CINIPARK

ಅಂಗೈಯಲ್ಲಿ ಆರೋಗ್ಯ ಅಜೀರ್ಣ PART 2

 ಹಸಿ ಮೂಲಂಗಿಯನ್ನು ತುರಿದು ಕೋಸಂಬರಿ ಅಥವಾ ಮೊಸರಿನ ಜೊತೆ ಸಲಾಡ್ ರೀತಿ ಮಾಡಿ ಸೇವಿಸುವುದರಿಂದ ತಿಂದ ಆಹಾರ ಚೆನ್ನಾಗಿ ಜೀರ್ಣಿಸು ತ್ತದೆ.

 ಪರಂಗಿ ಕಾಯಿಯ ಹೋಳುಗಳಿಗೆ ಜೀರಿಗೆ, ಮೆಣಸು ಹಾಗೂ ಉಪ್ಪು ಪುಡಿಯನ್ನು ಉದುರಿಸಿ ಸ್ವಲ್ಪ ನಿಂಬೆರಸ ಸೇರಿಸಿ ತಿಂದರೆ ತಿಂದ ಆಹಾದ ಚೆನ್ನಾಗಿ ಜೀರ್ಣವಾಗುತ್ತದೆ.

ಇಂಗು, ಸೈಂಧವ ಲವಣ, ಜೀರಿಗೆ, ಕರಿಜೀರಿಗೆ, ಓಮ, ಶುಂಠಿ, ಮೆಣಸು ಇಷ್ಟನ್ನು ನುಣ್ಣಗೆ ಕುಟ್ಟಿ ಪುಡಿ ಮಾಡಿ ಈ ಪುಡಿಯನ್ನು ಹಾಗೂ ತುಪ್ಪವನ್ನು ಅನ್ನಕ್ಕೆ ಹಾಕಿ ಮೊದಲನ್ನಕ್ಕೆ ಊಟದ ಜೊತೆ ಪ್ರತಿನಿತ್ಯ ಸೇವಿಸುವುದರಿಂದ ಅಜೀರ್ಣವಾಗುವುದಿಲ್ಲ.

 ವಿಪರೀತ ಅಜೀರ್ಣವಾದಾಗ ರಾತ್ರಿ ಊಟದ ಬದಲು ಸ್ವಲ್ಪ ಹಣ್ಣುಗಳನ್ನು ಸೇವಿಸಿದರೆ ಒಳ್ಳೆಯದು.

ಆಹಾರ ಚೆನ್ನಾಗಿ ಅಗೆದು ತಿನ್ನುವ ಅಭ್ಯಾಸವಿಟ್ಟುಕೊಂಡರೆ ಒಳ್ಳೆಯದು. ರಾತ್ರಿ ಮಲಗುವ ಮುಂಚೆ 1 ಲೋಟ ಬಿಸಿ ನೀರು ಕುಡಿಯುವುದು ಒಳ್ಳೆಯ ಅಭ್ಯಾಸ.

ಅಜೀರ್ಣದಿಂದುಂಟಾಗುವ ಹೊಟ್ಟೆನೋವಿಗೆ ಹಾಗೂ ಜೀರ್ಣಕ್ರಿಯೆಗೆ ಎಕ್ಕದ ಹೂವಿನಲ್ಲಿರುವ ಕೇಸರಗಳನ್ನು ಶೇಖರಿಸಿ, ಅದರ ಜೊತೆ ಸೈಂಧವ ಲವಣವನ್ನು ಸೇರಿಸಿ ಸೇವಿಸುತ್ತಾ ಬಂದರೆ 3-4 ದಿನದಲ್ಲಿ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಹಾಗೂ ಹೊಟ್ಟೆನೋವು ನಿವಾರಣೆಯಾಗುತ್ತದೆ.

ಓಮದ ಕಾಳು (ಅಜವಾನ) 50ಗ್ರಾಂ, ಜೀರಿಗೆ 100 ಗ್ರಾಂ ಎರಡನ್ನು ತರಿತರಿಯಾಗಿ ಪುಡಿ ಮಾಡಿಟ್ಟುಕೊಂಡು ಗಾಜಿನ ಸೀಸೆಯಲ್ಲಿಟ್ಟುಕೊಳ್ಳಿ. ಪ್ರತಿ ದಿನ ರಾತ್ರಿ 1 ಲೋಟ ಕುದಿಯುವ ನೀರಿಗೆ 1 ಚಮಚ ಪುಡಿಯನ್ನು ಹಾಕಿ ಮುಚ್ಚಿಡಿ. ಬೆಳ್ಳಿಗೆ ಶೋಧಿಸಿಕೊಂಡು ತಿಳಿ ನೀರನ್ನು ಕುಡಿಯಿರಿ. ಈ ರೀತಿ ಸತತವಾಗಿ ಕನಿಷ್ಠ 21 ದಿನ ಮಾಡಿ. ಜೀರ್ಣಕ್ರಿಯೆ ಚುರುಕಾಗುತ್ತದೆ. ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ದೂರಾಗುತ್ತದೆ.