ಹೌದು ಎರಡು ನಕ್ಷತ್ರಗಳ ಕಥೆ ಅಂದ್ಕೊಡಿದ್ರೆ ಬರೆಯೋದಕ್ಕೆ ಸುಲಭ ಆಗ್ತಿತ್ತೇನೋ ರಾತ್ರಿ ಆಕಾಶ ನೋಡಿಬಿಟ್ರೆ ಯಾವುದಾದರೂ ಎರಡು ನಕ್ಷತ್ರಗಳು ಹೊಳೆದು ಬರೆಸಿಬಿಡುತ್ತಿದ್ದವೇನೋ… ಗೆಳೆಯ ವೆಂಕಟ್ ಕನ್ನಡ ಗೋಲ್ಡನ್ ಫ್ರೇಮ್ಸಿಗೆ ಏನಾದ್ರೂ ಬರೆದುಕೊಡಿ ಸಾರ್ ಅಂತ ಕೇಳಿ ಅದಾಗ್ಲೆ ಹದಿನೈದು ದಿನಗಳಾಗಿಬಿಟ್ಟಿದೆ… ನನ್ನ ತಲೆಯಲ್ಲಿ “ಎರಡು ಮುತ್ತಿನ ಕಥೆ” ಅನ್ನೋ ಟೈಟಲ್ ಕೂಡ ಬಂದು ಕೂತು ಹದಿನೈದು ರಾತ್ರಿಗಳ ನಿದ್ದೆ ಕೆಡಿಸಿಯಾಗಿದೆ… ದೇಶ ‘ಕೊರೋನ ಲಾಕ್ ಡೌನ್’ ಇಂದ ಹೊರರ‍್ತಾ ಇದೆ ಆದ್ರೆ ನನ್ನ ಮನಸ್ಸು ‘ಕರುನಾಡಿನ ಎರಡು ಮುತ್ತುಗಳ’ ನಡುವೆ ಲಾಕ್ ಡೌನ್ ಆಗಿಬಿಟ್ಟಿದೆ… ಏನೂ ಬರೆಯಲಾಗುತ್ತಿಲ್ಲ… ಈ ಹದಿನೈದು ದಿನಗಳೂ ನನ್ನ ಮನಸ್ಸಿಗೆ ಹತ್ತಿರವಾದ ಶ್ರೀ.ಗಣೇಶ್ ಕಾಸರಗೋಡು ಸರ್ ಮತ್ತು ಶ್ರೀ.ರವಿ ಬೆಳಗೆರೆ ಸರ್ ಇಬ್ಬರ ಬರಹಗಳನ್ನೂ ನನ್ನ ರಾಶಿ ಪುಸ್ತಕಗಳ ಸಂಗ್ರಹದಿAದ ಹೊರತೆಗೆದು ಓದುತ್ತಾ ಹೋದೆ… ಓದುತ್ತಾ ಹೋದಂತೆಲ್ಲಾ ನಾನಿನ್ನು ಬರೆಯಲಾರೆ ಎನ್ನುವಷ್ಟು ಕುಬ್ಜನಾಗುತ್ತಾ ಹೋದೆ… ಮನಸ್ಸು ಬರೀತಾ ಇದೆ ಆದ್ರೆ ಅಕ್ಷರಗಳು ಮೂಡ್ತಾ ಇಲ್ಲ…ಹಾಗೆಂದುಕೊAಡೆ ಬರೆಯುತ್ತಿದ್ದೇನೆ…
ಹೌದು ಕನ್ನಡದ ಮಹಾನ್ ವ್ಯಕ್ತಿತ್ವಗಳಾದ ಅಪ್ಪಾಜಿಯ ಬಗ್ಗೆ ಶಂಕರ್‌ನಾಗ್‌ರ ಬಗ್ಗೆ ಹಿರಿಯರೆಲ್ಲ ಬರೆದು ಬಿಟ್ಟ ಮೇಲೆ ಬರೆಯೋಕ್ಕೆ ಇನ್ನೇನು ಉಳಿದಿದೆ ಅನ್ನೋ ಪ್ರಶ್ನೆಯನ್ನ ತಲೆಗೆ ಹಾಕ್ಕೊಂಡೇ ಬರೀತಾ ಇದೀನಿ… ಈ ಪ್ರಶ್ನೆಯ ಜೊತೆ ತಾಕಲಾಟದಲ್ಲಿದ್ದಾಗಲೇ ನನಗೊಂದಷ್ಟು ಅಪರೂಪದ ವಿಷಯಗಳು ಹೊಳೆದಿದ್ದು… ಅದನ್ನೇ ಈ ಪುಟ್ಟ ಬರಹದ ಮೂಲಕ ನಿಮ್ಮ ಮುಂದೆ ಇಡ್ತಾ ಇದೀನಿ…

