ಎದೆ ಝಲ್ ಎನ್ನಿಸುವ ಧೀರನ್!

ಕೆಲವೊಮ್ಮೆ ನಮ್ಮ ಸುತ್ತಲಿನ ವಿದ್ಯಮಾನಗಳು ನಮ್ಮ ಬಯಕೆ, ಗ್ರಹಿಕೆ, ಗುರಿಗಳ ವಿರುದ್ಧವಾಗೇ ಜರುಗುತ್ತಿರುತ್ತವೆ. ನಮ್ಮದಲ್ಲದ ಜೀವನದಲ್ಲಿ ಸಿಕ್ಕಿಕೊಳ್ಳಬೇಕಾಗುತ್ತದೆ. ಏನೇನೋ ಆಗಲು ಬಯಸಿದವರ ಬದುಕು ಯಾವುದೋ ತಿರುವು ತೆಗೆದುಕೊಂಡು ಇನ್ನೆಲ್ಲಿಗೋ ಬಂದು ನಿಂತುಬಿಡುತ್ತದೆ. ಇದಕ್ಕೆ ಜನ ಇಟ್ಟಿರುವ ಹೆಸರು ʻಹಣೇಬರಹʼ!maxresdefault 4 e1653744001461

ತನ್ನದೇ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು, ಹಣ ಗಳಿಸಬೇಕು. ಆ ಮೂಲಕ ಅನಾರೋಗ್ಯದಿಂದ ವ್ಹೀಲ್ ಚೇರ್ ಗೆ ಒರಗಿದ ಅಮ್ಮನ ದೇಖರೇಕಿ ನೋಡಿಕೊಳ್ಳಬೇಕು. ಸ್ವಂತ ಮನೆ ಖರೀದಿಸಬೇಕು, ಮದುವೆಯಾಗಿ ನೆಮ್ಮದಿಯ ಜೀವನ ಕಟ್ಟಿಕೊಳ್ಳಬೇಕು – ಹೀಗೆ ಅನೇಕ ʻಬೇಕುʼಗಳ ಉದ್ದೇಶಕ್ಕಾಗಿ ಶ್ರಮಿಸುವ ಹೀರೋ. ಒಳ್ಳೆ ಸಂಪಾದನೆ, ತನಗೊಪ್ಪುವ ಹುಡುಗಿಯ ಜೊತೆಗೆ ಎಲ್ಲವೂ ಕೈಗೂಡಿತು ಅಂದುಕೊಳ್ಳುವಷ್ಟಲ್ಲಿ ನಡೆಯಬಾರದ ಘಟನೆಯೊಂದು ನಡೆದಿರುತ್ತದೆ. ಸಾಫ್ಟ್ ವೇರ್ ಹುಡುಗ ಹಾರ್ಡ್ ಕೋರ್ ಆಗಿ ಮಾರ್ಪಟ್ಟಿರುತ್ತಾನೆ. ಏನದು ಘಟನೆ? ಯಾರಿಂದ ಆಗಿದ್ದು? ಅಂತೆಲ್ಲಾ ವಿವರವಾಗಿ ಹೇಳಿರುವ ಚಿತ್ರ ಧೀರನ್!maxresdefault 5 e1653744030998
ಐದು ದಿನ ಕೆಲಸ ಮಾಡಿ ಎರಡು ದಿನ ಪಾರ್ಟಿ, ಮೋಜು ಮಸ್ತಿ ಅಂತಾ ಕಳೆದುಹೋಗುವ ಟೆಕ್ಕಿಗಳ ನಡುವೆ ಚೆಂದದ ಬದುಕು ಕಟ್ಟಿಕೊಳ್ಳಬೇಕು ಅಂತಾ ಹವಣಿಸುವ ಹುಡುಗನ ಬದುಕಲ್ಲಿ ನಡೆಯುವ ಘೋರ ಘಟನೆಗಳು, ಸಂಬಂಧಿಕರ ದುರ್ಬುದ್ದಿ, ನೀಚ ಪೊಲೀಸರ ಒಳಮರ್ಮ, ಪ್ರಾಮಾಣಿಕ ಪೊಲೀಸನ ತಾಳ್ಮೆ, ಡ್ರಗ್ ಮಾಫಿಯಾ… ಹೀಗೆ ಸಾಷಕ್ಟು ವಿಚಾರಗಳನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಹದವಾಗಿ ಕಟ್ಟಿರುವ ಚಿತ್ರ ಧೀರನ್. ಚಿತ್ರದ ನಿರೂಪಣೆಗೆ ಇನ್ನೊಂದಿಷ್ಟು ವೇಗ ಬೇಕಿತ್ತು. ರಚನೆ, ನಿರ್ದೇಶನದ ಜೊತೆಗೆ ನಾಯಕನಾಗಿಯೂ ಕಾಣಿಸಿರುವ ಸ್ವಾಮಿ ನಾಲ್ಕು ಚಿತ್ರಗಳ ಅನುಭವಿಯಂತೆ ಪಾತ್ರ ಪೋಷಣೆ ಮಾಡಿದ್ದಾರೆ. ನಿರ್ದೇಶನದಲ್ಲಿ ಇನ್ನೊಂದಿಷ್ಟು ಪಳಗಬೇಕಷ್ಟೆ. ಸಂಕಲನ, ಸಂಗೀತಗಳೆಲ್ಲಾ ಹೇಳಿಕೊಳ್ಳುವ ಮಟ್ಟಿಗಿಲ್ಲ. ಆರಂಭದಲ್ಲಿ ಬರುವ ಐಟಂ ಸಾಂಗಿನ ಅಗತ್ಯವೂ ಇರಲಿಲ್ಲ. ದುಷ್ಟ ಪೊಲೀಸನಾಗಿ ಭಾಸ್ಕರ್ ಅಬ್ಬರಿಸಿದ್ದಾರೆ. ಇವರು ಸ್ಮಾರ್ಟ್ ವಿಲನ್ ಆಗಿ ಧಾರಾಳವಾಗಿ ಇಲ್ಲಿ ಎದ್ದು ನಿಲ್ಲಬಹುದು. ಪ್ರಮೋದ್ ಶೆಟ್ಟರು ಎಂದಿನಂತೆ ತಮ್ಮನ್ನು ತಾವು ಅರ್ಪಿಸಿಕೊಂಡು ನಟಿಸಿದ್ದಾರೆ! ಬಹುತೇಕ ಹೊಸಬರೇ ಇದ್ದರೂ, ನೋಡಿಸಿಕೊಳ್ಳುವ ಗುಣ ಇರುವ ʻಧೀರನ್ʼನನ್ನು ಜನ ಧಾರಾಳವಾಳಿ ಸ್ವೀಕರಿಸಬಹುದು. ಓಟಿಟಿ, ಟೀವಿಗಳಿಗೂ ಈ ಚಿತ್ರ ಒಳ್ಳೆ ಕಂಟೆಂಟ್ ಆಗಲಿದೆ…

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…