ಅಂದು ದಿನಾಂಕ 14ನೇ ಡಿಸೆಂಬರ್. ಆ ದಿನ ಕಳೆದು ಇಲ್ಲಿಗೆ ಕೇವಲ ಎರಡು ದಿನವಾಗಿದೆ ಅಷ್ಟೇ. ಆ ದಿನದ ಘಟನೆಯನ್ನು ನಿರ್ದೇಶಕರಾದ ಸಿದ್ದು ಪೂರ್ಣ ಚಂದ್ರ ಇನ್ನು ಮರೆತಿಲ್ಲ. ಅವರು ಸ್ವಲ್ಪ ಸಂಕೋಚದ ಮನೋಭಾವನೆಯ ವ್ಯಕ್ತಿಯಾದ ಕಾರಣ. ಈ ವಿಷಯವನ್ನು ಮುಚ್ಚಿಟ್ಟಿದ್ದಾರೆ. ಹಾಗಂದ ಮಾತ್ರಕ್ಕೆ, ಸತ್ಯ ಗುಟ್ಟಾಗಿ ಉಳಿಯ ಬೇಕಲ್ಲ.
ಅಂದು ಬೆಳಗ್ಗೆಯೇ ಅವರಿಗೆ ಒಂದು ಕಾಲ್ ಬಂತು. ಅಲ್ಲಿಂದ ಒಂದು ಹೆಣ್ಣು ದ್ವನಿ ಮಾತು ಪ್ರಾರಂಭಿಸಿತು.
; ಹಲೋ ನೀವು ಡೈರೆಕ್ಟರ್ ಸಿದ್ದು ಪೂರ್ಣ ಚಂದ್ರ ಅವರು ಅಲ್ವಾ?
; ಹೌದು, ತಾವು ಯಾರೂ.
; ನಾನು ರಶ್ಮಿ ಅಂತ, ನಿಮ್ಮ ಬ್ರಹ್ಮ ಕಮಲ ಚಿತ್ರದ ಕುರಿತು ಮಾತಾಡೋದಿದೆ, ನಿಮ್ಮ ಚಿತ್ರಕ್ಕೆ ಸರ್ಕಾರದ ಒಂದು ಮಾನ್ಯತೆಯೂ ಸಿಗಲಿದೆ. ನೀವು ಇಂದೆ ಬಂದು ಬೇಟಿ ಮಾಡಿ. ಬರ್ತಾ ಸಿನಿಮಾ ಡಿಸಿಪಿ ತನ್ನಿ ಎಂದರು.
; ಆ ಕ್ಷಣದ ಮಾಹಿತಿಯನ್ನು ಯಾರು ತಾನೇ ನಿರಾಕರಿಸಲು ಸಾದ್ಯ.
ಸಿದ್ದು ರವರು ಎಂದಿಗಿಂತಲೂ ಮುತುವರಜಿಯಲ್ಲೆ ಹೊರಟರು.
ಅವರು ಹೇಳಿದ ಸಮಯಕ್ಕೆ ಚಾಮುಂಡೇಶ್ವರಿ ಸ್ಟುಡಿಯೋ ಸೇರಿದರು. ಅಲ್ಲಿ ಇವರನ್ನು ಕರೆದ ರಶ್ಮಿ ಇರಲಿಲ್ಲ. ಅವರಿಗೆ ಕಾಲ್ ಮಾಡಿದರೆ ಸುಚ್ ಆಫ್. ನಿರ್ದೇಶಕರಿಗೆ ಗೊಂದಲವಾಗಿತು. ಅಲ್ಲಿ ಮತ್ತೊಬ್ಬರು ಬಂದು,
; ನೀವು ಬ್ರಹ್ಮ ಕಮಲದವರ? ಎಂದರು.
; ಹೌದು.
; ಡಿಸಿಪಿ ತಂದಿದ್ದೀರಾ?
; ಹಾ..
; ಕೊಡಿ ಅದನ್ನ. ಎಂದು ಕೈಯಲ್ಲಿದ್ದ ಡಿಸಿಪಿ ಯನ್ನೂ ತೆಗೆದುಕೊಂಡು ಹೋದರು.
ನೀವು ನಂಬಿದರೆ ನಂಬಿ ಬಿಟ್ರೆ ಬಿಡಿ, ನಿರ್ದೇಶಕರಿಗೆ ಹಾಗೆ ಆಗಬಾರದಿತ್ತು. ಅಲ್ಲಿಂದ ಸರಿ ಸುಮಾರು ಎರಡು ಗಂಟೆ ಅಲ್ಲೇ ಕಾದು ಕುಂತರು. ಆ ಹೆಣ್ಣಿನ ದ್ವನಿ ಕೇಳಿ ಹೊರಟು ಬಂದ ಅವರಿಗೆ ಚೇ ಎನ್ನುವಷ್ಟು ಬೇಸರ ಆಗಿತಂತೆ. ಆಮೇಲೆ ಏನಾಯ್ತಂತೆ ಗೊತ್ತಾ!!!!???
ಸೆನ್ಸಾರ್ ಆಫೀಸರ್ ಒಳಗೆ ಕರೆದು ಹಲೋ ಮಿಸ್ಟರ್ ಯು .. ಎಂದರಂತೆ,
ನೋ ಕಟ್, ನೋ ಮ್ಯೂಟ್, ಯುವರ್ ಬ್ರಹ್ಮ ಕಮಲ ಇಸ್ ಯೂನಿವರ್ಸಲ್ ಫಿಲಂ. ಎಂದರಂತೆ.
: ಧನ್ಯವಾದಗಳು ಹೇಳಿ ಹೊರಗೆ ಬಂದರಂತೆ,
ಆ ರಶ್ಮಿ ರವರು ಮತ್ತೆ ಕಾಲ್.
ಸರ್ ಸಾರಿ ನನ್ನ ಮೊಬೈಲ್ ಬ್ಯಾಟರಿ ಲೋ ಆಗಿ ಸತ್ತು ಹೋಗಿತ್ತು. ಆಯ್ತಾ? ಏನಾಯ್ತು? ಎಂದರಂತೆ.
; ನೋ ಕಟ್. ನೋ ಮ್ಯೂಟ್. ಕ್ಲಿಯರ್ U ಎಂದು ಅವರಿಗೂ ನನಗೂ ಹೇಳಿದರು. ಇದು ಬ್ರಹ್ಮ ಕಮಲ ಸಿನಿಮಾಗೆ ದೊರೆತ U ಸರ್ಟಿಫಿಕೇಟ್ ವಿಷಯ. ಅದನ್ನು ಕೇಳಿ ನಾನಂದೆ
ಕಗ್ರಾಜಿಲೀಸನ್ ಬ್ರದರ್. ಹಬ್ಬಬ್ಬ ಲಾಟ್ರಿ