ಸ್ಯಾಂಡಲ್‌ವುಡ್‌ನ ಉದಯೋನ್ಮುಖ ನಟಿ Sanjana Anand Kannada Actress ಸಂಜನಾ ಆನಂದ್.
ಇತ್ತೀಚೆಗೆ ಇವರ ಬಳಿಗೆ ಒಳ್ಳೊಳ್ಳೆ ಪ್ರಾಜೆಕ್ಟ್‌ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ದುನಿಯಾ ವಿಜಯ್ ಜೊತೆ ನಟಿಸಿದ ‘ಸಲಗ’ ಸಿನಿಮಾದಿಂದ ಅವರ ಅದೃಷ್ಟ ಬದಲಾಗಿದೆ. ಇತ್ತೀಚೆಗೆ ಯುವ ರಾಜ್‌ಕುಮಾರ್ ಜೊತೆ ನಟಿಸಿದ ‘ಎಕ್ಕ’ ಸಿನಿಮಾದಲ್ಲಿಯೂ ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ.
30 ವರ್ಷದ ಸಂಜನಾ ಆನಂದ್ Sanjana Anand Kannada Actress ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾ 2019ರಲ್ಲಿ ರಿಲೀಸ್ ಆಗಿತ್ತು. ಅಲ್ಲಿಂದ ಹಂತ ಹಂತವಾಗಿ ಚಿತ್ರರಂಗದಲ್ಲಿ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಬಂದಿದ್ದಾರೆ. ಅದೇ ವರ್ಷ ‘ಮಳೆ ಬಿಲ್ಲು’ ಎನ್ನುವ ಇನ್ನೊಂದು ಸಿನಿಮಾ ರಿಲೀಸ್ ಆಗಿತ್ತು. ಮಠ ಗುರುಪ್ರಸಾದ್ ಜೊತೆ ನಟಿಸಿದ ‘ಕುಷ್ಕ’ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಿದ್ದರು.
ಸಿನಿಮಾದ ಜೊತೆಗೆ ‘ಹನಿಮೂನ್’ ಎನ್ನುವ ವೆಬ್ ಸೀರಿಸ್‌ನಲ್ಲಿಯೂ ನಟಿಸಿದ್ದಾರೆ. ಕೈಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಸಂಜನಾ ಆನಂದ್ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುತ್ತಿರುವಾಗಲೇ ಅವರಿಗೆ ಸಿಕ್ಕಿದ್ದು ದುನಿಯಾ ವಿಜಯ್ ನಟಿಸಿ, ನಿರ್ದೇಶಿಸುತ್ತಿರುವ ‘ಸಲಗ’ ಸಿಕ್ಕಿತ್ತು. ಅಲ್ಲಿಂದ ಮತ್ತೆ ಹಿಂತಿರುಗಿ ನೋಡಿಲ್ಲ. ಈಗ ಕನ್ನಡ, ತೆಲುಗು ಅಂತ ಬ್ಯುಸಿಯಾಗಿದ್ದಾರೆ. ಹಾಗಿದ್ದರೆ, ಸಂಜನಾ ಆನಂದ್ ಒಂದು ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು? ಈ ಸೀಕ್ರೆಟ್ ಅನ್ನು ರಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ.
ನಾಯಕಿಯರಿಗೆ ಸಂಭಾವನೆ ವಿಚಾರದಲ್ಲಿ ಅನ್ಯಾಯವಾಗುತ್ತಿದೆ ಅನ್ನೋದ ಕೂಗು ಕೇಳಿ ಬರುತ್ತಲೇ ಇರುತ್ತೆ. ಇದು ನಿನ್ನೆ ಮೊನ್ನೆಯ ಸಮಸ್ಯೆ ಅಲ್ಲ. ದಶಕಗಳಿಂದ ನಟಿಯರಿಗೂ ಸರಿಯಾದ ಸಂಭಾವನೆ ಸಿಗಬೇಕು ಎನ್ನುವ ಕೂಗಿ ಹೇಳುತ್ತಲೇ ಇದೆ. ಅದನ್ನು ಎಕ್ಕ ಸಿನಿಮಾದ ನಟಿ ಸಂಜನಾ ಆನಂದ್ ಕೂಡ ಈ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ. ಹಾಗೇ ತಮ್ಮ ಸಂಭಾವನೆ ಬಗ್ಗೆ ಸೀಕ್ರೆಟ್ ಅನ್ನು ಬಿಟ್ಟುಕೊಟ್ಟಿದ್ದಾರೆ.
“ಸಂಭಾವನೆ ವಿಷಯದಲ್ಲಿ ಈಗ ಸ್ವಲ್ಪ ಪರ್ವಾಗಿಲ್ಲ. ಆದರೂ ಹೀರೋಗಳಿಗೆ ಹೋಲಿಕೆ ಮಾಡಿದರೆ ಇನ್ನೂ ಸಣ್ಣ ಮೊತ್ತವೇ ಇರೋದು. ಕೆಲವು ಸಿನಿಮಾಗಳು ಡಬಲ್ ಡಿಜಿಟ್ ಆಗಿದೆ. ಇನ್ನು ಕೆಲವು ಸಿನಿಮಾಗಳು ಆಗಿಲ್ಲ. ಈಗ ಒಂದಿಷ್ಟು ಬದಲಾಗಿದೆ. ಮುಂಚೆ ಎಲ್ಲಾ ಹಾಕಿದ ಬಟ್ಟೆಯನ್ನು ರಿಪೀಟ್ ಮಾಡಬಾರದು ಅನ್ನೋ ಮೈಂಡ್ ಸೆಟ್ ಇತ್ತು. ಈಗ ಅದೆಲ್ಲ ಇಲ್ಲ” ಎಂದು ಹೇಳಿಕೊಂಡಿದ್ದಾರೆ.
ಹಾಗೆಯೇ ಸಿನಿಮಾದ ಬಂದ ಸಂಭಾವನೆಯನ್ನು ಹೇಗೆ ಉಳಿತಾಯ ಮಾಡುತ್ತಿದ್ದಾರೆ. ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆಂದು ರಿವೀಲ್ ಮಾಡಿದ್ದಾರೆ. “ನಾನು ದುಡಿದ ಹಣವನ್ನೆಲ್ಲ ನನ್ನ ಅಮ್ಮನಿಗೆ ಕೊಡುತ್ತೇನೆ. ನಾನು ಹಣವನ್ನು ಹೂಡಿಕೆ ಮಾಡಿದ್ದೆಲ್ಲ ಜಮೀನಿನ ಮೇಲೆನೇ. ಅಷ್ಟೇ ನನಗೆ ಗೊತ್ತಿರೋದು. ಬೇರೆ ಯಾವುದರಲ್ಲೂ ಹೂಡಿಕೆ ಮಾಡಿಲ್ಲ. ಬಂದಿದ್ದನ್ನೆಲ್ಲ ಸೇಫ್ ಆಗಿ ಎಫ್‌ಡಿಯಲ್ಲಿ ಇಟ್ಟು, ಜಮೀನು ತೆಗೆದುಕೊಂಡಿರುವುದು ನೆನಪಿದೆ. ಹಂಗೆ ಹಿಂಗೆ ಮಾಡಿ ಒಂದೆರಡು ಸೈಟ್ ತೆಗೆದುಕೊಂಡಿದ್ದೇನೆ. ಬೇರೆ ತರ ಎಲ್ಲೂ ಹೂಡಿಕೆ ಮಾಡಿಲ್ಲ.”