ಕನ್ನಡ ಸುಭಾಷಿತಗಳು

CINIPARK

ಯಾರು ಪ್ರೀತಿಸುತ್ತಾರೋ ಅವರಿಗೆ ಮಾತ್ರ ತಿದ್ದುವ , ಶಿಕ್ಷಿಸುವ ಅಧಿಕಾರ ಉಂಟು. 

ಸುಖ, ಸ್ನೇಹಿತರನ್ನು ಕರೆತರುತ್ತದೆ.ಕಷ್ಟ ಅವರ ಅರ್ಹತೆಯನ್ನು ಪರೀಕ್ಷಿಸುತ್ತದೆ. 

ನೀವು ಸೇವಿಸುವ ಅನ್ನವನ್ನು ಬೇಯಿಸುವ ನೀರು , ನಿಮ್ಮ ದುಡಿಮೆಯ ಬೆವರೋ ಅಥವಾ ಬೇರೆಯವರ ಕಣ್ಣೀರೋ ! 

ಕೋಪವನ್ನು ನಿಯಂತ್ರಿಸದಿದ್ದರೆ ಅದು ನಮ್ಮ ಮನಸ್ಸಿನ ಜ್ಯೋತಿಯನ್ನು ನಂದಿಸಿಬಿಡುತ್ತದೆ.