ದರ್ಶನ್ ಅಭಿಮಾನಿಗಳು ಹಾಗೂ ಪ್ರಥಮ್ ನಡುವೆ ವಿವಾದ ಹುಟ್ಟಿಕೊಂಡಿದೆ.Ink-on-Prathams-Face-in-Doddaballapur
ದೊಡ್ಡಬಳ್ಳಾಪುರದ ಸಮೀಪ ಪ್ರಥಮ್ ದೇವಸ್ಥಾನದ ಪೂಜೆಗೆ ಅತಿಥಿಯಾಗಿ ಹೋಗಿದ್ದರು. ಈ ವೇಳೆ ದರ್ಶನ್ ಅಭಿಮಾನಿಗಳು ಹಲ್ಲೆಗೆ ಮುಂದಾಗಿದ್ದರು ಎಂಬ ಆರೋಪ ಮಾಡಿದ್ದರು. ಇಲ್ಲಿಂದ ಪ್ರಥಮ್ ಹಾಗೂ ದರ್ಶನ್ ಅಭಿಮಾನಿಗಳ ವಿವಾದ ಬುಗಿಲೆದ್ದಿದೆ.
Ink-on-Prathams-Face-in-Doddaballapur ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ಪ್ರಥಮ್ ತಿರುಗಿಬಿದ್ದಿದ್ದಕ್ಕೆ ಕನ್ನಡ ಚಿತ್ರರಂಗದ ಕೆಲವು ಗಣ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ದರ್ಶನ್ ಅಭಿಮಾನಿಗಳು ಡ್ರ್ಯಾಗನ್ ತೋರಿಸಿ ಜೀವ ಬೆದರಿಕೆವೊಡ್ಡಿದ್ದಾರೆಂದು ಪ್ರಥಮ್ ಆರೋಪ ಮಾಡಿದ್ದರು. ಇದು ಮಾಧ್ಯಮ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸಂಚಲವನ್ನು ಸೃಷ್ಟಿಸಿತ್ತು. ಪ್ರಥಮ್ ಆರೋಪ ಮಾಡಿದ ಬೆನ್ನಲ್ಲೇ ಚಿತ್ರರಂಗದ ಹಲವು ಮಂದಿ ವಿರೋಧ ವ್ಯಕ್ತಪಡಿಸಿದರೆ, ಮತ್ತೆ ಕೆಲವು ಬೆಂಬಲ ನೀಡಿದ್ದಾರೆ.
ಇಷ್ಟೆಲ್ಲ ನಡೆಯುತ್ತಿರುವಾಗಲೇ ಪ್ರಥಮ್ ಮುಖಕ್ಕೆ ಮಸಿ ಬಳಿಯಲಾಗಿದೆ. ದೊಡ್ಡಬಳ್ಳಾಪುರದ ಪೊಲೀಸ್ ಠಾಣೆಗೆ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ವಿಚಾರಣೆಗೆಂದು ಹಾಜರಾಗಿದ್ದ ವೇಳೆ ಅವರ ಮುಖ ಮಸಿ ಬಳಿಯಲಾಗಿದೆ. ಪೊಲೀಸ್ ಠಾಣೆಯ ಮುಂದೆನೇ ಪ್ರಥಮ್ಗೆ ಮಸಿ ಬಳಿಸಿದ್ದು ಈಗ ಹಲವರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ. ಅಷ್ಟಕ್ಕೂ ಪ್ರಥಮ್ ಮುಖಕ್ಕೆ ಮಸಿ ಬಳೆದಿದ್ದು ಯಾರು?
ಅಂಬೇಡ್ಕರ್ ಅವರಿಗೆ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಅವಮಾನ ಮಾಡಿದ್ದಾರೆ ಎಂಬ ಕಾರಣವನ್ನು ಇಟ್ಟುಕೊಂಡು ದೊಡ್ಡಬಳ್ಳಾಪುರದ ಪೊಲೀಸ್ ಠಾಣೆಯ ಮುಂದೆ ವಿಚಾರಣೆಗೆ ಬಂದಿದ್ದ ಪ್ರಥಮ್ ಮೇಲೆ ಈ ದಲಿತ ಸಂಘಟನೆಯ ಮುಖಂಡರು ಇಂತಹದ್ದೊಂದು ಕೆಲಸಕ್ಕೆ ಮುಂದಾಗಿದ್ದರು.
ಪ್ರಥಮ್ಗೆ ದಲಿತ ಮುಖಂಡರು ಏಕಾಏಕಿ ಮಸಿ ಬಳಿಯಲು ಮುಂದಾದರು. ಆವಳೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ಎದುರೇ ಘಟನೆ ನಡೆದಿದ್ದರು. ಸ್ಥಳದಲ್ಲಿಯೇ ಇದ್ದ ಸಿಪಿಐ ಸಾಧಿಕ್ ಪಾಷಾ ಕೂಡ ದಲಿತ ನಾಯಕರೊಗೆ ಏನೂ ಮಾಡಬೇಡಿ ಮನವಿ ಮಾಡಿಕೊಂಡಿದ್ದರು.
ಇದರ ಹೊರತಾಗಿಯೂ ಪಟ್ಟು ಬಿಡದ ದಲಿತ ಮುಖಂಡರು ಪ್ರಥಮ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಮುಖಂಡರೊಬ್ಬರು ಪ್ರಥಮ್ ಮುಖಕ್ಕೆ ಬಸಿ ಬಳಿದಿದ್ದಾರೆ. ಈ ಘಟನೆಯಿಂದಾಗಿ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯ ಮುಂದೆ ಕೆಲ ಕಾಲ ಉದ್ವಿಘ್ನ ವಾತಾವಣೆ ಸೃಷ್ಟಿಯಾಗಿತ್ತು.