ಬಾಲಿವುಡ್‌ನಲ್ಲಿ ಯುವ ಪ್ರತಿಭೆಗಳ ಸಿನಿಮಾವೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.Mungaru-Male-to-Saiyaara
ಮೋಹಿತ್ ಸೂರಿ ನಿರ್ದೇಶಿಸಿದ ಈ ಸಿನಿಮಾ ಯುವ ಪ್ರೇಮಿಗಳ ಫೇವರಿಟ್ ಸಿನಿಮಾ ಆಗಿದೆ. ತಮ್ಮ ಪ್ರೇಮಿಗಳೊಂದಿಗೆ ಥಿಯೇಟರ್‌ಗಳಿಗೆ ನುಗ್ಗುತ್ತಿದ್ದಾರೆ. ಚೊಚ್ಚಲ ಸಿನಿಮಾದಲ್ಲಿಯೇ ಅಹಾನ್ ಪಾಂಡೆ ಹಾಗೂ ಅನೀತ್ ಪಡ್ಡಾ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಈ ಯುವ ಜೋಡಿ ಈಗ ಯುವ ಪ್ರೇಮಿಗಳ ಫೇವರಿಟ್ ಆಗಿದ್ದೇಕೆ? ಅಷ್ಟಕ್ಕೂ ಈ ಸಿನಿಮಾ ಯುವಕರಿಗೆ ಅಷ್ಟೊಂದು ಇಷ್ಟ ಆಗಿದ್ದೇಕೆ?
ಇಂದಿನ ಪೀಳಿಗೆ ಪ್ರೀತಿ ಹಾಗೂ ಗುರಿ ಇವೆರಡನ್ನೂ ಬ್ಯಾಲೆನ್ಸ್ ಮಾಡುವುದಕ್ಕೆ ಪರದಾಡುತ್ತಿದ್ದಾರೆ. ಇವೆರಡರಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕು? ಯಾವುದಕ್ಕೆ ಎಷ್ಟು ಸಮಯ ಕೊಡಬೇಕು ಅನ್ನೋ ಗೊಂದಲದಲ್ಲಿ ಇರುತ್ತಾರೆ. ಮುಂದಿನ ಭವಿಷ್ಯದ ಬಗ್ಗೆ ಕ್ಲಾರಿಟಿ ಇಲ್ಲದೆ ಪ್ರೀತಿ ಮಾಡಿ ಬಳಿಕ ಪೇಚಿಗೆ ಸಿಕ್ಕಿಕೊಳ್ಳುವುದು ಸಾಮಾನ್ಯವಾಗಿದೆ. ಇದೇ ಎಳೆಯನ್ನು ಒಟ್ಟುಕೊಂಡು ‘ಸೈಯಾರಾ’Mungaru-Male-to-Saiyaara ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ.
ಸೈಯಾರಾ’ ಸಿನಿಮಾದಲ್ಲಿಯೂ ಕ್ರಿಶ್ ಹಾಗೂ ವಾಣಿ ಎಂಬ ಇರಡು ಪಾತ್ರಗಳು ಪ್ರೀತಿ ಮತ್ತು ಗುರಿ ಎರಡನ್ನೂ ಬ್ಯಾಲೆನ್ಸ್ ಮಾಡುವುದಕ್ಕೆ ಕಷ್ಟ ಪಡುತ್ತಾರೆ. ಈ ಹಂತದಲ್ಲಿ ಈ ಜೋಡಿ ಎದುರಿಸುವ ಸವಾಲುಗಳು, ಕಷ್ಟಗಳು, ಖಿನ್ನತೆ, ದುರಂತಗಳು ಹೀಗೆ ಒಂದಿಷ್ಟು ಎಲಿಮೆಂಟ್ಸ್ ಅನ್ನು ಸೇರಿಸಿ ಚಿತ್ರಕಥೆಯನ್ನು ಹೆಣೆಯಲಾಗಿದೆ. ಇಂತಹ ಎಳೆಯನ್ನೇ ಇಟ್ಟುಕೊಂಡು ಸಾಕಷ್ಟು ಸಿನಿಮಾಗಳು ಈಗಾಗಲೇ ಬಂದಿವೆ. ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಅದರಲ್ಲೊಂದು ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಮುಂಗಾರು ಮಳೆ’. ‘ಸೈಯಾರಾ’ ಶೈಲಿಯ ಟಾಪ್ 5 ಸಿನಿಮಾಗಳು ಯಾವ್ಯಾವ ಓಟಿಟಿ ವೇದಿಕೆಯಲ್ಲಿದೆ ತಿಳಿಯುವುದಕ್ಕೆ ಮುಂದೆ ಓದಿ.
