ಕನ್ನಡದಲ್ಲಿ ಬಹಳ ದಿನಗಳ ಬಳಿಕ ಯುವ ನಟರ ಸಿನಿಮಾಗಳು ಅಖಾಡಕ್ಕೆ ಇಳಿಯುವುದಕ್ಕೆ ಸಜ್ಜಾಗಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ‘ಎಕ್ಕ’ ಹಾಗೂ ‘ಜೂನಿಯರ್’ yakka-vs-junior ಈ ಎರಡು ಸಿನಿಮಾಗಳು ರಿಲೀಸ್ ಆಗುತ್ತಿವೆ. ‘ಎಕ್ಕ’ ಯುವ ರಾಜ್‌ಕುಮಾರ್ ನಟನೆಯ ಎರಡನೇ ಸಿನಿಮಾ. ‘ಜೂನಿಯರ್’ ಗಾಲಿ ಜನಾರ್ಧನ ರೆಡ್ಡಿಯ ಪುತ್ರ ಕಿರೀಟಿ ನಟನೆಯ ಚೊಚ್ಚಲ ಸಿನಿಮಾ. ಈಗಾಗಲೇ ಸಿನಿಮಾ ಹಾಡುಗಳು ಹಾಗೂ ಟೀಸರ್, ಟ್ರೈಲರ್‌ಗಳು ಸಿನಿಪ್ರಿಯರಿಗೆ ಕಿಕ್ ಕೊಟ್ಟಿವೆ.
‘ಎಕ್ಕ’ ಹಾಗೂ ‘ಜೂನಿಯರ್’ ಎರಡೂ ಸಿನಿಮಾಗಳು ಒಂದೇ ದಿನ ರಿಲೀಸ್ ಆಗುತ್ತಿದ್ದು, ಬಾಕ್ಸಾಫೀಸ್‌ನಲ್ಲಿ ಯಾವ ಫೈಟ್ ಕೊಡುತ್ತೆ ಅನ್ನೋ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ. ಎರಡೂ ತಂಡಗಳು ಕೂಡ ಭರ್ಜರಿಯಾಗಿಯೇ ಪ್ರಚಾರ ಮಾಡಿವೆ. ಎರಡೂ ಸಿನಿಮಾಗಳಿಗೂ ಬೇರೆ ಬೇರೆ ವರ್ಗದಲ್ಲಿ ಅಪಾರ ಅಭಿಮಾನಿಗಳು ಇದ್ದಾರೆ. ಹೀಗಾಗಿ ಎರಡು ಸಿನಿಮಾಗಳಲ್ಲಿ ಪ್ರೇಕ್ಷಕರು ಯಾವುದಕ್ಕೆ ಗ್ರೀನ್ ಸಿಗ್ನಲ್ ಕೊಡುತ್ತಾರೆ ಅನ್ನೋ ಕುತೂಹಲ ಮೂಡಿಸಿದೆ.
ಒಂದು ವೇಳೆ ಈ ಎರಡೂ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಚಮತ್ಕಾರ ಮಾಡಿದರೆ, ಇಲ್ಲಿಂದ ಕನ್ನಡ ಚಿತ್ರರಂಗದ ಗೆಲುವಿನ ಓಟ ಮತ್ತೆ ಆರಂಭ ಆದಂತೆ. ಅಷ್ಟಕ್ಕೂ ಯುವ ರಾಜ್‌ಕುಮಾರ್ ‘ಎಕ್ಕ’ ಹಾಗೂ ಕಿರೀಟಿಯ ಚೊಚ್ಚಲ ಸಿನಿಮಾ ‘ಜೂನಿಯರ್’ ಅನ್ನು ಯಾಕೆ ನೋಡಬೇಕು? ಈ ಎರಡು ಸಿನಿಮಾಗಳಿಂದ ಪ್ರೇಕ್ಷಕರಿಗೆ ಸಿಗೋದೇನು? ಐದು ಪ್ರಮುಖ ಕಾರಣಗಳು ಇಲ್ಲಿವೆ.
