ನಂಗೆ ಬರೆಯೋಕೆ, ಓದೋಕೆ ಬರೋ ಏಕೈಕ ಭಾಷೆ ಕನ್ನಡ; ನಿತ್ಯಾ ಮೆನನ್
ಎಷ್ಟೋ ಜನರಿಗೆ ನಿತ್ಯಾ ಮೆನನ್ ಕನ್ನಡತಿ ಎಂಬುದು ಸಹ ಗೊತ್ತಿಲ್ಲ.ನಿತ್ಯಾ ಮೆನನ್ ಸ್ವತಃ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವಂತೆ ನಿತ್ಯಾ ಮೆನನ್ಗೆ ಬರೆಯಲು ಹಾಗೂ ಓದಲು ಬರುವ ಏಕೈಕ ಭಾಷೆ ಕನ್ನಡ ಮಾತ್ರವಂತೆ.
Learn More
ಅವರು ಬೆಳೆದಿದ್ದು ಬೆಂಗಳೂರಿನಲ್ಲಿ. ಅವರು ಇಲ್ಲಿಯೇ ಶಿಕ್ಷಣ ಪಡೆದಿದ್ದಾರೆ. ಅವರಿಗೆ ಕನ್ನಡ ಅತ್ಯುತ್ತಮವಾಗಿ ಮಾತನಾಡೋಕೆ ಬರುತ್ತದೆ ಎನ್ನುವ ವಿಚಾರ ಅನೇಕರಿಗೆ ತಿಳಿದಿಲ್ಲ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.
Learn More
ನಿತ್ಯಾ ಮೆನನ್ ಅವರು ಕನ್ನಡದ ‘7 ಓ ಕ್ಲಾಕ್’ ಸಿನಿಮಾ ಮೂಲಕ ಹೀರೋಯಿನ್ ಆದರು. ಈ ಚಿತ್ರ 2006ರಲ್ಲಿ ರಿಲೀಸ್ ಆಯಿತು. ಆ ಬಳಿಕ ಅವರಿಗೆ ಪರಭಾಷೆಗಳಿಂದ ಆಫರ್ಗಳು ಬಂದವು. ಕನ್ನಡದ ಜೊತೆ ಮಲಯಾಳಂ, ತೆಲುಗು ಹಾಗೂ ತಮಿಳು ಸಿನಿಮಾಗಳನ್ನು ಮಾಡಿದರು.
Learn More
‘ನಾವು ಹೇಗೆ ಇರ್ತಿವೋ ಹಾಗೇ ಇರ್ತೀವಿ. ಫೇಮ್-ಹಣ ಸಿಕ್ಕರೆ ರಿಯಾಲಿಟಿ ಹೊರಗೆ ಬರುತ್ತದೆ ಅಷ್ಟೇ. ಇಲ್ಲಿ ಯಾರೂ ಬದಲಾಗಲ್ಲ. ನಾನು ಯಾವಾಗಲೂ ಹೇಳುತ್ತಾ ಇರುತ್ತೇನೆ ನಾನು ಓದಿದ್ದು ಕನ್ನಡದಲ್ಲೇ. ನಾನು ಇಂದಿರಾನಗರದ ಪೂರ್ಣಪ್ರಜ್ಞಾ ಶಾಲೆಯಲ್ಲಿ ಓದಿದ್ದು.
Learn More
ನಿತ್ಯಾ ಕನ್ನಡ ಚಿತ್ರರಂಗಕ್ಕೆ ಬರದೆ 8 ವರ್ಷಗಳು ಕಳೆದಿವೆ. 2016ರಲ್ಲಿ ರಿಲೀಸ್ ಆದ ‘ಕೋಟಿಗೊಬ್ಬ 2’ ಚಿತ್ರದಲ್ಲಿ ನಿತ್ಯಾ ನಟಿಸಿದ್ದರು. ಆ ಬಳಿಕ ಅವರ ನಟನೆಯ ಯಾವುದೇ ಕನ್ನಡ ಸಿನಿಮಾ ರಿಲೀಸ್ ಆಗಿಲ್ಲ.