ಚಾಂಪಿಯನ್ ಗೆಲುವೆ ಅದಿತಿ!

ಅದಿತಿ ಅಭಿನಯದ ತಿಂಗಳಿಗೊಂದರಂತೆ ಬಿಡುಗಡೆಯಾಗುತ್ತಿವೆ. 15 ದಿನಗಳ ಹಿಂದಷ್ಟೇ ಅದಿತಿ ಅಭಿನಯದ ‘ತೋತಾಪುರಿ’ ಚಿತ್ರವು ಬಿಡುಗಡೆಯಾಗಿತ್ತು. ಈಗ ‘ಚಾಂಪಿಯನ್’ ಜೊತೆಗೆ ಮತ್ತೆ ಬರುತ್ತಿದ್ದಾರೆ ಅದಿತಿ.Aditi Prabhudeva 2 1

ಈ ಚಿತ್ರದಲ್ಲಿ ಅವರು ಸಚಿನ್ಗೆ ನಾಯಕಿಯಾಗಿ ನಟಿಸಿದ್ದು, ಅವನ ಜೀವನದಲ್ಲಿ ಪ್ರೀತಿಯ ಗಾಳಿ ಬೀಸುವ ಯುವತಿಯಾಗಿ ಕಾಣಿಸಿಕೊಂಡಿದ್ದಾರಂತೆ. ಈ ಚಿತ್ರದ ಬಗ್ಗೆ ವಿಶೇಷ ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಅದಿತಿ, ಚಿತ್ರದ ಬಗ್ಗೆ ಥ್ರಿಲ್ ಆಗಿ ಮಾತನಾಡುತ್ತಾರೆ.Aditi Prabhudeva 8 1

‘ಎಲ್ಲರಿಗೂ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಆಸೆ ಇರುತ್ತದೆ. ಅಂಥವರಿಗೆ ಸ್ಫೂರ್ತಿ ತುಂಬುವ ಚಿತ್ರ ಇದು. ಇಲ್ಲೊಂದು ಅದ್ಭುತವಾದ ಕಥೆ ಇದೆ. ಇಲ್ಲಿ ಕಥೆಯೇ ಜೀವಾಳ. ಇಲ್ಲಿ ಸಚಿನ್ ಅಥ್ಲೀಟ್ ಆಗಿ ಕಾಣಿಸಿಕೊಂಡಿದ್ದಾರೆ. ಜೀವನದಲ್ಲಿ ಒಂದು ಕಡೆ ಸಾಧನೆ, ಫ್ಯಾಮಿಲಿಯ ಜೊತೆಗೆ ಲವ್ ಸಹ ಇನ್ನೊಂದು ಟ್ರಾಕ್ನಲ್ಲಿ ಹೋಗುತ್ತಿರುತ್ತದೆ. ಇವರ ಬದುಕಿನಲ್ಲಿ ನಾನು ಪ್ರೀತಿಯಾಗಿ ಬರುತ್ತೇನೆ ಎನ್ನುತ್ತಾರೆ’ ಅದಿತಿ.champion kannada movie

ಅಥ್ಲೀಟ್ ಪಾತ್ರ ನಿಭಾಯಿಸುವುದು ಅಷ್ಟು ಸುಲಭವಲ್ಲ ಎನ್ನುವ ಅದಿತಿ, ‘ಕಲಾವಿದರಿಗೆ ಅಂಥದ್ದೊಂದು ಚಾಲೆಂಜಿಂಗ್ ಪಾತ್ರದಲ್ಲಿ ನಟಿಸುವ ಆಸೆ ಇರುತ್ತದೆ. ಅಥ್ಲೀಟ್ ಪಾತ್ರ ನಿಭಾಯಿಸುವುದು ಅಷ್ಟು ಸುಲಭವಲ್ಲ. ನಾನು ಕಾಲೇಜಿನಲ್ಲಿ ಹೈಪರ್ ಆಕ್ಟೀವ್ ಆಗಿದ್ದೆ. ಕ್ರೀಡೆ ಅಂದರೆ ಬಹಳ ಆಸಕ್ತಿ. ಆದರೆ, ಶಿಕ್ಷಣದ ಬಗ್ಗೆ ಜಾಸ್ತಿ ಗಮನಹರಿಸಲು ಮನೆಯಲ್ಲಿ ಹೇಳುತ್ತಿದ್ದರು. ಆಟ ಆಡೋಕೆ ಬಿಡುತ್ತಿದ್ದರು. ಆದರೆ, ಆ ಲೈನ್ನಲ್ಲಿ ಹೇಗೆ ಮುಂದುವರೆಯುವುದು ನನಗೆ ಗೊತ್ತಿರಲಿಲ್ಲ. ಹಾಗಾಗಿ, ನಾನು ಕ್ರೀಡೆಯಲ್ಲಿ ಮುಂದುವರೆಯೋಕೆ ಸಾಧ್ಯವಾಗಲಿಲ್ಲ’ ಎನ್ನುತ್ತಾರೆ ಅದಿತಿ.champion kannada movie