ಅದು ಇಸವಿ ೧೯೭೮ ಕನ್ನಡ ಚಿತ್ರರಂಗಕ್ಕೆ ಶಂಕರ್‌ನಾಗ್ ರವರು “ಒಂದಾನೊAದು ಕಾಲದಲ್ಲಿ” ಸಿನೆಮಾದೊಂದಿಗೆ ಪಾದಾರ್ಪಣೆ ಮಾಡಿದ ವರ್ಷ… ಅದೇ ಇಸವಿ ೧೯೭೮ರಲ್ಲಿ ಅಪ್ಪಾಜಿಯವರ ೧೭೩ನೇ ಸಿನೆಮಾ “ಶಂಕರ್ ಗುರು” ಸಿನೆಮಾ ತೆರೆಕಂಡಿತ್ತು… ಇದು ಕಾಕತಾಳೀಯವೋ ಕನ್ನಡಮ್ಮನ ಆಶೀರ್ವಾದವೋ ನನಗಂತೂ ಅರ್ಥವಾಗಿಲ್ಲ… ‘ಶಂಕರ್ ಗುರು’ ಸಿನೆಮಾ ಬಂದ ವರ್ಷವೇ ‘ಶಂಕರ್ ನಾಗ್’ ಚಿತ್ರರಂಗಕ್ಕೆ ಕಾಲಿರಿಸಿದ್ದು ಪವಾಡವೋ ವಾಸ್ತವವೋ ಇನ್ನೂ ನನಗೆ ಅರ್ಥವಾಗಿಲ್ಲ… ಒಂದು ಶಂಕರ್ ನಾಗ್ ಎಂಬ ‘ಶಿಖರ’ ಮತ್ತೊಂದು ಡಾ.ರಾಜ್‌ಕುಮಾರ್ ಎಂಬ ‘ಮೇರು ಶಿಖರ’… ಒಬ್ಬರು ‘ವರನಟ’ ಮತ್ತೊಬ್ಬರು ‘ನಟವರ’…
ಇಸವಿ ೧೯೮೪ ಅಪ್ಪಾಜಿಯವರ ಜೊತೆ ಶಂಕರ್ ನಾಗ್ ನಟಿಸಿದ ‘ಅಪೂರ್ವ ಸಂಗಮ’ ರಿಲೀಸ್ ಆಗೇ ಬಿಡ್ತು… ಅರೆ ಒಬ್ಬ ವ್ಯಕ್ತಿ ಕಾಸರಗೋಡಿನ ಕುಂಞಗಾಡಿನ ಆನಂದಾಶ್ರಮದಲ್ಲಿ ಬಾಲ್ಯ ಕಳೆದು ದೂರದ ಮುಂಬೈನ ರಂಗಭೂಮಿಯಲ್ಲಿದ್ದವರು ಅಣ್ಣ ಅನಂತ್‌ನಾಗ್ ಮತ್ತು ಗಿರೀಶ್ ಕಾರ್ನಾಡರ ಹಠಕ್ಕೆ ಸಮ್ಮತಿಸಿ ನಟಿಸಿದ ಮೊದಲನೇ ಚಿತ್ರಕ್ಕೇ ರಾಷ್ಟçಪ್ರಶಸ್ತಿಯನ್ನೂ ಪಡೆದು ಅದಾದ ಆರೇ ವರ್ಷಗಳಲ್ಲಿ ‘ವರನಟ’ ಅಪ್ಪಾಜಿಯವರ ಜೊತೆ ತಮ್ಮನ ಪಾತ್ರದಲ್ಲಿ ನಟಿಸುವುದೆಂದರೆ ಸುಲಭದ ಮಾತಲ್ಲ ಬಿಡಿ… ಇದು ಕನ್ನಡಾಂಬೆಯ ವರವಿದ್ದವರಿಗೆ ಮಾತ್ರ ಸಿದ್ಧಿಸುವ ವರ ಅಂತ ನನಗೆ ಅನ್ನಿಸಿಬಿಡ್ತು…
ಕಾಕತಾಳೀಯವೋ ಏನೋ ಗೊತ್ತಿಲ್ಲ ಅಪ್ಪಾಜಿಯವರ ಬರೋಬ್ಬರಿ ಇನ್ನೂರ ಹತ್ತು ಚಿತ್ರಗಳಲ್ಲಿ ಅನೇಕ ಚಿತ್ರಗಳಲ್ಲಿ ಅವರ ಪಾತ್ರದ ಹೆಸರು ‘ಶಂಕರ್’ ಅಂತ್ಲೇ ಇದೆ… ಇನ್ನೂ ಅನೇಕ ಚಿತ್ರಗಳಲ್ಲಿ ‘ಶಂಕರ್’ ಅರ್ಥ ಬರೋ ಈಶ್ವರನ ಹೆಸರೇ ಇದೆ… ಇದು ಅಪ್ಪಾಜಿಯವರ ಜೊತೆ ಶಂಕರ್‌ನಾಗ್ ಬಂದು ಸೇರಿ ‘ಅಪೂರ್ವ ಸಂಗಮ’ ಆಗೋ ಮುನ್ಸೂಚನೆ ಇದ್ದಿರಲೂ ಬಹುದು…
ನಮ್ಮಲ್ಲಿ ಎಷ್ಟೋ ಜನಕ್ಕೆ ಅಪ್ಪಾಜಿಯವರನ್ನ ನೋಡಿದ್ರೇನೇ ಈಗಲೂ ಬದುಕುವ ಸ್ಫೂರ್ತಿ ಬರುತ್ತೆ… ಹಾಗೇ ಶಂಕರ್‌ನಾಗ್ ರವರನ್ನ ನೆನೆಸಿಕೊಂಡ್ರೆ ಬದುಕಿನ ಜೊತೆ ಹೋರಾಡುವ ಛಲ ಬರುತ್ತೆ… ಚಿತ್ರರಂಗದಲ್ಲಿರುವವರಿಗAತೂ ಇವರಿಬ್ಬರೂ ಒಂದು ರೀತಿ ಸರಸ್ವತಿಯ ಮುಂದೆ ಹಚ್ಚಿಟ್ಟಿರುವ ನಂದಾದೀಪಗಳೇ…
ಅಪ್ಪಾಜಿಯವರನ್ನ ಕಂಡು ಮಾತಾಡಿಸಿ ಪುನೀತರಾಗಿ ಧನ್ಯತಾ ಭಾವ ಹಂಚಿಕೊAಡವರನ್ನ ಹತ್ತಿರದಿಂದ ಕಂಡಾಗ ನಮಗೂ ಅದೇ ಪುಳಕ ಅದೇ ಧನ್ಯತಾ ಭಾವ ಕಾಡದೇ ಇರೋದಿಲ್ಲ… ಇದೇ ಕಾರಣಕ್ಕೆ ನಾನು ಈಗಲೂ ಗೆಳೆಯ ಚಿತ್ರಸಾಹಿತಿ ನಿರ್ದೇಶಕ ಕವಿರತ್ನ ವಿ.ನಾಗೇಂದ್ರಪ್ರಸಾದರ ಬಗ್ಗೆ ಅಸೂಯೆ ಪಟ್ಟಿದ್ದೂ ಇದೆ ಹಲುಬಿಕೊಂಡಿದ್ದೂ ಇದೆ… ಅದೇ ರೀತಿ ಅಪ್ಪಾಜಿಯವರನ್ನ ಬಲು ಹತ್ತಿರದಿಂದ ಕಂಡಿದ್ದ ನಿರ್ದೇಶಕರೂ ಆತ್ಮೀಯರೂ ಆದ ಎಸ್. ಗೋವಿಂದ್ ಸರ್ ಬಗ್ಗೇನೂ ನನ್ನ ಮನದಲ್ಲಿ ಅಭಿಮಾನ ಉಕ್ಕಿ ಬರುತ್ತದೆ… ಇರಲಿ ಸರಸ್ವತಿ ಅವರಿಬ್ಬರಂತೆ ಇನ್ನೂ ಅನೇಕರಿಗೆ ಈ ಎರಡು ಕನ್ನಡದ ಮುತ್ತುಗಳ ಹತ್ತಿರ ಸುಳಿದಾಡುವಂತೆ ಹರಸಿದ್ದಳು ಅಂತ ಕಾಣುತ್ತೆ…
ಶಂಕರ್‌ನಾಗ್ ರವರ ಬಗ್ಗೆ ನನಗಿದ್ದ ಅಭಿಮಾನ ಕೌತುಕಗಳಿಗೆ ಸಮಾಧಾನ ಸಿಕ್ಕಿದ್ದೇ ಅನಂತ್‌ನಾಗ್ ಸಾರ್ ಜೊತೆ ಕೆಲಸ ಮಾಡುವ ಪುಟ್ಟ ಅವಕಾಶ ಸಿಕ್ಕಾಗ… ಅವರ ಹತ್ತಿರ ಕೂತು ಅವರ ಕಣ್ಣುಗಳಲ್ಲಿ ಶಂಕರ್ ನಾಗ್ ರವರನ್ನೇ ಕಾಣುತ್ತಿದ್ದೆ… ‘ಪ್ರೇಮ ಪಲ್ಲಕ್ಕಿ’ ಚಲನಚಿತ್ರ ನಿರ್ಮಿಸಿದ ಹೆಚ್.