ದಿಕ್ಕಾಪಾಲಾದ ಡೊಳ್ಳು ಕಲಾವಿದರ ಬದುಕು ಮನಸೊಳಗೆ ಶಬ್ದ ಹೊಮ್ಮಿಸುತ್ತದೆ

dollu kannada movie review

Dollu 4/5

ಹಣ ಸಂಪಾದನೆ ಎಲ್ಲರ ಆದ್ಯತೆ. ಹಣ ಸಂಪಾದಿಸಬೇಕು. ಎಲ್ಲ ಬಗೆಯ ಸುಖ ಅನುಭವಿಸಬೇಕು. ತಲೆತಲಾಂತರಗಳಿಂದ ಬೆಳೆದು ಬಂದಿರುವ ಕಲೆ, ಸಂಪ್ರದಾಯಗಳನ್ನು ಉಳಿಸಬೇಕು, ಬೆಳೆಸಬೇಕು ಅಂತಾ ಯಾರಾದರೂ ಬಯಸಿದರೆ ಜಗತ್ತಿನ ಇವತ್ತಿನ ನಿಯಮಕ್ಕೆ ವಿರುದ್ದವಾಗಿ ಯೋಚಿದಂತಾಗುತ್ತದೆ. ಅಂಥವರು ಸಮಾಜದ ಕಣ್ಣಿಗೆ ಅಪ್ರಯೋಜಕರಾಗಿ ಕಾಣಿಸಿಬಿಡುಯ್ತಾರೆ.dollu kannada movie

ಎಲ್ಲೆಲ್ಲಿಂದಲೋ ಬಂದು ಬೆಂಗಳೂರು ಸೇರಿದವರ ಪಾಡಂತೂ ಥೇಟು ಮಷಿನ್ನುಗಳಂತಾಗಿರುತ್ತದೆ. ನಮ್ಮವರು ತಮ್ಮವರಂತಾ ಯಾರಾದರೂ ಹುಡುಕಿಕೊಂಡು ಬರುತ್ತಾರೆ ಅಂದುಕೊಳ್ಳಿ; ಅವರ ಜೊತೆಗೆ ಕೂತು ನಾಲ್ಕು ಮಾತಾಡುವ ವ್ಯವಧಾನ ಯಾರಿಗೂ ಇರೋದಿಲ್ಲ. ಒಬ್ಬೊಬ್ಬರಿಗೂ ಇಲ್ಲಿ ಅವರದ್ದೇ ಆದ ಧಾವಂತ, ಮುಂದೆ ಮುಂದೆ ಹೋಗಿ ನಿಲ್ಲುವ ಚಡಪಡಿಕೆ. – ಇಂಥ ಎಲ್ಲ ವಿಚಾರಗಳನ್ನು ಒಳಗೊಂಡ ಸಿನಿಮಾ ಡೊಳ್ಳು.
ಯಾವ ಕಾರಣಕ್ಕೂ ಇದನ್ನು ದುಡ್ಡಿಗೆ ಮಾರಿಕೊಳ್ಳಬೇಡ ಅಂತಾ ಹೇಳಿ ಅಪ್ಪ ಕಲಿಸಿದ ಡೊಳ್ಳು ವಿದ್ಯೆ. ಬೆಳೆದ ಹುಡುಗ ತನ್ನದೇ ತಂಡ ಕಟ್ಟಿಕೊಂಡು ಡೊಳ್ಳು ಕಾರ್ಯಕ್ರಮ ನೀಡುತ್ತಾ ಬರುತ್ತಿರುತ್ತಾನೆ. ಆಯೋಜಕರು ನೀಡುವ ಪುಡಿಗಾಸು ಯಾವುದಕ್ಕೂ ಸಾಲುವುದಿಲ್ಲ. ಎಷ್ಟು ದಿನಾಂತ ಹೀಗೇ ಬದುಕು ಸಾಗಿಸೋದು? ನಾವೂ ಎಲ್ಲರಂತೆ ಜೀವನವನ್ನು ಅನುಭವಿಸೋದು ಬೇಡವಾ ಅನ್ನೋದು ತಂಡದ ಉಳಿದವರ ಪ್ರಶ್ನೆ. ಇದಕ್ಕೆ ಉತ್ತರದಂತೆ ರೂಪುಗೊಂಡಿರುವ ಚಿತ್ರ ಡೊಳ್ಳು.dollu kannada movie

