೆ, ಆದರೆ, ಅದಕ್ಕಿಂತ ಮುಖ್ಯವಾಗಿ ಮೂರು ನಿರ್ಮಾಣ ಸಂಸ್ಥೆಗಳು ಒಟ್ಟಿಗೆ ಸೇರಿ ಮಾಡುವ ಸಿನಿಮಾವಿದು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್, ಜಯಣ್ಣ ಫಿಲ್ಮ್ಸ್ ಹಾಗೂ ಕೆಆರ್‌ಜಿ ಸ್ಟುಡಿಯೋ ಒಂದಾಗಿ ಈ ಸಿನಿಮಾಗೆ ಹಣ ಹೂಡಿಕೆ ಮಾಡಿದೆ.
ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಬಾಕ್ಸಾಫೀಸ್‌ನಲ್ಲಿ ಗೆದ್ದರೆ, ಇಂತಹ ಹಲವು ಪ್ರಯತ್ನಗಳು ಆಗುತ್ತವೆ. ಈ ಕಾರಣಕ್ಕೆ ‘ಎಕ್ಕ’ ಸಿನಿಮಾದ ಬಾಕ್ಸಾಫೀಸ್ ಪರ್ಫಾಮೆನ್ಸ್ ಅನ್ನು ಸಿನಿಮಾ ಮಂದಿ ತೀರ ಹತ್ತಿರದಿಂದ ವೀಕ್ಷಣೆ ಮಾಡುತ್ತಿದ್ದಾರೆ. ಹಾಗಿದ್ದರೆ, ಯುವ ರಾಜ್‌ಕುಮಾರ್ ನಟನೆಯ ಎರಡನೇ ಸಿನಿಮಾ ಆರನೇ ದಿನ ಗಳಿಸಿದ್ದು ಎಷ್ಟು? ಕಲೆಕ್ಷನ್ ಲಕ್ಷದಲ್ಲಿ ಆಗುತ್ತಿದೆಯಾ? ಕೋಟಿಯಲ್ಲಿ ಆಗುತ್ತಿದೆಯಾ?
‘ಎಕ್ಕ’ 6ನೇ ದಿನ ಗಳಿಸಿದ್ದೆಷ್ಟು?
ಯುವ ರಾಜ್‌ಕುಮಾರ್ ಮಾಸ್ ಸಿನಿಮಾ ‘ಎಕ್ಕ’ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ, ಯುವ ರಾಜ್‌ಕುಮಾರ್ ಮಾಸ್ ಅವತಾರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಅದರಲ್ಲೂ ಯುವ ಮ್ಯಾನರಿಸಂ ರಾಜವಂಶದ ಅಭಿಮಾನಿಗಳಿಗೆ ಕಿಕ್ ಕೊಟ್ಟಿತ್ತು. ಮೊದಲ ಮೂರು ದಿನ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಆಗಿತ್ತು. ಆದರೆ, ವೀಕ್ ಡೇಸ್‌ನಲ್ಲಿ ಕಲೆಕ್ಷನ್ ಲಕ್ಷಕ್ಕೆ ಇಳಿದಿದೆ. ಸ್ಯಾಕ್ನಿಲ್ಕ್.ಕಾಮ್ ಪ್ರಕಾರ ನಿನ್ನೆ ಜುಲೈ 23) ಅಂದರೆ, ಆರನೇ ದಿನ 45 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದ್ದಾಗಿ ವರದಿ ಮಾಡಿದೆ.
ಒಟ್ಟು 6 ದಿನಗಳ ಕಲೆಕ್ಷನ್ ಎಷ್ಟು?
ಸೋಲಿನ ಸುಳಿಗೆ ಸಿಕ್ಕು ಬಳಲಿ ಬೆಂಡಾಗಿದ್ದ ಸ್ಯಾಂಡಲ್‌ವುಡ್‌ಗೆ ‘ಎಕ್ಕ’ ಸಿನಿಮಾ ಆಸರೆಯಾಗಿದ್ದು ಸುಳ್ಳಲ್ಲ. ಥಿಯೇಟರ್ ಅನ್ನೇ ಮರೆತಿದ್ದ ಜನರು ಮತ್ತೆ ಅತ್ತ ಮುಖ ಮಾಡುವಂತಾಗಿದೆ. ಮಲ್ಟಿಪ್ಲೆಕ್ಸ್ ಅಷ್ಟೇ ಅಲ್ಲ, ಸಿಂಗಲ್ ಸ್ಕ್ರೀನ್‌ಗಳಿಗೂ ಜನರು ಲಗ್ಗೆ ಇಡುತ್ತಿದ್ದಾರೆ. ಆದರೆ, ಸ್ಯಾಂಡಲ್‌ವುಡ್ ಮಂದಿಯ ನಿರೀಕ್ಷೆ ಇನ್ನೂ ಇತ್ತು. ಆ ಮಟ್ಟಿಗೆ ‘ಎಕ್ಕ’ ಇನ್ನೂ ರೀಚ್ ಆಗಿಲ್ಲ. ಮುಂದಿನ ದಿನಗಳಲ್ಲಿ ‘ಎಕ್ಕ’ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವ ನಿರೀಕ್ಷೆಯಿದೆ. ಹಾಗಿದ್ದರೆ ಆರು ದಿನಗಳ ಕಲೆಕ್ಷನ್ ಹೀಗಿದೆ.