ನುಡಿಮುತ್ತುಗಳು
ಮರದ ಮೇಲೆ ಕುಳಿತ ಹಕ್ಕಿಗೆ ಕೊಂಬೆ ಮುರಿದು ಬೀಳುವ ಭಯವಿರದು. ಅದು ನಂಬಿರುವುದು ತನ್ನ ರೆಕ್ಕೆಗಳನ್ನೇ ಹೊರತು ಕೊಂಬೆಯನ್ನಲ್ಲ.
ಕ್ಷಮಿಸುವುದು ಉತ್ತಮ. ಮರೆತುಬಿಡುವುದು ಸರ್ವೋತ್ತಮ.
ಮಾತೇ ಮನಸ್ಸಿನ ಕನ್ನಡಿ.ಮಾತಿನಂತೆ ಮನುಷ್ಯ.
ಕಾಲದ ಮರಳಿನಲ್ಲಿ ಹೆಜ್ಜೆಗುರುತುಗಳನ್ನು ಬಿಡು.ಕಾಲನ್ನೆಳೆಯುತ್ತಾ ನಡೆಯಬೇಡ.
ಜಗತ್ತಿನಲ್ಲಿ ಹೇಳುವವರಿಗಿಂತ , ಹೇಳಿದಂತೆ ನಡೆಯುವವರ ಯೋಗ್ಯತೆ ಹೆಚ್ಚಿನದು.