ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ.Anchor-and-Actress-Jhanvi
ಬದುಕಿನ ಮಹತ್ವದ ಹಂತ. ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಆದರೆ ಕೆಲ ಒಮ್ಮೆ ಈ ಜೀವನದಲ್ಲಿ ತಿರುವು ಬರುತ್ತವೆ.ಸಂದರ್ಭ ಮತ್ತು ಪರಿಸ್ಥಿತಿ ಕೈಮೀರಿ ಹೋಗಿರುತ್ತವೆ. ನಂಬಿಕೆ-ಅಪನಂಬಿಕೆ ಇತ್ಯಾದಿ ವಿಚಾರಗಳಿಂದ ಈ ಸಂಬಂಧ ಮುರಿದು ಬೀಳುತ್ತೆ.Anchor-and-Actress-Jhanvi
ಹಾಗಂಥ, ಜೀವನ ಮುಗಿದೇಹೋಯ್ತು ಅಂತೇನು ಇಲ್ಲ.ಆದರೆ.. ದಾಂಪತ್ಯ ಅಂತ್ಯವಾದ ನಂತರ ಸಾಮಾನ್ಯವಾಗಿ ಅನೇಕರು ಮತ್ತೊಂದು ಮದುವೆಯಾಗುವ ಮನಸು ಮಾಡುವುದಿಲ್ಲ. ಅಯ್ಯೋ ಒಮ್ಮೆ ಅನುಭವಿಸಿದ್ದೇ ಸಾಕು ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಏಕಾಂಗಿಯಾಗಿರಲು ಬಯಸುತ್ತಾರೆ. ಉದಾಹರಣೆಗೆ ಜಾಹ್ನವಿ.
ಹೌದು, ಜಾಹ್ನವಿ.. ಕನ್ನಡ ಸುದ್ದಿ ಲೋಕದ ಖ್ಯಾತ ಸುದ್ದಿ ವಾಚಕಿ. ತಮ್ಮ ಮಾತು ಮತ್ತು ತಮ್ಮ ಜ್ಞಾನದಿಂದಲೇ, ಅತ್ಯಲ್ಪ ಅವಧಿಯಲ್ಲಿಯೇ ಮಾಧ್ಯಮದಲ್ಲಿ ಹೆಸರು ಸಂಪಾದಿಸಿದ ಜಾಹ್ನವಿ ಸದ್ಯ ಚಿತ್ರರಂಗದತ್ತ ಗಮನ ವಹಿಸಿದ್ದಾರೆ. ಅಧಿಪತ್ರ ಚಿತ್ರದ ಮೂಲಕ ಈಗಾಗಲೇ ತಮ್ಮ ಅದೃಷ್ಟ ಪರೀಕ್ಷೆಯನ್ನು ಕೂಡ ಮಾಡಿಕೊಂಡಿದ್ದಾರೆ.
ಜಾಹ್ನವಿ ತಮ್ಮ ವ್ಯೆಯಕ್ತಿಕ ಬದುಕಿನಲ್ಲಿ ಹಲವು ನೋವು ಉಂಡಿದ್ದಾರೆ
ಅನೇಕ ಸಲ ತಮ್ಮ ಜೀವನದ ಮುಳ್ಳಿನ ಹಾದಿಯನ್ನು ನೆನೆದು ಕಣ್ಣೀರನ್ನು ಹಾಕಿದ್ದಾರೆ. ಆದರೂ ಕೂಡ ಇವರ ವ್ಯೆಯಕ್ತಿಕ ಬದುಕಿನ ಕುರಿತು ಇನ್ನು ಹಲವರಲ್ಲಿ ಕುತೂಹಲ ಇದ್ದೇ ಇದೆ. ಹೀಗಾಗಿಯೇ ಈಗಲೂ ಕೂಡ ಜಾಹ್ನವಿಗೆ ಅವರ ಮದುವೆ ಮತ್ತು ವಿಚ್ಛೇದನದ ಕುರಿತು ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ.
ಮೊದಲ ಮದುವೆಯೇ ನನಗೆ ಒಳ್ಳೆಯ ಅನುಭವ ನೀಡಿದೆ. ಹೀಗಾಗಿ ಮದುವೆ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿರುವ ಜಾಹ್ನವಿ, ಸದ್ಯ ನಾನು ಹೀಗೆಯೇ ಖುಷಿಯಾಗಿದ್ದೀನಿ, ನೆಮ್ಮದಿಯಿಂದ ಇದ್ದೀನಿ, ಶಾಂತವಾಗಿ ಇದ್ದೀನಿ, ನನಗೆ ಯಾವತ್ತು ಕೂಡ ಮದುವೆಯಾಗಬೇಕು ಅಂತ ಅನ್ಸಿಲ್ಲ ಎಂದು ಹೇಳಿದ್ದಾರೆ. ನನ್ನ ಮಗನ ಬದುಕು ಭವಿಷ್ಯ ರೂಪಿಸಬೇಕು ಅದಷ್ಟೇ ನನ್ನ ಸದ್ಯದ ಯೋಚನೆ ಯೋಜನೆ ಎಂದು ಹೇಳಿದ್ದಾರೆ.
ನನ್ನ ಮಗ ಈಗ 8ನೇ ಕ್ಲಾಸ್‌ನಲ್ಲಿ ಓದ್ತಿದ್ದಾನೆ, ಮತ್ತೊಬ್ಬ ವ್ಯಕ್ತಿಯನ್ನು ನಮ್ಮ ಜೀವನಕ್ಕೆ ಸೇರಿಸಿಕೊಳ್ಳುವುದು ನನಗೆ ಇಷ್ಟ ಇಲ್ಲ ಎಂದು ಹೇಳಿರುವ ಜಾಹ್ನವಿ ನಾನು ಸಿನಿಮಾಗಾಗಿ ಡಿವೋರ್ಸ್ ತೆಗೆದುಕೊಂಡಿಲ್ಲ ಎಂದು ಕೂಡ ಸ್ಪಷ್ಟ ಪಡಿಸಿದ್ದಾರೆ. ಮದುವೆಯಾದ ನಂತರ ನನ್ನ ಬದುಕಿನಲ್ಲಿ ಏನೆಲ್ಲಾ ಆಯ್ತು ಎನ್ನುವ ಕೆಲ ವಿಚಾರ ಈಗಾಗಲೇ ನಾನು ಹೇಳಿದ್ದೀನಿ, ಆದರೆ.. ಸಂಪೂರ್ಣ ವಿಚಾರ ನನ್ನ ಸುತ್ತ ಮುತ್ತ ಇದ್ದವರಿಗೆ, ನನ್ನನ್ನು ಬಲ್ಲವರಿಗೆ ಮಾತ್ರ ಗೊತ್ತು ಎಂದು ಹೇಳಿರುವಅ ಜಾಹ್ನವಿ ನನಗೆ ತುಂಬಾ ನೋವಾಗಿದೆ, ತ್ತಿರುವ ದಿನಗಳಿವೆ, ಆದರೆ ಈ ಕ್ಷಣದಲ್ಲಿ ನಾನು ಎಲ್ಲಿಯೇ ಇದ್ದರೂ ಚೆನ್ನಾಗಿರಲಿ ಅಂತಷ್ಟೇ ಬಯಸುತ್ತೇನೆ ಎಂದು ಹೇಳಿದ್ಧಾರೆ.