ಈ ಹಿಂದೆ ಸ್ಟೂಡೆಂಟ್ಸ್ ಮತ್ತು ಬಿಂದಾಸ್ ಗೂಗ್ಲಿ ಸಿನಿಮಾಗಳನ್ನ ಮಾಡಿ ಸೈ ಎನಿಸಿಕೊಂಡು ಸ್ಯಾಂಡಲ್ ವುಡ್ ನಲ್ಲಿ ಮಿಂಚು ಹರಸಿದ್ದ ನಿರ್ದೇಶಕ ಆರ್.ಎಸ್. ಸಂತೋಷ್ ಇದೀಗ ಕ್ಯಾಂಪಸ್ ಕ್ರಾಂತಿ ಸಿನಿಮಾ ಮೂಲಕ ಮತ್ತೆ ಮೋಡಿ ಮಾಡಲು ರೆಡಿಯಾಗಿದ್ದಾರೆ
ನಿರ್ದೇಶಕ ಸಂತೋಷ್ ಕುಮಾರ್ ನಿರ್ದೇಶನದ ಮೂರನೇ ಚಿತ್ರವು ಹೊಸಬರನ್ನು ಒಳಗೊಂಡಿದೆ – ಆರ್ಯ,ಆರತಿ ಮತ್ತು ಅಲಂಕಾರ್,ಇಶಾನ.. ಹಾಗು ಪ್ರಮುಖ ಸಹಕಲಾವಿದರು ಹನುಮಂತೇ ಗೌಡ, ಕೀರ್ತಿರಾಜ್, ವಾಣಿಶ್ರೀ, ಭವಾನಿ ಪ್ರಕಾಶ್, ರಣ್ ವೀರ್ ಮಂಗಳೂರು, ಧನಂಜಯ್, ನಂದಗೂಪಾಲ್.
ವಿ ಮನೋಹರ್ : ಸಂಗೀತ ನಿರ್ದೇಶಕ.
ಪಿ ಕೆ ಎಚ್ ದಾಸ್ : ಸಿನಿಮಾಟೋಗ್ರಾಫರ್.
ಚಿತ್ರಕ್ಕೆ ಕ್ಯಾಂಪಸ್ ಕ್ರಾಂತಿ ಎಂದು ಹೆಸರಿಡಲಾಗಿದ್ದು “ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುವುದನ್ನು ನಿಲ್ಲಿಸಿದ ಘಟನೆಗೆ ಸಂಬಂಧಿಸಿದ ಕಥೆ ಇದಾಗಿದೆ. ಕಥೆಯ ಹಿಂದಿನ ಕಾರಣ ಮತ್ತು ಕಾಲೇಜು ವಿದ್ಯಾರ್ಥಿಗಳ ಗುಂಪಿನೊಂದಿಗೆ ಸಂಪರ್ಕವಿದೆ. ಹಾಗಾಗಿ ಸಿನಿಮಾಕ್ಕೆ ಕ್ಯಾಂಪಸ್ ಕ್ರಾಂತಿಯೇ ಸರಿಯಾದ ಟೈಟಲ್ ಅಂತ ಅನಿಸಿತು ಫೆಬ್ರವರಿ ಕೊನೆಯ ವಾರ ಸಿನಿಮಾ ರಿಲೀಸ್ ಮಾಡಲು ರೆಡಿ ಆಗಿದೆ…