‘ಆಶಿಕಿ 2’
2013ರಲ್ಲಿ ತೆರೆಕಂಡಿದ್ದ ಬಾಲಿವುಡ್ ಸಿನಿಮಾ ‘ಆಶಿಕಿ 2’ ಕೂಡ ಯುವ ಪ್ರೇಮಿಗಳ ದುರಂತ ಕಥೆಯನ್ನು ತೆರೆಮೇಲೆ ತಂದಿತ್ತು. ಮದ್ಯಪಾನ ಚಟದಿಂದ ಕಳೆದು ಹೋಗುತ್ತಿರುವ ಯುವ ಗಾಯಕ ರಾಹುಲ್, ತನ್ನ ಧ್ವನಿಯಿಂದಲೇ ಜನಪ್ರಿಯತೆ ಗಳಿಸುತ್ತಿರುವ ಗೆಳತಿ ಆರೋಹಿ. ಇಬ್ಬರೂ ಪ್ರೀತಿಯಲ್ಲಿ ಬಿದ್ದ ಬಳಿಕ ಸಾಕಷ್ಟು ಕನಸುಗಳನ್ನು ಕಂಡಿದ್ದರು. ತನ್ನ ಪ್ರೇಮಿಯ ಕನಸಿಗೆ ಆಸರೆಯಾಗಿದ್ದ ರಾಹುಲ್ ತನ್ನ ಬದುಕನ್ನೇ ಮರೆತಿದ್ದ. ಪ್ರೀತಿ ಶುದ್ಧವಾಗಿತ್ತು. ಆದರೆ, ನೋವಿನಿಂದ ಕೂಡಿತ್ತು. ಪ್ರೀತಿ ಹೂವಿನಂತಿತ್ತು. ಆದರೆ ದುರಂತ ಕಂಡಿತ್ತು. ಈ ಸಿನಿಮಾ ಕೂಡ ಅಂದಿನ ಯುವ ಪ್ರೇಮಿಗಳ ಮನಸ್ಸನ್ನು ಗೆದ್ದಿತ್ತು.
ಮುಂಗಾರು ಮಳೆ
ಭಗ್ನ ಪ್ರೇಮದ ಕಥೆಗಳು ಸಿನಿಪ್ರೇಮಿಗಳ ಮನಸ್ಸು ಗೆದ್ದಿರೋ ಸಾಕಷ್ಟು ಉದಾಹರಣೆಗಳಿವೆ. ಇದು ಕೇವಲ ಬಾಲಿವುಡ್‌ನಲ್ಲಿ ಅಷ್ಟೇ ಅಲ್ಲ. ಸ್ಯಾಂಡಲ್‌ವುಡ್‌ನಲ್ಲೂ ಇವೆ. ಅದಕ್ಕೆ ಉತ್ತಮ ಉದಾಹರಣೆ ‘ಮುಂಗಾರು ಮಳೆ’. ಇದು ಭಗ್ನ ಪ್ರೇಮಿಯ ಕಥೆಯೇ. ಈ ಸಿನಿಮಾ ಕನ್ನಡದ ಚಿತ್ರರಂಗದ ದಿಕ್ಕನ್ನು ಹೇಗೆ ಬದಲಿಸಿತ್ತು ಅನ್ನೋದ ಕಣ್ಮುಂದೆನೇ ಇದೆ. ಅದೇ ಪ್ರೀತಿ, ಬ್ರೇಕಪ್, ನೋವು, ಉದ್ದುದ್ದ ಡೈಲಾಗ್ ಎಲ್ಲವೂ ಇತ್ತು. ಆದರೆ, ಅದು ಕನ್ನಡದ ನೆಟಿವಿಟಿಗೆ ತಕ್ಕಂತೆ ಇತ್ತು.
