ನಿಂಬೆಯು ಹೊಳಪುಯುಕ್ತ ಚರ್ಮಕ್ಕೆ ಉತ್ತಮ ಎಂದು ಹೇಳಲಾಗುತ್ತದೆ. ಇದು ಅದ್ಭುತ ಮನೆಮದ್ದು ಎಂದು ಹಲವು ಬಾರಿ ಸಾಬೀತಾಗಿದೆ. 

ಇದು ಸಿಟ್ರಿಕ್ ಆಮ್ಲ ಮತ್ತು ವಿಟಮಿನ್ ಸಿ ಯನ್ನು ಸಮೃದ್ಧವಾಗಿ ಹೊಂದಿದೆ.  ಇದು ಶಕ್ತಿಯುತವಾದ  ಆ್ಯಂಟಿ ಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಚರ್ಮವನ್ನು ತೇವಗೊಳಿಸುವ ಮೂಲಕ ಹಗುರವಾದ ಚರ್ಮದ ಬಣ್ಣವನ್ನು ಸಾಧಿಸಲು ಸಹಾಯ ಮಾಡುತ್ತದೆ. 

ಉತ್ತಮ ಮತ್ತು ಆರೋಗ್ಯಕರ ಚರ್ಮವು(Healthy Skin) ಒಂದು ಆಶೀರ್ವಾದವಾಗಿದೆ ಆದರೆ ಹೊಳೆಯುವ ಚರ್ಮವನ್ನು ಪಡೆಯುವುದು ಅಷ್ಟು ಸುಲಭವಲ್ಲ. ಅದನ್ನು ಪಡೆಯಲು ಸರಿಯಾಗಿ ತಿನ್ನುವುದು, ದಿನವಿಡೀ ಸಾಕಷ್ಟು ನೀರು ಕುಡಿಯುವುದು, ನಿಮ್ಮ ಚರ್ಮದ(Skin care) ಪ್ರಕಾರಕ್ಕೆ ಸೂಕ್ತವಾದ ತ್ವಚೆ ಉತ್ಪನ್ನಗಳನ್ನು ಬಳಸಬೇಕಾಗುತ್ತದೆ.