1. ಶಿಕ್ಷಣವನ್ನು ಪಡೆಯುವುದು ಒಂದು ತಪಸ್ಸಿದ್ದಂತೆ.ಅದಕ್ಕಾಗಿ ಮನೆ ಮತ್ತು ಮಾಯೆಯ ಮೋಹವನ್ನು ತ್ಯಾಗಮಾಡಬೇಕಾಗುತ್ತದೆ.

2. ದೊಡ್ಡ ಆನೆಯನ್ನು ನಿಯಂತ್ರಿಸಲು ಒಂದು ಅಂಕುಶ ಸಾಕು. ಅಂಧಕಾರವನ್ನು ಅಳಿಸಲು ಒಂದು ಸಣ್ಣ ದೀಪ ಸಾಕು, ದೊಡ್ಡ ಪರ್ವತವನ್ನು ಪುಡಿಮಾಡಲು ಒಂದು ಸಿಡಿಲು ಬಡಿತ ಸಾಕು ನಿಮ್ಮ ದೇಹ, ಆಕಾರ, ಗಾತ್ರ ಸೌಂದರ್ಯ ಮುಖ್ಯವಲ್ಲ. ನಿಮ್ಮಲ್ಲಿರುವ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಮಾತ್ರ ಮುಖ್ಯ.

3. ಸ್ತ್ರೀಯರನ್ನು ಕೆಟ್ಟ ದೃಷ್ಟಿಯಿಂದ ನೋಡುವವನು ಯಾವತ್ತು ಪವಿತ್ರವಾಗಿರುವುದಿಲ್ಲ. ಅವನು ತನ್ನ ಅವನತಿಯನ್ನು ತಾನೇ ಆಹ್ವಾನಿಸಿಕೊಳ್ಳುತ್ತಾನೆ…

4. ಕಾಗೆ ಎಷ್ಟೇ ಎತ್ತರವಾದ ಕಟ್ಟಡವೇರಿ ಕುಳಿತರೂ ಅದನ್ನು ರಣಹವೆಂದು ಕರೆಯಲಾಗುವುದಿಲ್ಲ. ಅದೇ ರೀತಿ ಒಬ್ಬ ವ್ಯಕ್ತಿಯ ಗೌರವ ಅವನ ಗುಣಗಳ ಮೇಲೆ ನಿರ್ಧಾರಿತವಾಗುತ್ತದೆಯೇ ಹೊರತು ಅವನಿರುವ ಎತ್ತರ, ಸ್ಥಾನಮಾನ, ಸಿರಿವಂತಿಕೆಯ ಮೇಲಲ್ಲ

4. ಹುಟ್ಟು ಗುಣಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಬೇವಿನ ಗಿಡದ ಮೇಲೆ ಹಾಲಿನ ಅಭಿಷೇಕ ಮಾಡಿದರೂ ಬೇವು ಬೇವಾಗಿಯೇ ಇರುತ್ತದೆ. ಅದು ಬೆಲ್ಲವಾಗಲೂ ಸಾಧ್ಯವಿಲ್ಲ…
