ಅದೃಷ್ಟದಿಂದ ಬಂದಿದ್ದು ಅಹಂಕಾರ ಕೊಡುತ್ತದೆ. ಬುದ್ದಿ ಉಪಯೋಗಿಸಿ ಸಂಪಾದಿಸಿದ್ದು ಸಂತೋಷ ಕೊಡುತ್ತದೆ. ಕಷ್ಟ ಪಟ್ಟು ಸಂಪಾದಿಸಿದ್ದು ಸಂತೃಪ್ತಿ ಕೊಡುತ್ತದೆ.  

ಪ್ರೀತಿ ವ್ಯಾಮೋಹಗಳು ಮನುಷ್ಯನನ್ನು ದುರ್ಬಲಗೊಳಿಸುವ ಪ್ರಬಲ ಅಸ್ತ್ರಗಳು. 

ಯಾವ ವ್ಯಕ್ತಿ ಇನ್ನೊಬ್ಬರ ಖುಷಿಗಾಗಿ ಸೋಲಲು ಹಿಂಜರಿಯುವುದಿಲ್ಲವೋ ಅವನನ್ನು ಗೆಲ್ಲಲು ಯಾರಿಂದಲೂ ಸಾಧ್ಯವಿಲ್ಲ . 

ಮನಸ್ಸಿಟ್ಟು ಕಲಿತ ಅಕ್ಷರ, ಮೈ ಬಗ್ಗಿಸಿ ದುಡಿದು ತಿನ್ನುವ ಅನ್ನ, ಕಷ್ಟಪಟ್ಟು ಗಳಿಸಿದ ಸಂಪಾದನೆ, ಇಷ್ಟಪಟ್ಟು ಮಾಡುವ ದೈವಭಕ್ತಿ – ಇವುಗಳು ಯಾರನ್ನೂ ಯಾವತ್ತೂ ಕೈ ಬಿಡುವುದಿಲ್ಲ 

ಬಲಹೀನನನ್ನು ಬಲವಂತ ಹೊಡೆದರೆ ಆ ಬಲವಂತನನ್ನು ಭಗವಂತನೇ ಹೊಡೆಯುತ್ತಾನೆ