ನಟಿ, ಗಾಯಕಿ ಚೈತ್ರಾ ಆಚಾರ್ Actress-Chaitra-J-Achar ಮತ್ತೊಮ್ಮೆ ಟ್ರೋಲ್ ಮಾಡುವವರಿಗೆ ತಿರುಗೇಟು ನೀಡಿದ್ದಾರೆ.
ನನ್ನ ಕೆಲಸದ ಬಗ್ಗೆ ಮಾತನಾಡಿ, ಅದು ಬಿಟ್ಟು ನಾನು ತೊಡುವ ಬಟ್ಟೆ ಕುರಿತು ಅಲ್ಲ ಎಂದು ಚೈತ್ರಾ ಹೇಳಿದ್ದಾರೆ. ಆರಂಭದಲ್ಲಿ ನಾನು ಟ್ರೋಲ್ಸ್ ನೋಡಿ ಭಯಪಟ್ಟಿದ್ದೆ. ಈಗ ಆ ರೀತಿ ಇಲ್ಲ ಎಂದು ಚೈತ್ರಾ ಆಚಾರ್ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ಚೈತ್ರಾ ಆಚಾರ್ Actress-Chaitra-J-Achar ಬೋಲ್ಡ್ ಫೋಟೊಶೂಟ್ ಸಖತ್ ಸದ್ದು ಮಾಡಿತ್ತು. ಜೀನ್ಸ್ ತೊಟ್ಟು ಬಿಳಿ ಬಣ್ಣದ ಟಾಪ್ ತೊಟ್ಟು ಪೋಸ್ ಕೊಟ್ಟಿದ್ದರು. ಒಳ ಉಡುಪು ಕಾಣುವಂತೆ ಪ್ಯಾಂಟ್ ಬಟನ್, ಜಿಪ್ ಬಿಚ್ಚಿ ಎಲ್ಲರ ಹುಬ್ಬೇರಿಸಿದ್ದರು. ಚೈತ್ರಾ ಬಿಂದಾಸ್ ಅವತಾರ ಕಂಡು ಅಭಿಮಾನಿಗಳು ಫಿದಾ ಆಗಿದ್ದರು. ಆದರೆ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದರು. ಆದರೂ ಟ್ರೋಲ್ ಪೇಜ್‌ಗಳು ಫೋಟೊಗಳನ್ನು ಪೋಸ್ಟ್ ಮಾಡಿ ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದರು.
ಅವಕಾಶ ಕಮ್ಮಿ ಆದಾಗ ಕನ್ನಡ ಚಿತ್ರರಂಗದಲ್ಲಿ ಕೆಲವರು ಇಂತಹ ತಿರ್ಪೆ ಶೋಕಿ ಮಾಡ್ತಾರೆ ಎಂದು ಟ್ರೋಲ್ ಪೇಜ್‌ನಲ್ಲಿ ಹಾಕಿದ್ದ ಪೋಸ್ಟ್ ಸಖತ್ ವೈರಲ್ ಆಗಿತ್ತು. ಇದು ಚೈತ್ರಾ ಆಚಾರ್ ಗಮನಕ್ಕೂ ಬಂದಿದೆ. ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಟ್ರೋಲ್ಸ್ ಬಗ್ಗೆ ಚೈತ್ರಾ ಆಚಾರ ಪ್ರತಿಕ್ರಿಯಿಸಿದ್ದಾರೆ.
“ಸುಮಾರು ನಾಲ್ಕು ವರ್ಷಗಳ ಹಿಂದೆ, ನಾನು ಸಿನಿಮಾ ಪ್ರಶಸ್ತಿ ಸಮಾರಂಭಕ್ಕೆ ಒಂದು ಗೌನ್ ಧರಿಸಿದ್ದೆ. ಆಗ ಅದಕ್ಕೆ ಬಂದಿದ್ದ ಕಾಮೆಂಟ್ಸ್ ಬಹಳ ಕೆಟ್ಟದಾಗಿತ್ತು. ನನ್ನ ಪೋಸ್ಟ್‌ಗೆ ಯಾವ ರೀತಿಯ ಕೆಟ್ಟ ಕಾಮೆಂಟ್ಸ್ ಬಂದಿರಬಹುದುದೆಂದು ಪರಿಶೀಲಿಸಲು ನಾನು ಮಧ್ಯರಾತ್ರಿಯಲ್ಲಿ ಎಚ್ಚರಗೊಂಡಿದ್ದೆ. ಆ ಸಮಯದಲ್ಲಿ ಅದು ನನ್ನ ಮೇಲೆ ಅಷ್ಟರಮಟ್ಟಿಗೆ ಪರಿಣಾಮ ಬೀರಿತು. ಅದನ್ನು ಮರೆಯಲು ಸಾಧ್ಯವಿಲ್ಲ. ಆದರೆ ಅದೃಷ್ಟವಶಾತ್, ನನ್ನ ಸುತ್ತಲೂ ಸರಿಯಾದ ರೀತಿಯ ಜನರಿದ್ದರು, ಅವರು ಅದರಿಂದ ಹೊರಬರಲು ನನಗೆ ಸಹಾಯ ಮಾಡಿದರು. ಅದೇ ಕೊನೆ ಮತ್ತೆ ನಾನು ಟ್ರೋಲ್ಸ್ ಬಗ್ಗೆ ಹೆದರುವುದನ್ನು ಬಿಟ್ಟೆ” ಎಂದು ಚೈತ್ರಾ ಆಚಾರ್ ಹೇಳಿದ್ದಾರೆ.
