3ನೇ ದಿನ ಚಿಂದಿ ಕಲೆಕ್ಷನ್; ‘ಸು ಫ್ರಮ್ ಸೋ’ಗೆ ಟಿಕೆಟ್ ಸಿಗ್ತಿಲ್ಲ.. ಕಲೆಕ್ಷನ್ ಭರ್ಜರಿ

Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

‘ಸು ಫ್ರಮ್ ಸೋ’ ಕನ್ನಡ ಚಿತ್ರರಂಗಕ್ಕೆ ಹೊಸ ಭರವಸೆಯನ್ನು ಮೂಡಿಸಿದೆ.Raj-B-Shetty-Movie-Su-From-So-Day-3-Box-Office-Collection

ಕೇವಲ ಕಂಟೆಂಟ್ ಅನ್ನೇ ಪ್ರಧಾನವಾಗಿಸಿಕೊಂಡು ಈ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲಾಗಿತ್ತು. ಸ್ಟಾರ್‌ ಪಟ್ಟ ಇಲ್ಲದವರೇ ಈ ಸಿನಿಮಾದಲ್ಲಿ ನಟಿಸಿದ್ದು ಈ ಸಿನಿಮಾದ ಇನ್ನೊಂದು ಹೈಲೈಟ್. ‘ಹರಿ ಹರ ವೀರಮಲ್ಲು’ ಅಂತಹ ಸೂಪರ್‌ಸ್ಟಾರ್ ಸಿನಿಮಾದ ಮುಂದೆ ಕನ್ನಡದ ಸ್ಮಾಲ್ ಬಜೆಟ್‌ ಚಿತ್ರ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ.Kannada Movie Su From So Review: ಸಿನಿಮಾ ವಿಮರ್ಶೆ: ಸು ಫ್ರಮ್‌ ಸೋ (ಕನ್ನಡ)

ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾಗೆ ಟಿಕೆಟ್ ಸಿಗದೆ ಜನರು ಪರದಾಡುತ್ತಿದ್ದಾರೆ.Raj-B-Shetty-Movie-Su-From-So-Day-3-Box-Office-Collection ನಿನ್ನೆ ಭಾನುವಾರವಾಗಿದ್ದರಿಂದ (ಜುಲೈ 28) ಶೋಗಳನ್ನು ಹೆಚ್ಚು ಮಾಡಿದ್ದರೂ ಜನರಿಗೆ ಟಿಕೆಟ್ ಸಿಗಲಿಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ಜನರು ಟಿಕೆಟ್ ಸಿಗದೇ ನಿರಾಶರಾಗಿರುವುದನ್ನು ಹಂಚಿಕೊಂಡಿದ್ದರು. ಇಂತಹದ್ದೊಂದು ಸನ್ನಿವೇಶವನ್ನು ನೋಡದೇ ಬಹಳ ವರ್ಷಗಳೇ ಆಗಿತ್ತು.ಸು ಫ್ರಮ್ ಸೋ' ಪ್ರೀಮಿಯರ್ ಶೋ ನೋಡಿ ಹೊಗಳಿದ ಪ್ರೇಕ್ಷಕರು; ಚಿತ್ರದಲ್ಲಿ ಅಂಥದ್ದೇನಿದೆ? |  Su from So Review: Kannada Horror Comedy Movie Release Date and Reviews |  Sandalwood News in Kannada

ಇದೇ ಜೋಷ್‌ನಲ್ಲಿಯೇ ‘ಕಾಂತಾರ’ದಂತೆಯೇ ಈ ಸಿನಿಮಾವನ್ನು ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡಿ ಸಿನಿಮಾವನ್ನು ರಿಲೀಸ್ ಮಾಡಲಾಗುತ್ತಿದೆ. ಈಗಾಗಲೇ ಬಾಲಿವುಡ್‌ನ ಜನಪ್ರಿಯ ವಿತರಕ ಅನಿಲ್ ಟಂಡಾನಿ ‘ಸು ಫ್ರಮ್ ಸೋ’ ಸಿನಿಮಾವನ್ನು ಹಿಂದಿ ಭಾಷೆಯಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಹಾಗೇ ಮಲಯಾಳಂಗೂ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ಈ ಕ್ರೇಜ್‌ಗೆ ಕಾರಣ ಸಿನಿಮಾಗೆ ಸಿಗುತ್ತಿರುವ ರೆಸ್ಪಾನ್ಸ್. ಮೂರನೇ ದಿನ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಧೂಳೆಬ್ಬಿಸಿದೆ. ಹಾಗಿದ್ದರೆ ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರವೇನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.Su From So movie review: A superb natural comedy that doubles up as social  drama - India Today