ದಡ್ಡು ಯಾರನ್ನೂ ಒಂದು ಮಾಡೋದಿಲ್ಲ.. ಯಾವತ್ತಿದ್ರೂ ಅದು ಎಲ್ಲರನ್ನೂ ದೂರ ಮಾಡುತ್ತೆ – ಇದು ತಂದೆ ಮಗನಿಗೆ ಹೇಳುವ ಮಾತು. ಈ ಮಾತನ್ನು ನಿಜವಾಗಿಸುವ ನಿಟ್ಟಿನಲ್ಲಿ ಇಲ್ಲಿನ ಪಾತ್ರಗಳೂ ವರ್ತಿಸುತ್ತವೆ. ಡೊಳ್ಳು ಬಡಿಯುತ್ತಾ ಬದುಕು ಸವೆಸುವುದು ನಮಗಿಷ್ಟವಿಲ್ಲ ಅಂತಾ ತಂಡದ ಸದಸ್ಯರೆಲ್ಲಾ ಬೆಂಗಳೂರಿಗೆ ಬಂದು ನೆಲೆಸುತ್ತಾರೆ. ನಾಯಕ ಮಾತ್ರ ಏನೇ ಆದರೂ ನಾನು ಈ ವಾದ್ಯದ ನಂಟು ಬಿಡುವುದಿಲ್ಲ ಅಂತಾ ತೀರ್ಮಾನಿಸುತ್ತಾನೆ. ಇಷ್ಟೆಲ್ಲದರ ನಡುವೆ ವಿಘಟನೆಗೊಂಡ ತಂಡ ಮತ್ತೆ ಒಂದು ಸೇರುತ್ತದಾ? ಇಲ್ಲವಾ? ಅನ್ನೋದು ಕತೆಯ ಗುಟ್ಟು.dollu kannada movie watching siddaramaiah
ಡೊಳ್ಳು ಕರ್ನಾಟಕದ ಮಟ್ಟಿಗೆ ಅತಿ ಪುರಾತನ ವಾದ್ಯ. ಜನಪದ ಕತೆಗಳಲ್ಲೂ ಡೊಳ್ಳು ಪ್ರಾಮುಖ್ಯತೆ ಪಡೆದಿದೆ. ಡೊಳ್ಳು ರೂಪುಗೊಂಡಿದ್ದರ ಬಗ್ಗೆ ಪೌರಾಣಿಕ ಕತೆಗಳೂ ಇವೆ. ಇಂಥ ಡೊಳ್ಳು ಗಂಡು ಕಲೆ ಅನ್ನಿಸಿಕೊಂಡಿರುವುದು ವಿಪರ್ಯಾಸ. ಅಂದರೆ, ಈ ವಾದ್ಯವನ್ನು ಗಂಡಸರಷ್ಟೇ ನುಡಿಸಬೇಕು ಎನ್ನುವ ಸಂಪ್ರದಾಯ ಇದೆ. ಆದರೆ, ಚಿತ್ರದ ಕತೆಯಲ್ಲಿ ಕೂಡಾ ಹೆಣ್ಣುಮಕ್ಕಳ ಡೊಳ್ಳು ವಿದ್ಯೆ ಕಲಿಯುವ ಇಂಗಿತ ವ್ಯಕ್ತಪಡಿಸುತ್ತಾರೆ. ಅದು ಕಡೆಗೂ ಸಾಧ್ಯವಾಗುತ್ತದಾ ಇಲ್ಲವಾ ಅನ್ನೋದು ಕೂಡಾ ಚಿತ್ರದಲ್ಲಿ ತೆರೆದುಕೊಂಡಿದೆ.dollu kannada movie watching siddaramaiah

ನಿರ್ದೇಶಕ ಸಾಗರ್ ಪುರಾಣಿಕ್ ಮೊದಲ ಚಿತ್ರದಲ್ಲೇ ಇಂಥದ್ದೊಂದು ಮಣ್ಣಿನ ಘಮವಿರುವ ಕತೆ ಆಯ್ಕೆ ಮಾಡಿಕೊಂಡಿರೋದು ಮೆಚ್ಚಬೇಕಿರುವ ವಿಚಾರ. ಕಥೆಯನ್ನು ಎಲ್ಲೂ ಅತಿರಂಜಕಗೊಳಿಸದೆ, ರೋಚಕತೆಯನ್ನು ಬೆರೆಸದೆ ಸರಳವಾಗಿ ನಿರೂಪಿಸಿದ್ದಾರೆ. ಸರಾಗವಾಗಿ ನೋಡಿಸಿಕೊಂಡು ಹೋಗುವಂತೆ ಶ್ರೀನಿಧಿ ಡಿ.ಎಸ್. ಚಿತ್ರಕತೆ ರೂಪಿಸಿದ್ದಾರೆ. ನಾಯಕನಟ ಕಾರ್ತಿಕ್ ಮಹೇಶ್ ನಟನೆ ಸಹಜವಾಗಿದೆ. ತಂಡದ ಉಳಿದ ಸದಸ್ಯರ ಆಯ್ಕೆ ಕೂಡಾ ಪರ್ಫೆಕ್ಟ್. ಅದರಲ್ಲೂ ಸಿದ್ದನ ಪಾತ್ರಧಾರಿಯ ನಟನೆ ಚೆಂದ. ನಾಯಕಿ ನಿಧಿ ಹೆಗಡೆಯ ಮಾತಿನ ಭಾಷೆ, ಲಿಪ್ ಸ್ಟಿಕ್ಕು, ಮೇಕಪ್ಪು ಹಳ್ಳಿಯ ವಾತಾವರಣಕ್ಕೆ ಅಸಹಜ ಅನ್ನಿಸುತ್ತದೆ. ಬಾಬು ಹಿರಣ್ಣಯ್ಯರ ಪಾತ್ರದ ಕ್ರಾಂತಿಕಾರಿ ಗುಣಕ್ಕೆ ಉಘೇ ಅನ್ನಲೇಬೇಕು. ಸಾಗರ್, ಶ್ರೀನಿಧಿ ಮುಂತಾದವರ ಈ ತಂಡದಿಂದ ಇಂಥ ಸಾಕಷ್ಟು ಉತ್ತಮ ಚಿತ್ರಗಳನ್ನು ನಿರೀಕ್ಷಿಸಬಹುದು.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…