1. ಅವಶ್ಯಕತೆಗಿಂತ ಅಧಿಕವಾಗಿ ಪ್ರಾಮಾಣಿಕತೆ ತೋರುವ ಅವಶ್ಯಕತೆಯಿಲ್ಲ. ಅತಿಯಾಗಿ ಪ್ರಾಮಾಣಿಕರಾಗಿರುವುದು ಆರೋಗ್ಯಕರವಲ್ಲ. ಏಕೆಂದರೆ ಅಂಕುಡೊಂಕಾಗಿರುವ ಮರಗಳನ್ನು ಬಿಟ್ಟು ನೇರವಾಗಿರುವ ಮರಗಳನ್ನೇ
ಮೊದಲು ಕಡಿಯುತ್ತಾರೆ…
2. ದುಷ್ಟ ವ್ಯಕ್ತಿಗಳ ಸಿಹಿ ಮಾತುಗಳ ಮೇಲೆ ತಪ್ಪಿಯೂ ವಿಶ್ವಾಸವಿಡಬಾರದು ಯಾಕೆಂದರೆ ಅವರು ತಮ್ಮ ಮೂಲ ಸ್ವಭಾವವನ್ನು ಮರೆತಿರುವುದಿಲ್ಲ. ಹುಲಿ
ಹಿಂಸೆ ಮಾಡುವುದನ್ನು ಬಿಡುವುದಿಲ್ಲ…
3. ತನ್ನ ಹಲ್ಲಲ್ಲಿ ವಿಷವಿಲ್ಲದಿದ್ದರೂ ಹಾವು ತನ್ನ ಆತ್ಮರಕ್ಷಣೆಗಾಗಿ ಬುಸುಗುಡಲೇಬೇಕು.
4. ಯಾವಾಗಲೂ ಗುಣವಂತರ ಜೊತೆ ಗೆಳೆತನ ಬೆಳೆಸುವುದು ಶ್ರೇಯಸ್ಕರ. ಯಾಕೆಂದರೆ ಹಾಲಲ್ಲಿ ನೀರು ಪಾಲಾಗುವಂತೆ ನಾವು ಗುಣವಂತರ ಜೊತೆ ಸೇರಿ ಗುಣವಂತರಾಗುತ್ತೇವೆ…
5. ಯಾವ ರಾಜ ಅಧರ್ಮದ ದಾರಿಯಲ್ಲಿ ಸಾಗುತ್ತಾನೋ ಅವನಿಗೆ ತನ್ನ ಪ್ರಜೆಗಳ ಸುಖದುಃಖಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇರುವುದಿಲ್ಲ. ಅವನು ತನ್ನ ಸ್ವಾರ್ಥದಿಂದಲೇ ಸರ್ವನಾಶವಾಗುತ್ತಾನೆ. ಅದೇ ರೀತಿ ತನ್ನ ಸಮಾಜದ ಹಿತ ಕಾಯದ ವ್ಯಕ್ತಿ ಹೀನಾಯವಾಗಿ ಅಳಿಯುತ್ತಾನೆ.