ಹಿಂದೆ ಒಂದು ಕಾಲ ಇತ್ತು. ಚಿಕ್ಕ ಮಕ್ಕಳು ಕೂಡ ತಮ್ಮ ನೆಚ್ಚಿನ ನಟಿ ರಮ್ಯಾ ಎಂದು ಹೇಳುವ ಕಾಲ ಅದು.Darshan-Sawjanya-and-Ramya
ಗ್ಲ್ಯಾಮರ್ ಹಾಗೂ ಗ್ರಾಮರ್ ನಿಂದ ಅಭಿಮಾನಿ ಬಳಗವನ್ನ ಹಾಗೂ ಭಗ್ನ ಪ್ರೇಮಿಗಳನ್ನ ಒಮ್ಮಿಂದೊಮ್ಮೆಲೆ ಸೃಷ್ಟಿಸಿಕೊಂಡಿದ್ದ ರಮ್ಯ ಮೋಹಕತಾರೆ ಎಂಬ ಪಟ್ಟವನ್ನ ಅಲಂಕರಿಸಿದಾಗ್ಲೇ ರಾಷ್ಟ್ರ ರಾಜಕಾರಣದಲ್ಲಿ ಕಳೆದು ಹೋದರು. Darshan-sawjanya-and-Ramya ಸಕಾರಾತ್ಮಕವಾಗಿ, ನಕಾರಾತ್ಮಕವಾಗಿ, ಕಾಲೆಳೆಸಿಕೊಂಡ, ಉಗಿಸಿಕೊಂಡ ಏಕೈಕ ಗಟ್ಟಿಗಿತ್ತಿ ಎಂಬ ಹೆಗ್ಗಳಿಕೆಗೂ ರಾಷ್ಟ್ರ ರಾಜಕಾರಣದಲ್ಲಿ ರಮ್ಯ ಪಾತ್ರವಾದರು.
ಇಂಥಾ ರಮ್ಯಾ ಮೊನ್ನೆ ಮೊನ್ನೆಯಷ್ಟೇ ಮತ್ತೊಮ್ಮೆ ದರ್ಶನ್ ವಿರುದ್ದ ಕೆಂಡ ಕಾರಿದ್ದರು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ರಮ್ಯಾ ಅವರ ಈ ಮಾತು ಸಹಜವಾಗಿ ದರ್ಶನ್ ಅವರ ಅಭಿಮಾನಿಗಳನ್ನು ಕೆರಳಿಸಿತ್ತು. ಮುಂದೆ ಏನೆಲ್ಲಾ ಆಯ್ತು ಎಂದು ಇಲ್ಲಿ ಪ್ರತ್ಯೇಕವಾಗಿ ಹೇಳಬೇಕಿಲ್ಲ.
ತಮ್ಮ ಮೇಲೆ ನಡೆದ ನಿರಂತರ ಸೈಬರ್ ದಾಳಿಯಿಂದ ಕಂಗಾಲಾದ ರಮ್ಯಾ ನಿನ್ನೆ ಮತ್ತೊಮ್ಮೆ ತಮ್ಮ ಅಸಮಾಧಾನ ಹೊರ ಹಾಕಿದ್ದರು.
ಅಭಿಮಾನದ ಸೋಗಿನಲ್ಲಿ ದರ್ಶನ್ ಅವರ ಕೆಲ ಅಂಧಾಭಿಮಾನಿಗಳನ್ನು ಉದ್ದೇಶಿಸಿ ಮತ್ತೊಂದು ಫೋಸ್ಟ್ ಹಂಚಿಕೊಂಡಿದ್ದರು. ನಿಮ್ಮ ಯೋಗ್ಯತೆ ಇಷ್ಟೇ ಎಂದು ಕಿಡಿ ಕಾರಿದ್ದರು. ಇದೀಗ ರಮ್ಯಾ ಮತ್ತೊಮ್ಮೆ ಧಗಧಗಿಸಿದ್ದಾರೆ. ನಾನು ಯಾವ ನನ್ ಮಗನಿಗೆ ಹೆದರಲ್ಲ ಎಂದು ಹೇಳಿದ್ದಾರೆ.
ಈ ಕುರಿತು ”ನ್ಯೂಸ್ ಫಸ್ಟ್” ಜೊತೆ ಮಾತನಾಡಿರುವ ರಮ್ಯಾ ನನಗೆ ಮಾತ್ರ ಅಲ್ಲ ಮೊದಲಿಂದ ಅವರು ಸುದೀಪ್ ಆಗಲಿ, ಯಶ್ ಆಗಲಿ, ಅವರ ಹೆಂಡತಿ ಮಕ್ಕಳನ್ನು ಕೂಡ ಬಿಟ್ಟಿಲ್ಲ ಎಂದು ಹೇಳಿದ್ದಾರೆ. ಯಾವಾಗಲೂ ಅಶ್ಲೀಲ ಪದಗಳನ್ನೇ ಬಳಸುತ್ತಾ ಬಂದಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಮುಂದುವರೆದು ರೇಣುಕಾಸ್ವಾಮಿ ಅವರಿಗೂ ಇವರಿಗೂ ಏನು ವ್ಯತ್ಯಾಸ ಇದೆ ಎಂದು ಕೇಳಿರುವ ರಮ್ಯಾ, ನಾನು ಸುಪ್ರೀಂ ಕೋರ್ಟ್ ನಲ್ಲಿ ನಡೆದ ವಿಚಾರಣೆಯ ಕುರಿತು ಮಾತನಾಡಿದ್ದೇ, ಅಷ್ಟಕ್ಕೇ ನನಗೆ ಸಾಕಷ್ಟು ಮೆಸೇಜ್ ಗಳು ಬಂದಿವೆ ಆ ಮೆಸೇಜ್ ಗಳನ್ನು ನಾನು ಅವರ ಮುಖವಾಡ ಕಳಚಲೆಂದೇ ಹಾಕಿದ್ದೀನಿ ಎಂದು ಹೇಳಿದ್ದಾರೆ.
