ಕನ್ನಡ ಸುಭಾಷಿತ 15

CINIPARK

ಹೂಗಳೂ , ಹಣ್ಣುಗಳೂ ಯಾರ ಪ್ರೇರಣೆಯೂ ಇಲ್ಲದೇ ತಮ್ಮ ತಮ್ಮ ಕಾಲವನ್ನು ಮೀರದೇ ಇರುತ್ತವೆ. ಹಾಗೆಯೇ ಪುರಾಕೃತವಾದ ಕರ್ಮವೂ ಸಹ.

ಯಾವುದೂ ಶಾಶ್ವತವಲ್ಲ ಎಂಬುದು ಅರಿವಿಗೆ ಬಂದುಬಿಟ್ಟರೆ ನೀವು ಹೆಚ್ಚು ತಾಳ್ಮೆ ಗಳಿಸುವಿರಿ, ಕ್ಷಮಿಸುವಿರಿ ಮತ್ತು ಇತರರ ಕುರಿತು ಆರೋಪ ಮಾಡುವುದು ಬಿಡುವಿರಿ!

ಚಿಂತೆ ಮಾಡುವುದು ನಿಜಕ್ಕೂ ವ್ಯರ್ಥ.ಅದು ನಾಳಿನ ಸಮಸ್ಯೆಯನ್ನು ಪರಿಹರಿಸುವುದರ ಬದಲಿಗೆ ಇಂದಿನ ಶಕ್ತಿಯನ್ನು ಖಾಲಿ ಮಾಡಿಬಿಡುತ್ತದೆ.

ವಿಷವಿರುವ ಬಂಗಾರದ ಪಾತ್ರೆಗಿಂತ ಜೇನಿರುವ ಮಣ್ಣಿನ ಮಡಿಕೆಯೇ ಯೋಗ್ಯವಾದದ್ದು...​ ​ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಗುಣಗಳಿಂದ ನಮ್ಮ ಯೋಗ್ಯತೆ ಹೆಚ್ಚುತ್ತದೆ..​

ದುಷ್ಟನು ಇನ್ನೊಬ್ಬರಲ್ಲಿರುವ ಸಾಸುವೆ ಕಾಳಷ್ಟು ದೋಷವನ್ನು ಕಂಡು ಹಿಡಿಯುತ್ತಾನೆ. ಆದರೆ ತನ್ನಲ್ಲಿರುವ ಬಿಲ್ವಫಲದಷ್ಟು ದೊಡ್ಡ ತಪ್ಪಿದ್ದರೂ ಅವನು ಕಾಣುವುದಿಲ್ಲ.

Priyanka Jain

CINIPARK

Cream Section Separator