‌‘ಚೇಸ್’ ಚಿತ್ರದ ಹೀರೋ ಮ್ಯಾಕ್ಸ್ ಡಾಗ್!

ಕನ್ನಡ ಚಿತ್ರರಂಗದಲ್ಲಿ ಶ್ವಾನಗಳನ್ನು ಬಳಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ‘777 ಚಾರ್ಲಿ’ ಘೋಷಣೆಯಾದ ಮೇಲೆ, ನಾನು ಮತ್ತು ಗುಂಡ ಎಂಬ ಶ್ವಾನದ ಕುರಿತಾದ ಚಿತ್ರ ಪ್ರಾರಂಭವಾಯಿತು. ಈ ವಾರ ಬಿಡುಗಡೆಯಾಗುತ್ತಿರುವ ‘ಚೇಸ್’ ಚಿತ್ರದಲ್ಲೂ ಮ್ಯಾಕ್ಸ್ ಎಂಬ ಶ್ವಾನ ಪ್ರಮುಖ ಪಾತ್ರ ವಹಿಸುತ್ತಿದೆ.chase kannada movie

ಈ ಚಿತ್ರದ ಕುರಿತು ಮಾತನಾಡುವ ಮ್ಯಾಕ್ಸ್ನ ತರಬೇತುದಾರ, ‘ಈ ಚಿತ್ರದಲ್ಲಿ ಮ್ಯಾಕ್ಸ್ ಜೊತೆಗೆ ಅತೀ ಹೆಚ್ಚು ನಟಿಸಿರುವುದು ರಾಧಿಕಾ ಮೇಡಮ್. ಆರಂಭದಲ್ಲಿ ಅವರಿಗೆ ಸ್ವಲ್ಪ ಭಯವಿತ್ತು. ಮೇಲಾಗಿ ಮೂಕಪ್ರಾಣಿಯಿಂದ ನಟನೆ ತೆಗೆಸುವುದರ ಹಿಂದೆ ಹಲವರ ಕೈವಾಡವಿರುತ್ತದೆ. ಮುಖ್ಯವಾಗಿ ನಾಯಿಯು ಆರಾಮವಾಗಿರುವಂತೆ ನೋಡಿಕೊಳ್ಳಬೇಕು. ಅದು ಎಷ್ಟು ಆರಾಮಾಗಿರುತ್ತದೋ, ಅಷ್ಟು ಚೆನ್ನಾಗಿ ಕೆಲಸ ಮಾಡುತ್ತದೆ. ಹಾಗಾಗಿ, ಅದನ್ನು ಚೆನ್ನಾಗಿ ನೋಡಿಕೊಳ್ಳುವುದು ಬಹಳ ಮುಖ್ಯ. ಈ ಚಿತ್ರಕ್ಕಾಗಿ ಹಲವು ದಿನಗಳ ಕಾಲ ಮ್ಯಾಕ್ಸ್ ಚಿತ್ರೀಕರಣ ಮಾಡಿದ್ದಾನೆ. ತೆರೆಯ ಮೇಲೆ ಅರ್ಧ ಗಂಟೆಯವರೆಗೂ ಕಾಣಿಸಿಕೊಳ್ಳುತ್ತಾನೆ’ ಎನ್ನುತ್ತಾರೆ.chase kannada movie

ರಾಧಿಕಾ ನಾರಾಯಣ್ ಸಹ ಮ್ಯಾಕ್ಸ್ ಜೊತೆಗೆ ನಟಿಸಿದ ಅನುಭವವನ್ನು ಹಂಚಿಕೊಳ್ಳುತ್ತಾರೆ. ‘ಈ ಚಿತ್ರ ನನಗೆ ಹಲವು ಕಾರಣಗಳಿಗೆ ಬಹಳ ವಿಶೇಷ. ಏಕೆಂದರೆ, ಇದುವರೆಗೂ ಬೇರೆ ಚಿತ್ರಗಳಲ್ಲಿ ಮಾಡದ ಕೆಲವು ವಿಷಯಗಳನ್ನು ನಾನು ಈ ಚಿತ್ರದಲ್ಲಿ ಮಾಡೊದ್ದೇನೆ. ಮೊದಲಿಗೆ ನಾನು ಶ್ವಾನದ ಜೊತೆಗೆ ನಟನೆ ಮಾಡಿದ್ದೇನೆ. ಈ ಚಿತ್ರದಲ್ಲಿ ಮೊದಲ ಬಾರಿಗೆ ಫೈಟ್ಗಳನ್ನು ಸಹ ಮಾಡಿದ್ದೇನೆ. ಇದೊಂದು ವಿಶೇಷವಾದ ಪಾತ್ರ. ಈ ಬಗ್ಗೆ ಹೆಚ್ಚಿಗೆ ಹೇಳುವುದಕ್ಕೆ ಸಾಧ್ಯವಿಲ್ಲ’ ಎನ್ನುತ್ತಾರೆ ರಾಧಿಕಾ ನಾರಾಯಣ್.rayan 070522 Chase2

ಈ ಚಿತ್ರದ ನಿಜವಾದ ಹೀರೋ ಮ್ಯಾಕ್ಸ್ ಎನ್ನುತ್ತಾರೆ ರಾಧಿಕಾ ನಾರಾಯಣ್. ‘ಚಿತ್ರೀಕರಣ ಸಮಯದಲ್ಲಿ ನಮ್ಮನ್ನು ಹೆಚ್ಚು ವಿಚಾರಿಸಿಕೊಳ್ಳುತ್ತಿರಲಿಲ್ಲ. ಆದರೆ, ಮ್ಯಾಕ್ಸ್ಗೆ ಮಾತ್ರ ಸಖತ್ ಒಳ್ಳೆಯ ಟ್ರೀಟ್ಮೆಂಟ್ ಸಿಗುತ್ತಿತ್ತು. ಮ್ಯಾಕ್ಸ್ನನ್ನು ಎಲ್ಲರೂ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಏಕೆಂದರೆ, ಮೂಕಪ್ರಾಣಿಯಿಂದ ಕೆಲಸ ತೆಗೆಸುವುದು ಅಷ್ಟು ಸುಲಭದ ಮಾತಲ್ಲ’ ಎನ್ನುತ್ತಾರೆ ರಾಧಿಕಾ.maxresdefault 8

‘ಚೇಸ್’ ಚಿತ್ರದಲ್ಲಿ ರಾಧಿಕಾ ನಾರಾಯಣ್ ಮತ್ತು ಮ್ಯಾಕ್ಸ್ ಜೊತೆಗೆ ರಾಜೇಶ್ ನಟರಂಗ, ಅವಿನಾಶ್ ನರಸಿಂಹರಾಜು, ಅರ್ಜುನ್ ಯೋಗೇಶ್, ಶ್ವೇತಾ ಸಂಜೀವಲು, ಶೀತಲ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಈ ಚಿತ್ರವನ್ನು ವಿಲೋಕ್ ಶೆಟ್ಟಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…