ಕನ್ನಡ ಚಿತ್ರರಂಗ ಇತಿಹಾಸ ಪುಸ್ತಕದಲ್ಲಿ ಬಂಗಾರದ ಪುಟವೇ ಆಗಿರುವ ಬಂಗಾರದ ಮನುಷ್ಯ ಚಿತ್ರ ಬಿಡುಗಡೆಯಾಗಿ ಇದೀಗ ಐವತ್ತು ವರುಷ… ಆ ನಿಮಿತ್ತ ಇದೇ ಡಿಸೆಂಬರ್ ೨೨ರಂದು ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಸಮಾರಂಭವೊಂದನ್ನ ಹಮ್ಮಿಕೊಂಡಿದೆ ಚಿತ್ರಸಂತೆ ತಂಡ. ಡಾಕ್ಟರ್ ರಾಜ್ ಕುಮಾರ್ ಭಾರತಿ ವಿಷ್ಣುವರ್ಧನ್ ಮುಖ್ಯಭೂಮಿಕೆಯ ಈ ಚಿತ್ರ ರೈತರ ಬದುಕಿನ ಭಾಗದಂತಿರುವ ಕಾರಣದಿಂದ ಈ ಸುಸಂದರ್ಭದಲ್ಲಿ ಐದು ರೈತರನ್ನು ಕರೆದು ಸನ್ಮಾನಿಸುವುದರ ಜೊತೆಗೆ ಅವರಿಗೆ ವಿಶೇಷ ಪುರಸ್ಕಾರ ನೀಡಲಾಗುವುದು. ಜೊತೆಗೆ ಡಾ. ರಾಜ್ ಕುಟುಂಬದ ಜೊತೆ ಕೆಲಸ ಮಾಡಿದ ಐದು ಹಿರಿಯ ಕಲಾವಿದರಿಗೆ ಸನ್ಮಾನಿಸಿ ಗೌರವಿಸಲಾಗುವುದು.
ಸಂಜೆ ೫ ಗಂಟೆಗೆ ಈ ಕಾರ್ಯಕ್ರಮ ಶುರುವಾಗಲಿದ್ದು, ವೇದ ಚಿತ್ರದ ನಿರ್ಮಾಪಕರಾದ ಗೀತಾ ಶಿವರಾಜ್ ಕುಮಾರ್ ಮತ್ತು ಡಾ.ಶಿವರಾಜ್ ಕುಮಾರ್, ನಿರ್ದೇಶಕ ಎ ಹರ್ಷ, ಟಗರು, ಸಲಗ ಮತ್ತು UI ನಿರ್ಮಾಪಕ ಕೆಪಿ ಶ್ರೀಕಾಂತ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶಿವಣ್ಣನ ಜೊತೆ ಕೆಲಸ ಮಾಡಿರುವ ಐದು ನಿರ್ದೇಶಕರಿಗೆ ಗೌರವಿಸಲು ಚಿತ್ರಸಂತೆ ನಿರ್ಧರಿಸಿದೆ.