ಇನ್ನು, ಚಿತ್ರದ ನಾಯಕ ಸಚಿನ್ ಚಿತ್ರರಂಗಕ್ಕೆ ಹೊಸಬರು. ಅದಿತಿ ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ನಟಿಸಿದವರು. ಹೀಗಿರುವಾಗ ಸಚಿನ್ ಅವರ ಜೊತೆಗೆ ನಟಿಸಿದ್ದು ಹೇಗಿತ್ತು? ಅವರಿಗೆ ಏನೆಲ್ಲಾ ಟಿಪ್ಸ್ ಕೊಟ್ಟಿರಿ? ಎಂದರೆ ನಾಚಿಕೊಳ್ಳುತ್ತಾರೆ ಅದಿತಿ. ‘ಎಲ್ಲರಿಗೂ ಅವರದ್ದೇ ಆದ ಶೈಲಿ ಇರುತ್ತದೆ. ಸಲಹೆ ಕೊಡುವುದಕ್ಕೂ, ಹೇಳಿಕೊಡುವುದಕ್ಕೂ ವ್ಯತ್ಯಾಸ ಇದೆ. ಒಂದಿಷ್ಟು ಸಲಹೆ ಕೊಟ್ಟಿರಬಹುದು. ಬಿಟ್ಟರೆ ಮಿಕ್ಕಂತೆ ಅವರೇ ಚೆನ್ನಾಗಿ ಮಾಡಿದ್ದಾರೆ’ ಎಂದು ಖುಷಿಯಾಗುತ್ತಾರೆ ಅದಿತಿ.Aditi 1

ಈ ಹಾಡಿನ ಚಿತ್ರೀಕರಣಕ್ಕೆ ಅವರು ದುಬೈಗೆ ಹೋಗಿದ್ದೂ ಇದೆ. ಹಾಡುಗಳ ಬಗ್ಗೆ ಮಾತನಾಡುವ ಅವರು, ‘ಚಿತ್ರದಲ್ಲಿ ಒಂದೊಂದು ಹಾಡಿಗೂ ಒಬ್ಬೊಬ್ಬ ನೃತ್ಯ ನಿರ್ದೇಶಕರಿದ್ದಾರೆ. ನನ್ನ ಹಾಡಿಗೆ ಧನು ಮಾಸ್ಟರ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ದುಬೈನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಬಹಳ ಸುಂದರವಾದ ಲೊಕೇಶನ್ಗಳು, ಕಾಸ್ಟೂಮ್ಗಳು ಸಿಕ್ಕಿವೆ. ಅದ್ಭುತವಾದ ಹಾಡು. ನನಗೆ ಬಹಳ ಇಷ್ಟವಾದ ಹಾಡು ಅದು. ಜತೆಗೆ ಇನ್ನೊಂದು ಇನ್ಸ್ಪಿರೇಷನ್ ಹಾಡು ಇದೆ. ನಾಯಕ ಸಚಿನ್ ತಯಾರಿ ನಡೆಸುವ ಹಾಡು ಅದು. ಆ ಹಾಡು ಸಹ ನನಗೆ ಬಹಳ ಇಷ್ಟ ಆಯ್ತು’ ಎಂದು ಹೇಳಿಕೊಳ್ಳುತ್ತಾರೆ ಅದಿತಿ.Aditi Prabhudeva 18 1

ಶಿವಾನಂದ್ ನೀಲಣ್ಣನವರ್ ನಿರ್ಮಿಸಿರುವ ‘ಚಾಂಪಿಯನ್’ ಚಿತ್ರವನ್ನು ದಿವಂಗತ ಶಾಹುರಾಜ್ ಶಿಂಧೆ ನಿರ್ದೇಶಿಸಿದ್ದು, ಚಿತ್ರದಲ್ಲಿ ಸಚಿನ್, ಅದಿತಿ, ದೇವರಾಜ್, ಸುಮನ್, ಅವಿನಾಶ್, ಚಿಕ್ಕಣ್ಣ ಮುಂತಾದವರು ನಟಿಸಿದ್ದಾರೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…