ಝೈದ್ ಖಾನ್ ನಿಖರವಾಗಿ ಪ್ಲಾನ್ ಮಾಡಿಕೊಂಡು, ಅತ್ಯಂತ ವ್ಯವಸ್ಥಿತವಾಗಿ ಬನಾರಸ್ ಪ್ರಚಾರದ ಭಾಗವಾದ ರೋಡ್ ಶೋಕಗಳನ್ನು ನಡೆಸುತ್ತಿದ್ದಾರೆ. ಇದೇ ನವೆಂಬರ್ 4ರಂದು ಬನಾರಸ್ ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಈ ಹಂತದಲ್ಲಿ ನಮ್ಮ ರಾಜ್ಯದಲ್ಲಿ ರೋಡ್ ಶೋ ಮೂಲಕ ಬನಾರಸ್ ಕ್ರೇಜ್ ಮತ್ತಷ್ಟು ಹೆಚ್ಚಿಕೊಳ್ಳುತ್ತಿದೆ. ಎರಡನೇ ದಿನವಾದ ಇಂದು ಬೆಳಗ್ಗೆ ಒಂಬತ್ತು ಗಂಟೆಗೆ ಬನಾರಸ್ ಜೋಡಿ ಹಾಸನಕ್ಕೆ ಹೆಲಿಕಾಪ್ಟರ್ ಮೂಲಕ ಬಂದಿಳಿಯಿತು. ಅಲ್ಲಿ ಅಭಿಮಾನಿಗಳು, ಮುಖಂಡರು ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ರೋಡ್ ಶೋ ನೆರವೇರಿತು.
ಆ ನಂತರದಲ್ಲಿ 11.30ಕ್ಕೆ ಸರಿಯಾಗಿ ಝೈದ್ ಖಾನ್ ಮತ್ತು ಸೋನಲ್ ಮೊಂತೇರೋ ದಾವಣಗೆರೆಗೆ ತೆರಳಿ, ಅಲ್ಲಿಯೂ ರೋಡ್ ಶೋ ಮತ್ತು ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅದಾದ ನಂತರ 2.30ರ ಸುಮಾರಿಗೆ ಬಳ್ಳಾರಿಗೆ ಬಂದಿಳಿದು, ಅಲ್ಲಿಯೂ ಅದೇ ಉತ್ಸಾಹದಿಂದ ಬನಾರಸ್ ಜೋಡಿ ವೇದಿಕೆ ಕಾರ್ಯಕ್ರಮ ಮತ್ತು ರೋಡ್ ಶೋಗಳಲ್ಲಿ ಪಾಲ್ಗೊಂಡಿತ್ತು.
ಬಳ್ಳಾರಿಯಿಂದ ಸಂಜೆ 5.30ಕ್ಕೆಲ್ಲ ಝೈದ್ ಖಾನ್ ಮತ್ತು ಸೋನಲ್ ಮೊಂತೇರೋ ಬೆಂಗಳೂರಿಗೆ ವಾಪಾಸಾಗಿದ್ದಾರೆ. ಹಾಸನ, ದಾವಣಗೆರೆ ಮತ್ತು ಬಳ್ಳಾರಿಯಲ್ಲಿ ನಡೆದ ರೋಡ್ ಶೋಗೆ ಅಭೂತಪೂರ್ವ ಪ್ರತಿಕ್ರಿಯೆ ಕಾಣಿಸಿತ್ತು. ಝೈದ್ ಮತ್ತು ಸೋನಲ್ಗೆ ಸಲ್ಮಾನ ಮತ್ತು ಜನರೆಲ್ಲರ ಪ್ರೀತ್ಯಾಧಾರಗಳು ಯಥೇಚ್ಛವಾಗಿ ಸಿಕ್ಕವು. ಅಲ್ಲಿ ಕಾಣಿಸಿದ ಪ್ರತಿಕ್ರಿಯೆಗಳಲ್ಲಿಯೇ ಬನಾರಸ್ ಕ್ರೇಜ್ ಪ್ರತಿಫಲಿಸಿದಂತಿತ್ತು. ಅಂದಹಾಗೆ ನವೆಂಬರ್ 4ರಂದು ಬನಾರಸ್ ತೆರೆಗಾಣುವ ಘಳಿಗೆಯವರೆಗೂ ಇಂಥಾ ಪ್ರಚಾರ ಕಾರ್ಯಗಳಲ್ಲಿ ಝೈದ್ ಖಾನ್ ಬ್ಯುಸಿಯಾಗಲಿದ್ದಾರೆ.