ಬನಾರಸ್: ತಮಿಳುನಾಡಿನ ವಿತರಣಾ ಹಕ್ಕು ಪಡೆದುಕೊಂಡ ಶಕ್ತಿ ಫಿಲಂ ಫ್ಯಾಕ್ಟರಿ!

banaras kannada movie sakthi film factory

ಝೈದ್ ಖಾನ್ ನಾಯಕನಾಗಿ ನಟಿಸಿರುವ ಪ್ಯಾನಿಂಡಿಯಾ ಚಿತ್ರ ಬನಾರಸ್. ಒಂದು ಯಶಸ್ವೀ ಸಿನಿಮಾ ಹೇಗೆಲ್ಲ ಸದ್ದು ಮಾಡಬಹುದೋ, ಆ ದಿಕ್ಕಿನಲ್ಲೆಲ್ಲ ವ್ಯಾಪಕವಾಗಿ ಸುದ್ದಿ ಮಾಡುತ್ತಾ ಬನಾರಸ್ ಬಿಡುಗಡೆಯ ಹಾದಿಯಲ್ಲಿದೆ. ಸಾಮಾನ್ಯವಾಗಿ ಪ್ಯಾನಿಣಂಡಿಯಾ ಮಟ್ಟದಲ್ಲಿ ಯಾವ ಸಿನಿಮಾವನ್ನಾದರೂ ನೆಲೆಗಾಣಿಸಬೇಕೆಂದರೆ, ಅದರಲ್ಲಿ ವಿತರಣೆಯ ಜವಾಬ್ದಾರಿ ಪಡೆಯುವ ಸಂಸ್ಥೆಗಳ ಪಾತ್ರವೂ ಬಹು ಮುಖ್ಯವಾಗುತ್ತದೆ.banaras kannada movie sakthi film factory

ಈ ವಿಚಾರದಲ್ಲಿ ಬನಾರಸ್‌ನದ್ದು ಯಶಸ್ವೀ ಯಾನ. ಯಾಕೆಂದರೆ, ನಾನಾ ಭಾಷೆಗಳಲ್ಲಿ ಈಗಾಗಲೇ ಸೂಪರ್ ಹಿಟ್ ಸಿನಿಮಾಗಳನ್ನು ವಿತರಿಸಿ ಸೈ ಅನ್ನಿಸಿಕೊಂಡಿರುವ ಸಂಸ್ಥೆಗಳೇ ಬನಾರಸ್ ಸಾರಥ್ಯ ವಹಿಸಿಕೊಂಡಿವೆ. ಇದೀಗ ಅಖಂಡ ತಮಿಳುನಾಡಿನಲ್ಲಿ ಬನಾರಸ್ ಅನ್ನು ತೆರೆಗಾಣಿಸುವ ಜವಾಬ್ದಾರಿಯನ್ನು ಪ್ರತಿಷ್ಠಿತ ವಿತರಣಾ ಸಂಸ್ಥೆಯಾಗಿರುವ ಶಕ್ತಿ ಫಿಲಂ ಫ್ಯಾಕ್ಟರಿ ವಹಿಸಿಕೊಂಡಿದೆ.banaras kannada movie sakthi film factory ಈಗಾಗಲೇ ಕರ್ನಾಟಕ, ಕೇರಳ ಮತ್ತು ಉತ್ತರ ಭಾರತದ ಬನಾರಸ್ ವಿತರಣಾ ಹಕ್ಕುಗಳು ಖ್ಯಾತ ಸಂಸ್ಥೆಗಳ ಪಾಲಾಗಿವೆ. ಈ ಮೂಲಕವೇ ಆ ರಾಜ್ಯಗಳಲ್ಲಿ ಬನಾರಸ್ ಸುದ್ದಿ ಕೇಂದ್ರದಲ್ಲಿರುವಾಗಲೇ, ತಮಿಳುನಾಡಿನ ದಿಕ್ಕಿನಿಂದ ಈ ಶುಭ ಸಮಾಚಾರ ಜಾಹೀರಾಗಿದೆ. ಹೀಗೆ ಶಕ್ತಿ ಫಿಲಂ ಫ್ಯಾಕ್ಟರಿ ಬನಾರಸ್ ವಿತರಣಾ ಹಕ್ಕುಗಳನ್ನು ಖರೀದಿಸಿದ ಸುದ್ದಿ ಹೊರಬೀಳುತ್ತಲೇ, ಅಲ್ಲಿನ ಚಿತ್ರಪ್ರೇಮಿಗಳ ಚಿತ್ತ ತಾನೇತಾನಾಗಿ ಬನಾರಸ್ ನತ್ತ ವಾಲಿಕೊಂಡಿದೆ. ಯಾಕೆಂದರೆ, ಅತ್ಯಂತ ಅಚ್ಚುಕಟ್ಟಾಗಿ ಸಿನಿಮಾಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಶಕ್ತಿ ಫಿಲಂ ಫ್ಯಾಕ್ಟರಿ ಹೆಸರುವಾಸಿಯಾಗಿದೆ.banaras kannada movie