‘ಎಕ್ಕ’ ಮಾಸ್ Vs ‘ಜೂನಿಯರ್’ ಕ್ಲಾಸ್ yakka-vs-junior
ಯುವ ರಾಜ್‌ಕುಮಾರ್ ಎರಡನೇ ಸಿನಿಮಾದಿಂದಲೇ ತಮ್ಮ ದಾಟಿಯನ್ನು ಬದಲಿಸಿಕೊಂಡಿದ್ದಾರೆ. ರಗಡ್ ಲುಕ್‌ನಲ್ಲಿ ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಹೊರಟಿದ್ದಾರೆ. ‘ಎಕ್ಕ’ ಮಾಸ್ ಸಿನಿಮಾ. ಹೀಗಾಗಿ ಮಾಸ್ ಸಿನಿಮಾ ಪ್ರಿಯರಿಗೆ ‘ಎಕ್ಕ’ ಕಿಕ್ ಕೊಡಬಹುದು. ಮಾಸ್ ಫೈಟ್, ಮಾಸ್ ಡೈಲಾಗ್ ಕೇಳುವುದಕ್ಕೆ ಸಿಗುತ್ತೆ. ಇದೊಂದು ಪಕ್ಕಾ ಲೋಕಲ್ ಸಿನಿಮಾ. ಅದೇ ಕಿರೀಟಿ ನಟನೆಯ ‘ಜೂನಿಯರ್’ ಕ್ಲಾಸ್ ಸಿನಿಮಾ. ಈ ಸಿನಿಮಾದಲ್ಲಿಯೂ ಮಸ್ತ್ ಆಗಿರುವ ಫೈಟ್ ಇದೆ. ಸೂಪರ್ ಆಗಿರೋ ಡ್ಯಾನ್ಸ್ ಇದೆ. ಇವೆಲ್ಲವೂ ಕ್ಲಾಸ್ ಆಡಿಯನ್ಸ್‌ಗೆ ಇಷ್ಟ ಆಗಬಹುದು.
ಬಜೆಟ್ Vs ಬಿಗ್ ಬಜೆಟ್
ಯುವ ಸಿನಿಮಾವನ್ನು ಮೂರು ನಿರ್ಮಾಣ ಸಂಸ್ಥೆಗಳು ಸೇರಿ ನಿರ್ಮಿಸಿವೆ. ಪಿಆರ್‌ಕೆ ಸ್ಟುಡಿಯೋ, ಜಯಣ್ಣ ಫಿಲಂಸ್ ಹಾಗೂ ಕೆಆರ್‌ಜಿ ಈ ಸಿನಿಮಾಗೆ ಹಣ ಹೂಡಿಕೆ ಮಾಡಿದ್ದರೂ ಹಿತ ಹಾಗೂ ಮಿತವಾದ ಬಜೆಟ್‌ನಲ್ಲಿ ಸಿನಿಮಾ ಮಾಡಲಾಗಿದೆ. ಕಂಟೆಂಟ್ ಕಡೆಗೆ ಹೆಚ್ಚು ಒತ್ತುಕೊಟ್ಟಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಇತ್ತ ‘ಜೂನಿಯರ್’ ಸಿನಿಮಾವನ್ನು ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಸುಮಾರು ₹30 ಕೋಟಿವರೆಗೂ ಹಣ ಹೂಡಿಕೆ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಹೀಗಾಗಿ ಸಿನಿಮಾ ಸಖತ್ ಕಲರ್‌ಫುಲ್ ಆಗಿರುತ್ತೆ.
ಮದರ್ ಸೆಂಟಿಮೆಂಟ್ Vs ಫಾದರ್ ಸೆಂಟಿಮೆಂಟ್
ಯುವರಾಜ್‌ಕುಮಾರ್ ‘ಎಕ್ಕ’ ಮಾಸ್ ಸಿನಿಮಾ ಆಗಿದ್ದರೂ, ಸೆಂಟಿಮೆಂಟ್ ಸೀನ್‌ಗಳನ್ನು ನಿರೀಕ್ಷೆ ಮಾಡಬಹುದು. ರೋಹಿತ್ ಪದಕಿ ನಿರ್ದೇಶಿಸಿದ ಸಿನಿಮಾಗಳಲ್ಲಿ ಮದರ್ ಸೆಂಟಿಮೆಂಟ್ ಅನ್ನು ನಿರೀಕ್ಷೆ ಮಾಡಬಹುದು. ಆದರೆ, ಕಿರೀಟಿ ಸಿನಿಮಾ ಜೂನಿಯರ್‌ನಲ್ಲಿ ಫಾದರ್ ಸೆಂಟಿಮೆಂಟ್ ಇದೆ. ಈ ಎರಡೂ ಸಿನಿಮಾಗಳ ಕಂಟೆಂಟ್ ಏನೇ ಇದ್ದರೂ ಸೆಂಟಿಮೆಂಟ್‌ಗಳಿಗೆ ಕೊರತೆ ಇರೋದಿಲ್ಲ.
‘ಎಕ್ಕ’ ರಿಲೀಸ್ Vs ‘ಜೂನಿಯರ್’ ರಿಲೀಸ್
ಯುವ ರಾಜ್‌ಕುಮಾರ್ ಸಿನಿಮಾ ಕನ್ನಡದ ಪ್ರೇಕ್ಷಕರಿಗೆ ಅಂತಲೇ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಈ ಸಿನಿಮಾ ಕರ್ನಾಟಕದಲ್ಲಿ ಸುಮಾರು 210 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗುತ್ತಿದೆ. ಅದೇ ‘ಜೂನಿಯರ್’ ಸಿನಿಮಾ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಸುಮಾರು 240 ಸ್ಕ್ರೀನ್‌ಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.