ಜಾನು/96
ತೆಲುಗು ಸಿನಿಮಾ ‘ಜಾನು’ ಕೂಡ ಎಮೋಷನಲ್ ಸಿನಿಮಾ. ಹೈಸ್ಕೂಲ್ ಪ್ರೇಮಿಗಳು ಕಾರಣಾಂತರಗಳಿಂದ ಬೇರೆಯಾಗುತ್ತಾರೆ. ಆದರೆ, 15 ವರ್ಷಗಳ ಬಳಿಕ ಮತ್ತೆ ರೀ ಯೂನಿಯನ್‌ನಲ್ಲಿ ಭೇಟಿಯಾದಾಗ ಅವರ ಬದುಕಿನ ಒಂದೊಂದೇ ಪುಟಗಳು ತೆರೆದುಕೊಳ್ಳುತ್ತವೆ. ತನ್ನ ಗೆಳೆಯನ್ನು ನೋಡುವುದಕ್ಕೆ ಸಿಂಗಾಪುರದಿಂದ ಬರುವ ಜಾನುಗೆ ರಾಮ್ ಇನ್ನೂ ತನ್ನದೇ ನೆನಪಿನಲ್ಲಿ ಹಾಗೇ ಕುವರನಾಗಿ ಉಳಿದುಕೊಂಡಿರುವ ವಿಷಯ ಗಮನಕ್ಕೆ ಬರುತ್ತೆ. ಈ ಸಿನಿಮಾ ರಿಯಲ್ ಲವ್ ಅನ್ನು ಅನಾವರಣ ಮಾಡಿತ್ತು. ಇದು ತಮಿಳಿನ ಸೂಪರ್ ಹಿಟ್ ಸಿನಿಮಾ ’96’ ರಿಮೇಕ್.
ಹೃದಯಂ
ಎಂಜಿನಿಯರಿಂಗ್ ಓದುವುದಕ್ಕೆ ಚೈನ್ನೈಗೆ ತೆರಳುವ ಅರುಣ್‌ಗೆ ಅದೇ ಕಾಲೇಜಿನಲ್ಲಿ ಓದುತ್ತಿರುವ ದರ್ಶನಾ ಜೊತೆ ಲವ್ ಆಗುತ್ತೆ. ಆ ಪ್ರೀತಿ ನೋವಿನಲ್ಲಿ ಕೊನೆಯಾಗುತ್ತೆ. ಈ ನೋವಿನಿಂದ ಹೊರ ಬರುವುದಕ್ಕೆ ಪರದಾಡುವ ಅರುಣ್ ಕೊನೆಗೆ ಫೋಟೊಗ್ರಫಿಯಲ್ಲಿ ಆಸಕ್ತಿ ಬೆಳೆದು, ಬ್ರೇಕಪ್‌ನಿಂದ ಹೊರ ಬರುತ್ತಾನೆ. ಬಳಿಕ ನಿತ್ಯಾ ಜೊತೆ ಬದುಕನ್ನು ಕಟ್ಟಿಕೊಳ್ಳುತ್ತಾನೆ. ಕಾಲೇಜಿನ ರೀ ಯೂನಿಯನ್‌ನಲ್ಲಿ ದರ್ಶನಾಳನ್ನು ಮತ್ತೆ ಭೇಟಿಯಾಗುವ ಹುಟ್ಟುವ ಭಾವನೆಗಳು ಯುವಕರ ಮೆಚ್ಚುಗೆ ಗಳಿಸಿತ್ತು.
ರಾಮಯ್ಯ ವಸ್ತಾವಯ್ಯ
ಪ್ರಭುದೇವ ನಿರ್ದೇಶಿಸಿದ ‘ರಾಮಯ್ಯ ವಸ್ತಾವಯ್ಯ’ ಸಿನಿಮಾ ಕೂಡ ಆರಂಭದಲ್ಲಿ ಜಾಲಿ ಜಾಲಿ ಎನಿಸಿದರೂ, ಸಿನಿಮಾ ಮುಂದಕ್ಕೆ ಸಾಗುತ್ತಿದ್ದಂತೆ ಭಾವನಾತ್ಮಕವಾಗಿತ್ತು. ರಿಯಲ್ ಲವ್ ಹೇಗಿರುತ್ತೆ ಅನ್ನೋದನ್ನು ತೆರೆಮೇಲೆ ತರಲಾಗಿತ್ತು. ಪ್ರಭುದೇವ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.