ಕನ್ನಡ ನಟಿ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಶೀಘ್ರದಲ್ಲೇ ಬಾಲಿವುಡ್ ಹಾಗೂ ಕಾಲಿವುಡ್ ಅಂಗಳಕ್ಕೂ ಜಿಗಿಯುತ್ತಿದ್ದಾರೆ. actress-sreeleela-reacts-on-relationship ಬಾಲಿವುಡ್‌ನಲ್ಲಿ ಹೆಚ್ಚು ಹೆಚ್ಚು ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ. ಇದೆಲ್ಲದರ ನಡುವೆ ಶ್ರೀಲೀಲಾ ಮದುವೆ ಬಗ್ಗೆ ಊಹಾಪೋಹ ಶುರುವಾಗಿತ್ತು.
ಸಿನಿಮಾ ತಾರೆಯರ ಲವ್, ಮ್ಯಾರೇಜ್ ಬಗ್ಗೆ ಗುಸುಗುಸು ಹೊಸದೇನು ಅಲ್ಲ. ಸೋಶಿಯಲ್ ಮೀಡಿಯಾ ಜಮಾನ ಶುರುವಾದ ಬಳಿಕ ಇಂತ ಅಂತೆ ಕಂತೆ ಸುದ್ದಿ ಹರಿದಾಡುವುದು ಹೆಚ್ಚಾಯಿತು. ಶ್ರೀಲೀಲಾ ಬಗ್ಗೆ ಕೂಡ ಇಂಥದ್ದೆ ವದಂತಿ ಪದೇ ಪದೆ ಕೇಳಿಬರ್ತಿದೆ. ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ಪ್ರೀತಿ ಬಿದ್ದಿದ್ದಾರೆ, ಶೀಘ್ರದಲ್ಲೇ ಮದುವೆ ಅಂತೆ, ಸದ್ದಿಲ್ಲದೇ ಮದುವೆ ನಡೆದೇಹೋಯ್ತು ಅಂತೆಲ್ಲಾ ಊಹಾಪೋಹ ಕೇಳಿಬಂದಿತ್ತು.
ತಮ್ಮ ರಿಲೇಷನ್‌ಶಿಪ್, ಮದುವೆ ವದಂತಿಗೆ ಸ್ವತಃ ಶ್ರೀಲೀಲಾ ಫುಲ್ ಸ್ಟಾಪ್ ಇಟ್ಟಿದ್ದಾರೆ.Actress-Sreeleela-Reacts-on-Relationship
ಮನ ಸ್ಟಾರ್ಸ್ ಯೂಟ್ಯೂಬ್ ವಾಹಿನಿ ಸಂದರ್ಶನದಲ್ಲಿ ಮಾತನಾಡಿ “ನಾನು ಪ್ರೀತಿಲಿ ಬಿದ್ದಿದ್ದೀನಿ ಅಂತ ಎಲ್ಲರೂ ಅಂದುಕೊಂಡಿದ್ದಾರೆ, ಆದರೆ ಅಮ್ಮ ಯಾವಾಗಲೂ ನನ್ನ ಜೊತೆ ಇರ್ತಾರೆ, ನಾನು ಹೇಗೆ ಪ್ರೀತಿಲಿ ಬೀಳಲು ಸಾಧ್ಯ. ಆದರೂ ಈ ಬಗ್ಗೆ ವದಂತಿ ಹರಡುತ್ತಲೇ ಇದೆ” ಎಂದು ಹೇಳಿದ್ದಾರೆ.
ಇತ್ತೀಚೆಗೆ ಶ್ರೀಲೀಲಾ ಮದುಮಗಳಂತೆ ಕಂಗೊಳಿಸಿದ್ದ ಫೋಟೊಗಳು ವೈರಲ್ ಆಗಿತ್ತು. ಅದನ್ನು ನೋಡಿ ಮದುವೆ ನಡೆದೇ ಹೋಯ್ತು ಎಂದು ಕೆಲವರು ಭಾವಿಸಿದ್ದರು. ಆಕೆಯನ್ನು ಬುಟ್ಟಿಯಲ್ಲಿ ಹೊತ್ತುಕೊಂಡು ಬರುವ ಫೋಟೊ ಕೂಡ ಇತ್ತು. ಅದು ಹುಟ್ಟುಹಬ್ಬದ ಸಂಭ್ರಮದಲ್ಲಿ ನಡೆದ ಕಾರ್ಯಕ್ರಮ. ಅದು ನಮ್ಮ ಸಂಪ್ರದಾಯ ಎಂದಿದ್ದಾರೆ.
ಮದುವೆ ಯಾವಾಗ ಎನ್ನುವ ಪ್ರಶ್ನೆಗೂ ಶ್ರೀಲೀಲಾ ಉತ್ತರ ಕೊಟ್ಟಿದ್ದಾರೆ. ನನಗೆ ಈಗ 23 ವರ್ಷ ವಯಸ್ಸು, ಹೆಚ್ಚು ಕಮ್ಮಿ ಇನ್ನು 10 ವರ್ಷ ಮದುವೆ ಆಗುವ ಆಲೋಚನೆ ಇಲ್ಲ ಎಂದಿದ್ದಾರೆ. ಅಂದರೆ ವಯಸ್ಸು 30 ವರ್ಷ ದಾಟಿದ ಮೇಲೆ ಕಿಸ್ ಬೆಡಗಿ ಮದುವೆ ಎನ್ನುವುದು ಅರ್ಥವಾಗುತ್ತಿದೆ. ಇನ್ನಾದರೂ ಸುಳ್ಳು ವದಂತಿ ನಿಲ್ಲುತ್ತಾ ಕಾದು ನೋಡಬೇಕಿದೆ.