"7 ವರ್ಷಗಳಿಂದ ಕಿರುಕುಳ ಅನುಭವಿಸುತ್ತಿದ್ದೇನೆ"; ಪೃಥ್ವಿರಾಜ್ ಸುಕುಮಾರನ್ ಪತ್ನಿ ಆವೇದನೆ
ಸೋಶಿಯಲ್ ಮೀಡಿಯಾ ಕಿರುಕುಳ ಎನ್ನುವುದು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ದರ್ಶನ್ ಅಭಿಮಾನಿಗಳು ನನಗೆ ಕೆಟ್ಟದಾಗಿ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ನಟಿ ರಮ್ಯಾ ದೂರು ನೀಡಿದ್ದಾರೆ.
Learn More
ಇದೀಗ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಪತ್ನಿ ಸುಪ್ರಿಯಾ ಮೆನನ್ ತಮ್ಮ ನೋವು ತೋಡಿಕೊಂಡಿದ್ದಾರೆ.
Learn More
7 ವರ್ಷಗಳಿಂದ ಮಹಿಳೆ ಒಬ್ಬರು ನನಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಸುಪ್ರಿಯಾ ಮೆನನ್ ಆವೇದನೆ ವ್ಯಕ್ತಪಡಿಸಿದ್ದಾರೆ.
Learn More
ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಂದಷ್ಟು ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಕ್ರಿಸ್ಟಿನಾ ಎಂಬಾಕೆ ನನಗೆ ಪದೇ ಪದೆ ಮೆಸೇಜ್ ಮಾಡಿ ತೊಂದರೆ ಕೊಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Learn More
ಆಕೆ ನನ್ನ ಬಗ್ಗೆ ಮಾಡುವ ಪೋಸ್ಟ್‌ಗಳೆಲ್ಲಾ ಬಹಳ ಅವಹೇಳಕಾರಿಯಾಗಿರುತ್ತದೆ. ನಾನು ಆಕೆಯ ಅಕೌಂಟ್ ಬ್ಲಾಕ್ ಮಾಡಿದರೂ ಮತ್ತೆ ಹೊಸ ಅಕೌಂಟ್ ಕ್ರಿಯೇಟ್ ಮಾಡಿ ಪೋಸ್ಟ್ ಮಾಡುತ್ತಾಳೆ"
Learn More
"ಆಕೆಗೆ ಒಬ್ಬ ಚಿಕ್ಕ ಮಗನಿದ್ದಾನೆ. ಹಾಗಾಗಿ ಇಷ್ಟು ದಿನ ಸುಮ್ಮನಿದ್ದೆ. ಸುಪ್ರಿಯಾ ಆರೋಪ ಮಾಡುತ್ತಿರುವ ಮಹಿಳೆ ಪ್ರಸ್ತುತ ಅಮೆರಿಕದಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದಾರೆ ಎಂದು ಈಟೈಮ್ಸ್ ವರದಿ ಮಾಡಿದೆ.
Learn More
ಪೃಥ್ವಿರಾಜ್ ಪ್ರೊಡಕ್ಷನ್ಸ್ ಎಂಬ ಸಿನಿಮಾ ನಿರ್ಮಾಣ ಹಾಗೂ ವಿತರಣೆ ಸಂಸ್ಥೆಯನ್ನು ಪೃಥ್ವಿರಾಜ್ ಹುಟ್ಟುಹಾಕಿದ್ದಾರೆ. ಅದರ ಜವಾವ್ದಾರಿಯನ್ನು ಪತ್ನಿ ಸುಪ್ರಿಯಾ ನಿಭಾಯಿಸುತ್ತಿದ್ದಾರೆ.