ನೃತ್ಯ ನಿರ್ದೇಶಕ ರೋಹಿತ್ ಅರುಣ್ “ಲಕ್ಷ್ಮೀಪುತ್ರ” ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.
ಶ್ರೇಯಸ್ ಚಿಂಗಾ, ವಿನಯ್ ಕುಮಾರ್ ನಾಯಕರಾಗಿ ಅಭಿನಯಿಸುತ್ತಿದ್ದು ಇತಿ ಆಚಾರ್ಯ, ಅಮಿತಾ ರಂಗನಾಥ್ ಹಾಗೂ ಭೂಮಿಕಾ ಗೌಡ ಚಿತ್ರದ ನಾಯಕಿಯರು.
ಉಮಾ ರೋಹಿತ್ ನಿರ್ಮಿಸುತ್ತಿರುವ “ಲಕ್ಷ್ಮೀ ಪುತ್ರ” ಚಿತ್ರದ ಮೊದಲ ದೃಶ್ಯಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್” ಆರಂಭ ಫಲಕ ತೋರಿದರು. ಧನರಾಜ್ ಬಾಬು ಕ್ಯಾಮೆರಾ ಚಾಲನೆ ಮಾಡಿದರು ಹಾಗೂ ನೃತ್ಯ ನಿರ್ದೇಶಕ ಚಾಮರಾಜ್ ಮೊದಲ ಸನ್ನಿವೇಶಕ್ಕೆ ಆಕ್ಷನ್ ಕಟ್ ಹೇಳಿದರು.
ಚಾಮರಾಜನಗರ ಹಳ್ಳಿಯೊಂದರಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.ನಾಯಕರಾದ ಶ್ರೇಯಸ್ ಚಿಂಗಾ ಮತ್ತು ವಿನಯ್ ಕುಮಾರ್ ಚಿತ್ರದಲ್ಲಿ “ಶಿವ” ಮತ್ತು “ಮಹಾದೇವ” ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರಕ್ಕೆ ಶ್ಯಾಮ್ ಸಾಲ್ವಿನ್ ಛಾಯಾಗ್ರಹಣ, ಶ್ರೀವತ್ಸ ಸಂಗೀತ ನಿರ್ದೇಶನ, ಚೇತನ್ ಡಿಸೋಜ ಮತ್ತು ರವಿ ಜಮಖಂಡಿ ಸಾಹಸ ನಿರ್ದೇಶನ ಹಾಗೂ ರೋಹಿತ್ ಅರುಣ್ ಮತ್ತು ಚಾಮರಾಜ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ.