ಕನ್ನಡ ಸುಭಾಷಿತ
16
Learn More
Arrow
ಬಲಿಷ್ಠವಾದ ತೋಳುಗಳು ಜಗತ್ತನ್ನು ಎಷ್ಟು ಗೆಲ್ಲಬಹುದೋ, ಅದಕ್ಕಿಂತ ಹೆಚ್ಚನ್ನು ಮಾನವೀಯತೆಯಿಂದ ಕೂಡಿದ, ನಮಸ್ಕಾರ ಮಾಡುವ ಎರಡು ಕೈಗಳು ಗೆಲ್ಲಬಹುದು.
ಕಾರ್ಯವನ್ನು ಆರಂಭಿಸದಿರುವದು ಮೊದಲನೆಯ ಬುದ್ಧಿ ಲಕ್ಷಣ. ಆರಂಭಿಸಿದ ಮೇಲೆ ಅದನ್ನು ತುದಿಮುಟ್ಟಿಸುವದು ಎರಡನೆಯ ಬುದ್ಧಿಲಕ್ಷಣ
ಗುಣಶಾಲಿ ಜನರ ( ಸಜ್ಜನರ ) ಸಹವಾಸದಿಂದ ಸಣ್ಣವನೂ ಗೌರವವನ್ನು ಪಡೆಯುತ್ತಾನೆ. ಹೂವಿನ ಹಾರದ ಸಂಬಂಧದಿಂದ ನಾರನ್ನು ತಲೆಯಲ್ಲಿ ಮುಡಿಯುತ್ತಾರೆ.
ಇನ್ನೊಬ್ಬರನ್ನೂ ಗೌರವಿಸುವುದನ್ನು ಕಲಿಯದಿದ್ದರೆ,ನಾವೆಂದು ದೊಡ್ಡವರಾಗುವುದಿಲ್ಲ.
ದುಂಬಿಯು ಹೂಗಳನ್ನು ಕಾಪಾಡುತ್ತಾ ಹೇಗೆ ಮಕರಂದವನ್ನು ಹೀರಿಕೊಳ್ಳುತ್ತದೆಯೋ ಹಾಗೆಯೇ ಹಿಂಸೆ ಮಾಡದೇ ಮನುಷ್ಯರಿಂದ ಹಣವನ್ನು ಸಂಗ್ರಹಿಸಬೇಕು