‘ಸು ಫ್ರಮ್ ಸೋ’ 3ನೇ ದಿನದ ಕಲೆಕ್ಷನ್

ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಕ್ರೇಜಿ ಕಲೆಕ್ಷನ್ ಆಗುತ್ತಿದೆ. ಕರ್ನಾಟಕದಾದ್ಯಂತ ಈ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ‘ಕಾಂತಾರ’ ಬಳಿಕ ಇಂತಹದ್ದೊಂದು ಕ್ರೇಜ್ ಕನ್ನಡ ಚಿತ್ರರಂಗ ನೋಡಿರಲಿಲ್ಲ. 3ನೇ ದಿನ ಅಂದರೆ, ನಿನ್ನೆ (ಜುಲೈ 27) ‘ಸು ಫ್ರಮ್ ಸೋ’ ಸಿನಿಮಾದ ಎಲ್ಲಾ ಶೋಗಳಯ ಹೌಸ್‌ಫುಲ್ ಆಗಿದ್ದವು. ಜನರು ಟಿಕೆಟ್‌ಗಾಗಿ ಪರದಾಡಿದ್ದರು. ಸ್ಯಾಕ್ನಿಲ್ಕ್.ಕಾಮ್ ಪ್ರಕಾರ 3ನೇ ದಿನ ಬಾಕ್ಸಾಫೀಸ್‌ನಲ್ಲಿ ಬರೋಬ್ಬರಿ 3.86 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.Su From So Day 1 Boxoffice: ಮೊದಲ ದಿನ ಬಾಕ್ಸಾಫೀಸ್ ಶೇಕ್ ಮಾಡಿದ 'ಸು ಫ್ರಂ ಸೋ';  'ಎಕ್ಕ' ದಾಖಲೆ ಮುರೀತಾ? | 'Su From So' Storms Sandalwood: Newcomer Film Packs  Theatres, Challenges 'Ekka' at Box Office -

ಎಷ್ಟು ಶೋ ಹೌಸ್‌ಫುಲ್? ಎಲ್ಲೆಲ್ಲಿ ಹೇಗಿದೆ ರೆಸ್ಪಾನ್ಸ್?

ಮೂರನೇ ದಿನ ಸ್ಪೆಷಲ್ ಶೋಗಳನ್ನು ಅರೇಂಜ್ ಮಾಡಲಾಗಿತ್ತು. ಸಿನಿಮಾ ಟಿಕೆಟ್‌ಗಳಿಗಾಗಿ ಬೇಡಿಕೆ ಇಟ್ಟಿದ್ದ ಸಿನಿಪ್ರಿಯರು ‘ಸು ಫ್ರಮ್ ಸೋ’ ಶೋಗಳನ್ನು ಹೆಚ್ಚಿಸುವಂತೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಎರಡನೇ ದಿನದಿಂದಲೇ ಶೋಗಳ ಸಂಖ್ಯೆಯನ್ನು ಏರಿಕೆ ಮಾಡಲಾಗಿತ್ತು.ಬಹು ಬೇಡಿಕೆಯ ಮೇರೆಗೆ ಕರ್ನಾಟಕದಾದ್ಯಂತ ಭಾನುವಾರ 1000ಕ್ಕಿಂತಲೂ ಅಧಿಕ ಶೋಗಳನ್ನು ಪ್ರದರ್ಶನ ಮಾಡಲಾಗಿದೆ. ಎಲ್ಲಾ ಶೋಗಳಿಗೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

Su From So (Kannada) First Review: Is Raj Shetty Supernatural Comedy Film A  'Must Watch'? Gets 'Full Entertainment Package' Tag | Su From So (2025  Kannada Film) Early Review | Kannada Film

ಬಿಕೆಟಿ ಏರಿಯಾ 760 ಶೋಗಳು
ಎಂಎಂಸಿಎಚ್ 80 ರಿಂದ 90 ಶೋಗಳು
ಚಿತ್ರದುರ್ಗ-ದಾವಣಗೆರೆ 50 ರಿಂದ 60 ಶೋಗಳು
ಹುಬ್ಬಳ್ಳಿ 50 ರಿಂದ 60 ಶೋಗಳು
ಹೈದರಾಬಾದ್ ಕರ್ನಾಟಕ 20 ಶೋಗಳು

ಮೂರು ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

‘ಸು ಫ್ರಮ್ ಸೋ’ ಮೂರು ದಿನಗಳ ಕಲೆಕ್ಷನ್ ಸಖತ್ ಆಗಿದೆ. ಮೊದಲ ದಿನ 78 ಲಕ್ಷ ರೂಪಾಯಿ ಕಲೆಕ್ಷನ್ ಆಗಿತ್ತು. ಎರಡನೇ ದಿನ ಈ ಸಿನಿಮಾ 2.17 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಹಾಗೇ ಮೂರನೇ ದಿನ ಈ ಸಿನಿಮಾ 3.86 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಒಟ್ಟು ಮೂರು ದಿನಗಳಲ್ಲಿ ‘ಸು ಫ್ರಮ್ ಸೋ’ 6.81 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್.ಕಾಮ್ ವರದಿ ಮಾಡಿದೆ.ബ്ലോക്ക്ബസ്റ്റര്‍ കന്നഡ ഹൊറര്‍- കോമഡി ചിത്രം 'സു ഫ്രം സോ' മലയാളം പതിപ്പ്  ഓഗസ്റ്റ് ഒന്നിന്, Su from So,Kannada movie,Malayalam movie,dubbed  movie,horror-comedy,Dulquer Salmaan,JP ...

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ CINIPARK ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

You Will  Love   Like  These

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…