ಮಾತು ಮುಂದುವರೆಸಿರುವ ಚೈತ್ರಾ “ನಮಗೆ ಸಂಪ್ರದಾಯವನ್ನು ಕಲಿಸಿದ್ದಾರೆ, ಆದರೆ ನಮ್ಮದೇ ಆದ ಆಯ್ಕೆಗೆ ಸ್ವಾತಂತ್ರ್ಯ ಇದೆ. ಹೌದು, ನಾನು ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಳ್ಳುವಂತೆ ದೇವರನಾಮವನ್ನು ಹಾಡುತ್ತೇನೆ. ನಿಮ್ಮ ಕೆಲಸದ ಬಗ್ಗೆ ಜನ ಮಾತನಾಡಲಿ, ನಿಮ್ಮ ವೈಯಕ್ತಿಕ ಆಯ್ಕೆಗಳ ಬಗ್ಗೆ ಅಲ್ಲ, ಎಲ್ಲರೂ ಟ್ರೋಲ್ಸ್ ಬಗ್ಗೆ ಅಷ್ಟು ಸುಲಭವಾಗಿ ತಲೆಕೆಡಿಸಿಕೊಳ್ಳದೇ ಇರಲು ಸಾಧ್ಯವಿಲ್ಲ. ನನಗೆ ನನ್ನ ಪೋಷಕರ ಬೆಂಬಲ ಇದೆ ಅದು ನನ್ನ ಅದೃಷ್ಟ. ಆದರೆ ಎಲ್ಲರೂ ಅದೃಷ್ಟವಂತರಲ್ಲ. ಹೊಸದಾಗಿ ಬಂದವರಿಗೆ ಇಂತಹ ಟ್ರೋಲ್‌ಗಳು ಮಾನಸಿಕವಾಗಿ ನೋವು ಕೊಡುತ್ತದೆ. ಅಂತಹವರು ಪೋಸ್ಟ್ ಮಾಡುವುದನ್ನು ಬಿಟ್ಟಬಿಡಬಹುದು.
‘ಮಹಿರ’ ಸಿನಿಮಾ ಮೂಲಕ ಚೈತ್ರಾ ಚಿತ್ರರಂಗ ಪ್ರವೇಶಿಸಿದರು. ‘ತಲೆದಂಡ’, ‘ಟೋಬಿ’, ‘ಸಪ್ತಸಾಗರದಾಚೆ ಎಲ್ಲೊ’ ಸೇರಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ‘ಉತ್ತರಕಾಂಡ’ ಸೇರಿ ಒಂದಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಗರುಡಗಮನ ವೃಷಭವಾಹನ’ ಚಿತ್ರದ ಚೈತ್ರಾ ಹಾಡಿದ ‘ಸೋಜುಗದ ಸೂಜುಮಲ್ಲಿಗೆ’ ಹಾಡು ದೊಡ್ಡಮಟ್ಟದಲ್ಲಿ ಹಿಟ್ ಆಗಿತ್ತು. ಆಕೆಯ ಗಾಯನಕ್ಕೂ ದೊಡ್ಡ ಅಭಿಮಾನಿ ಬಳಗವಿದೆ. ‘ಮಾಯಾಬಜಾರ್-2016’ ಹಾಗೂ ‘ಟಗರು ಪಲ್ಯ’ ಚಿತ್ರಗಳಲ್ಲಿ ಕೂಡ ಆಕೆ ಹಾಡು ಹಾಡಿದ್ದಾರೆ.