ಎನ್.ಗಂಗಾಧರ್ ರವರಿಂದ ನನಗೆ ಆ ಸುಯೋಗ ಒದಗಿ ಬಂದಿತ್ತು… ಅನಂತ್‌ನಾಗ್ ಸಾರ್ ರವರನ್ನ ನೋಡಿದ್ರೆ ಸಾಕು ಅವರ ಬೆನ್ನ ಹಿಂದೆಯೇ ಶಂಕರ್ ನಾಗ್ ನಿಂತಿದ್ದಾರೆ ಅನ್ನಿಸ್ತಿತ್ತು… ಅನಂತ್ ಸಾರ್ ಕೂತಾಗ ನೋಡಿದಾಗ ನಕ್ಕಾಗ ನಟಿಸಿದಾಗ ಮಾತಾಡಿಸಿದಾಗ ಬೆನ್ನ ಮೇಲೆ ನೇವರಿಸಿದಾಗಲೆಲ್ಲ ಶಂಕರ್‌ನಾಗ್ ಸ್ಪರ್ಶ ಮಾಡ್ತಿದ್ದಾರೆ ಅನ್ನೋ ಭಾವನೆ ಮನಸ್ಸಿನಲ್ಲಿ ಮೂಡ್ತಾ ಇತ್ತು… ಈಗಲೂ ಅನಂತ್‌ನಾಗ್ ಸಾರ್ ಜೊತೆ ಮಾತಾಡಿದಾಗಲೆಲ್ಲಾ ಅದೇ ಅನುಭೂತಿ ಸಿಗುತ್ತದೆ… ಈ ಮಹಾನ್ ಅನುಭೂತಿಗೆ ಕಾರಣ ಕರ್ತರಾದವರು ಹಿರಿಯರಾದ ಶ್ರೀ.ಗಣೇಶ್ ಕಾಸರಗೋಡು ಸರ್ ರವರು…
ಇರಲಿ ಈ ‘ಎರಡು ಮುತ್ತಿನ ಕಥೆ’ಯ ತಾರ್ಕಿಕ ಅಂತ್ಯಕ್ಕೆ ಬರೋಣ… ಅದು ಇಸವಿ ೧೯೭೮ ಶಂಕರ್‌ನಾಗ್ ರವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಇಸವಿ ಅದೇ ಇಸವಿಯನ್ನ ಕಾಲ ತಿರುವಿ ಹಾಕಿತ್ತು ಇಸವಿ ೧೯೮೭ ಶಂಕರ್ ನಾಗ್ ರವರು ಅಪ್ಪಾಜಿಯವರನ್ನೇ ನಿರ್ದೇಶಿಸಿದ ‘ಒಂದು ಮುತ್ತಿನ ಕಥೆ’ ಚಲನಚಿತ್ರ ಬಿಡುಗಡೆಯಾದ ವರ್ಷ… ಅಂದಿನಿAದ ಇಂದಿನವರೆಗೂ ನಾನು ಎಷ್ಟೋ ಬಾರಿ ಈ ಚಿತ್ರವನ್ನ ನೋಡಿಬಿಟ್ಟಿದ್ದೇನೆ…
ಇನ್ನು ೧೯೯೦ರಲ್ಲಿ ಶಂಕರ್ ನಾಗ್ ನಮ್ಮನ್ನೆಲ್ಲ ಅಗಲಿ ಹೋದ ವರ್ಷ… ಮತ್ತದೇ ಚಡಪಡಿಕೆ ನೂರಾರು ಪ್ರಶ್ನೆಗಳು ಅಪ್ಪಾಜಿ ೧೯೮೯, ೧೯೯೦ ಮತ್ತು ೧೯೯೧ರಲ್ಲಿ ಅಂದರೆ ಬರೋಬ್ಬರಿ ಮೂರು ವರ್ಷಗಳ ಕಾಲ ಒಂದೇ ಒಂದು ಚಿತ್ರದಲ್ಲೂ ನಟಿಸಲಿಲ್ಲ ಏಕಿರಬಹುದು… ಶಂಕರ್ ನಾಗ್‌ರನ್ನ ಕಳೆದುಕೊಂಡ ದುಃಖ ಆ ಮುತ್ತುರಾಜರಿಗೂ ಆವರಿಸಿತ್ತಾ ಬಲ್ಲರ‍್ಯಾರು…?!
ಶ್ರೀಕಾಂತ್ ಬೇಲೂರ್