ಮದುವೆ ಆಗ್ತಿಲ್ಲ.. ಫ್ಯಾನ್ಸ್ ಬಿಡ್ತಿಲ್ಲ. ಇದೂವರೆಗೂ ಡಾರ್ಲಿಂಗ್‌ಗೆ ಬಂದ ಪ್ರಪೋಸಲ್‌ಗಳೆಷ್ಟು ಗೊತ್ತೇ?

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ 'ಸಲಾರ್' ಬಳಿಕ ಮತ್ತೆ ಗೆಲುವಿನ ರುಚಿ ಕಂಡಿದ್ದಾರೆ. ಸತತ ಸೋಲುಗಳಿಂದ ಬೇಸತ್ತು ಹೋಗಿದ್ದ ಪ್ರಭಾಸ್‌ಗೆ ಈಗೊಂದು ಸಕ್ಸಸ್ ಸಿಕ್ಕಿದೆ.

Arrow

ಫ್ರಭಾಸ್ ಸಿನಿಮಾಗಳ ಬಗ್ಗೆ ಅವರ ಅಭಿಮಾನಿಗಳೀಗ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟಿದ್ದಾರೆ. ಅವರಿಗೆ ತಮ್ಮ ನೆಚ್ಚಿನ ಡಾರ್ಲಿಂಗ್ ಮದುವೆ ಯಾವಾಗ ಅನ್ನೋದೇ ಚಿಂತೆ.

Arrow

ಸೋಶಿಯಲ್ ಮೀಡಿಯಾದಲ್ಲಿ ಇದೂವರೆಗೂ ಅವರಿಗೆ ಬಂದಿರೋ ಪ್ರಪೋಸಲ್‌ಗಳ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

Arrow

ಕಳೆದ ವರ್ಷ ಪ್ರಭಾಸ್ ಅಜ್ಜಿ ಈ ವರ್ಷ ಪ್ರಭಾಸ್ ಮದುವೆ ಆಗುತ್ತಾರೆ ಎಂದು ಹೇಳಿಕೆ ಕೊಟ್ಟಿದ್ದರು. ಅದನ್ನು ಕೇಳಿ ಪ್ರಭಾಸ್ ಫ್ಯಾನ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಅದನ್ನು ಕೇಳಿಕೊಂಡಿದ್ದಷ್ಟೇ ಬಂತು. ಇದೂವರೆಗೂ ಮತ್ತೆ ಮದುವೆ ಬಗ್ಗೆ ಸುದ್ದಿನೇ ಇಲ್ಲ. ಆದರೆ, ಫ್ಯಾನ್ಸ್ ಖುಷಿ ಪಡೋ ವಿಷಯವೊಂದಿದೆ.

Arrow

ಪ್ರಭಾಸ್‌ಗೀಗ 44 ವರ್ಷ. ಇಲ್ಲಿವರೆಗೂ ಅವರಿಗೆ ಸುಮಾರು 5000ಕ್ಕೂ ಅಧಿಕ ಪ್ರಪೋಸಲ್‌ಗಳು ಬಂದಿವೆಯಂತೆ. ಈ ವಿಷಯ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

Arrow

ಕೆಲವು ದಿನ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಆದರೆ, ಇಬ್ಬರೂ ಆ ವಿಷಯವನ್ನು ತಳ್ಳಿ ಹಾಕಿದ್ದರು.

Arrow

ಸದ್ಯ ಪ್ರಭಾಸ್ ಈ ವರ್ಷವೂ ಮದುವೆ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಯಾಕಂದ್ರೆ, ದುಬಾರಿ ಬಜೆಟ್ ಸಿನಿಮಾ 'ಕಲ್ಕಿ 2898' , ಬಳಿಕ ಮಾರುತಿ ನಿರ್ದೇಶನದ 'ರಾಜಾ ಸಾಬ್' ಹಾಗೂ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಸಿನಿಮಾಗಳು ಕೈಯಲ್ಲಿವೆ.

Arrow