ಇಂಥವರಿಂದಲೇ ನಮ್ಮ ಸಮಾಜ ಹಾಳಾಗುತ್ತಿದೆ ಎಂದು ಹೇಳಿರುವ ರಮ್ಯಾ, ಸಮಾಜಕ್ಕೆ ನಾವು ಯಾವ ರೀತಿ ಸಂದೇಶವನ್ನು ಕೊಡುತ್ತಿದ್ದೇವೆ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ. ಈ ಸಮಾಜದಲ್ಲಿ ಹೆಣ್ಮಕ್ಕಳು ಸೇಫ್ ಇಲ್ಲವೇ ಇಲ್ಲ ಬಿಡಿ ಇಂಥವರಿಂದಲೇ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ ನಡೆಯುತ್ತಿರುವುದು ಎಂದು ಹೇಳಿದ್ದಾರೆ. ಇವರಿಗೆ ಸೌಜನ್ಯ ಕೇಸ್‌ನಲ್ಲಿ ನ್ಯಾಯ ಬೇಕು ಅಂತೇ ಎಂಥಾ ಜೋಕ್ ನೋಡಿ ಎಂದು ಕೂಡ ರಮ್ಯಾ ”ನ್ಯೂಸ್ ಫಸ್ಟ್” ಜೊತೆ ನಡೆಸಿದ ಈ ಮಾತುಕಥೆಯಲ್ಲಿ ಹೇಳಿದ್ದಾರೆ.
ಮುಂದುವರೆದು ನನಗೆ ತುಂಬಾ ಜನ ಬೆಂಬಲ ಕೊಟ್ಟಿದ್ದಾರೆ, ಮೆಸೇಜ್ ಎಲ್ಲಾ ಮಾಡಿದ್ದಾರೆ ಎಂದು ಹೇಳಿರುವ ರಮ್ಯಾ ನಿಮಗೆಲ್ಲಾ ನಾನು ಹೇಗೆ ಅಂತ ಗೊತ್ತು, ಬೆಂಬಲ ಇರಲಿ.. ಇಲ್ಲದಿರಲಿ.. ನಾನು ಯಾವತ್ತು ಅನ್ಯಾಯದ ವಿರುದ್ದ ಹೋರಾಡುತ್ತೇನೆ ಎಂದು ಹೇಳಿದ್ದಾರೆ. ಇವರೆಲ್ಲರ ಮುಖವಾಡ ನಾನು ಕಳಚಿ ತೀರುತ್ತೇನೆ ಎಂದು ಶಪಥವನ್ನು ಕೂಡ ಮಾಡಿದ್ದಾರೆ.
ಯಶ್ ಅವರ ಮಕ್ಕಳನ್ನು ಕೂಡ ಇವರು ಬಿಟ್ಟಿಲ್ಲ, ಈ ಕುರಿತು ನಾನು ಎರಡು ವರ್ಷದ ಹಿಂದೆ ಫೋಸ್ಟ್ ಮಾಡಿದ್ದೇ ಅಷ್ಟು ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಹೇಳಿರುವ ರಮ್ಯಾ ”ಫ್ಯಾನ್ ವಾರ್”ನಾ ನಾನು ಅರ್ಥ ಮಾಡಿಕೊಳ್ಳಬಲ್ಲೇ ಆದರೆ ಈ ಥರ, ಈ ಥರ ಸಮಾಜದಲ್ಲಿ ನಾವು ಸುಮ್ಮನೆ ಇರಬೇಕಾ ? ಹೆದರಿಕೊಂಡು.. ಇವತ್ತು ತಪ್ಪು ಮಾಡೋರು ಯಾರು ಹೆದರುತ್ತಿಲ್ಲ. ತಪ್ಪು ಮಾಡದಿರುವವರು ಹೆದರಿಕೊಂಡು ಕುಳಿತುಕೊಂಡಿದ್ದಾರೆ. ಯಾವ ವಿಷ್ಯದ ಬಗ್ಗೆನೂ ಮಾತನಾಡುತ್ತಿಲ್ಲ ಎಂದು ತಮ್ಮ ಮನದ ನೋವು, ಬೇಸರವನ್ನು ಹೊರಹಾಕಿದ್ದಾರೆ.