ಪ್ರತಿ ವರ್ಷದಂತೆ ಈ ವರ್ಷ ಕೂಡ ಈಗಾಗಲೇ ಎಲ್ಲೆಡೆ ಬಿಗ್ ಬಾಸ್ ಕಲರವ ಆರಂಭವಾಗಿದೆ. ಮರಾಠಿ ಮತ್ತು ತಮಿಳು ಹೊರತು ಪಡಿಸಿದರೆ ಈಗಾಗಲೇ ಕನ್ನಡ.. ಹಿಂದಿ.. ತೆಲುಗು.. ಮತ್ತು ಮಲಯಾಳಂನಲ್ಲಿ ಬಿಗ್ ಬಾಸ್ ಕೆಲಸಗಳು ಆರಂಭವಾಗಿವೆ. ಸೆಟ್ ನಿರ್ಮಾಣದ ಕೆಲಸ ಭರದಿಂದ ನಡೆಯುತ್ತಿದೆ. ಇನ್ನೂ ಈ ಬಾರಿ ಬಿಗ್ ಬಾಸ್ ಮನೆಗೆ ಅವರು ಹೋಗಬಹುದು.. bigg-boss-kannada-12 ಇವರು ಹೋಗಬಹುದು..
ಎನ್ನುವ ಊಹಾಪೋಹದ ಸುದ್ದಿಗಳಿಗೆ ಎಂದಿನಂತೆ ಈ ವರ್ಷ ಕೂಡ ಬರ ಇಲ್ಲ. ಹಲವರ ಹೆಸರುಗಳು ಎಲ್ಲಾ ಭಾಷೆಯಲ್ಲಿ ಈಗಾಗಲೇ ಕೇಳಿ ಬರುತ್ತಿವೆ. ಆದರೆ .. ಇದರ ನಡುವೆ ಎಂದಿನಂತೆ ಧಾರಾವಾಹಿಯನ್ನು ತಪ್ಪದೇ ನೋಡುವ ಒಂದು ವರ್ಗಕ್ಕೆ ‘ಬಿಗ್ ಬಾಸ್’ಗಾಗಿ ತಮ್ಮ ನೆಚ್ಚಿನ ಧಾರಾವಾಹಿಯನ್ನು ಎಲ್ಲಿ ವಾಹಿನಿಯವರು ಬಲಿ ಕೊಡುತ್ತಾರೆ ಎನ್ನುವ ಪ್ರಶ್ನೆ ಕಾಡುತ್ತಿದೆ.ಯಾಕೆಂದರೆ .. ಬಿಗ್ ಬಾಸ್‌ಗೆ ಬೆಳಕಾಗುವುದೇ ಎಲ್ಲರಿಗೆ ರಾತ್ರಿಯಾದಾಗ. 8-9-10ರ ಆಸು ಪಾಸಿನ ಸಮಯವನ್ನು ಬಿಗ್ ಬಾಸ್‌ಗಾಗಿ ಮೀಸಲಿಡಲಾಗುತ್ತೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಬಿಗ್ ಬಾಸ್ ಒಂದು ಗಂಟೆಯಲ್ಲಿ ಮುಗಿಯುವ ಕಾರ್ಯಕ್ರಮವಲ್ಲ. ಪ್ರತಿ ದಿನ ಒಂದೂವರೆ ಗಂಟೆ ಪ್ರಸಾರವಾಗುವ ಕಾರ್ಯಕ್ರಮ.
ಹೌದು, ಅಸಲಿಗೆ ಕಳೆದ ವರ್ಷ ಟಿಆರ್‌ಪಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದ ಸಮಯದಲ್ಲಿಯೇ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕರಿಮಣಿ ಧಾರಾವಾಹಿಯ ಪ್ರಸಾರದ ಸಮಯವನ್ನು ಬದಲಿಸಲಾಗಿತ್ತು. 9-30ಕ್ಕೆ ಪ್ರಸಾರವಾಗುತ್ತಿದ್ದ ಧಾರಾವಾಹಿಯನ್ನು ಸಂಜೆಯ ಸಮಯಕ್ಕೆ ಶಿಫ್ಟ್ ಮಾಡಲಾಗಿತ್ತು. ಈ ಧಾರಾವಾಹಿಯ ಮೇಲೀಗ ಮತ್ತೊಮ್ಮೆ ಬಿಗ್ ಬಾಸ್ ನೆರಳು ಬಿದ್ದಿದೆ ಎನ್ನುವ ಮಾತು ಸದ್ಯ ಚಾಲ್ತಿಯಲ್ಲಿದೆ.
ಕರಿಮಣಿ ಹೊರತು ಪಡಿಸಿದರೆ ಮೌನ ಗುಡ್ಡೇಮನೆ ಮತ್ತು ರಿತ್ವಿಲ್ ಕೃಪಾಕರ್ ಅಭಿನಯದ ರಾಮಾಚಾರಿಗೆ ಕೂಡ ಶುಭಂ ಹಾಡಲಾಗುತ್ತೆ ಎನ್ನುವ ಸುದ್ದಿ ಹಬ್ಬಿದೆ. ಈ ಸುದ್ದಿಯಲ್ಲಿರುವ ಸತ್ಯಾಂಶ ಎಷ್ಟು ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯ ರಾಮಾಚಾರಿ ಧಾರಾವಾಹಿ ಸಾಗುತ್ತಿರುವ ದಾರಿಯನ್ನು ಕಂಡು ಪ್ರೇಕ್ಷಕರೇ ಧಾರಾವಾಹಿ ಮುಕ್ತಾಯವಾಗಬಹುದು ಎಂದು ಊಹಿಸಲು ಶುರು ಮಾಡಿದ್ದಾರೆ.

ಈ ಎರಡು ಧಾರಾವಾಹಿ ಹೊರತು ಪಡಿಸಿದರೆ ದೃಷ್ಟಿಬೊಟ್ಟು ಧಾರಾವಾಹಿ ಕೂಡ ಮುಕ್ತಾಯವಾಗಲಿದೆ ಎನ್ನುವ ಸುದ್ದಿ ಸದ್ಯ ಕೇಳಿ ಬರುತ್ತಿದೆ.Bigg-Boss-Kannada-12
ಇನ್ನುಳಿದಂತೆ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಸೆಪ್ಟೆಂಬರ್ 4ರಿಂದ ಶುರುವಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ 27ರಂದು ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.
ಎಲ್ಲರಿಗೆ ಗೊತ್ತಿರುವಂತೆ ಈ ಬಾರಿ ಕೂಡ ಸುದೀಪ್ ಬಿಗ್ ಬಾಸ್ ಸಾರಥ್ಯ ವಹಿಸಿಕೊಂಡಿದ್ಧಾರೆ.ವಿಜಯ್ ಸೂರ್ಯ.. ಸಾಗರ್ ಬಿಳಿಗೌಡ.. ಅಮೃತಾ ರಾಮಮೂರ್ತಿ.. ಶ್ವೇತಾ ಪ್ರಸಾದ್.. ಪಾಯಲ್ ಚೆಂಗಪ್ಪ.. ವರುಣ್ ಆರಾಧ್ಯ ಹೀಗೆ ಒಂದಿಷ್ಟು ಹೆಸರುಗಳು ಈ ಬಾರಿ ಬಿಗ್ ಬಾಸ್ ಸಂಭಾವ್ಯ ಸ್ಫರ್ಧಿಗಳ ಲಿಸ್ಟ್ ಹೆಸರಿನಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಓಡಾಡುತ್ತಿವೆ. ಯಾರೆಲ್ಲ ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.