ಈ ಸಂಸ್ಥೆಯ ಕಡೆಯಿಂದ ತೆರೆಗಂಡ ಅದೆಷ್ಟೋ ಚಿತ್ರಗಳು ಸೂಪರ್ ಹಿಟ್ಟಾಗಿವೆ. ಈ ಕಾರಣದಿಂದಲೇ ಬನಾರಸ್ ಬಗೆಗಿನ ನಿರೀಕ್ಷೆ ತಮಿಳುನಾಡಿನಾದ್ಯಂತ ತಾರಕಕ್ಕೇರಿದೆ.
ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ ಬನಾರಸ್ ಈಗಾಗಲೇ ಹಾಡುಗಳು ಮತ್ತು ಟ್ರೈಲರ್ ಮೂಲಕ ತನ್ನದೇ ಆದ ಸ್ಥಾನ ಗಿಟ್ಟಿಸಿಕೊಂಡಿದೆ. ಇವೆಲ್ಲವುಗಳ ಮೂಲಕವೇ ಬಹುನಿರೀಕ್ಷಿತ ಚಿತ್ರವೆಂಬ ಹೆಗ್ಗಳಿಕೆಯನ್ನೂ ತನ್ನದಾಗಿಸಿಕೊಂಡಿದೆ.banaras kannada movie

ಜಯತೀರ್ಥ ಮಧುರವಾದ ಪ್ರೇಮಕಥಾನಕಗಳಿಗೆ, ಅಚ್ಚರಿದಾಯಕ ನಿರೂಪಣಾ ಶೈಲಿಗೆ ಹೆಸರಾಗಿರುವ ನಿರ್ದೇಶಕ. ಬನಾರಸ್ ಮೂಲಕ ಅವರು ಮತ್ತೊಂದು ಆಯಾಮದ ಕಥೆ ಹೇಳಹೊರಟಿರೋದು ಈಗಾಗಲೇ ಪಕ್ಕಾ ಆಗಿದೆ. ಇಷ್ಟೊಂದು ವಿಶೇಷತೆಗಳಿರೋದರಿಂದಲೇ ಪ್ರತಿಷ್ಠಿತ ಸಂಸ್ಥೆಗಳು ಪ್ರಶಂಶೆಯೊಂದಿಗೆ ಬನಾರಸ್ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿವೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿ ದಾಪುಗಾಲಿಡುತ್ತಿರುವ ಬನಾರಸ್, ಇದೇ ನವೆಂಬರ್ ನಾಲಕ್ಕನೇ ತಾರೀಕಿನಂದು ದೇಶಾದ್ಯಂತ ತೆರೆಗಂಡು ಮ್ಯಾಜಿಕ್ ಮಾಡಲಿದೆ!banaras kannada movie song release

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…