ನಿಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆ?

Arrow

ನಿಮ್ಮ ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸುವುದು ಹೇಗೆ ಎಂಬುದರ ಬಗ್ಗೆ ಕೆಲವು ಮಾಹಿತಿಗಳು ಇಲ್ಲಿವೆ. ನೀವೂ ಸಹ ದಣಿವು, ಆಯಾಸವನ್ನು ಅನುಭವಿಸುತ್ತಿದ್ದರೆ ಈ ಕೆಲವು ಮಾರ್ಗಗಳನ್ನು ಅನುಸರಿಸಿ.

ಮನೆಯಿಂದ ಕೆಲಸ ಮತ್ತು ಆನ್​ಲೈನ್​ ತರಗತಿಗಳು ಶಕ್ತಿಯ ಮಟ್ಟವನ್ನು ಹದಗೆಡಿಸುತ್ತಿರಬಹುದು. ಇಡೀ ದಿನ ಕಂಪ್ಯೂಟರ್, ಲ್ಯಾಪ್ಟಾಪ್​ಗೆ ಅಂಟಿಕೊಂಡಿರುವುದರಿಂದ ಹೆಚ್ಚು ಸುಸ್ತು, ಆಯಾಸ, ಒತ್ತಡ ಜೊತೆಗೆ ಮಾನಸಿಕ ಕಿರಿಕಿರಿ ಉಂಟಾಗುತ್ತಿರಬಹುದು. 

ಹೆಚ್ಚು ಫೈಬರ್ ತಿನ್ನಿರಿ ಧಾನ್ಯಗಳು, ಬೀನ್ಸ್, ಕಡಲೆಯಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಇದು ಇನ್ಸುಲಿನ್ ಬಿಡುಗಡೆಯನ್ನು ನಿಧಾನಗೊಳಿಸುತ್ತದೆ. ಶಕ್ತಿಯ ಸ್ಥಿರ ಪೂರೈಕೆಯನ್ನು ನಿರ್ವಹಿಸಲು ಸಹಾಯಕವಾಗಿದೆ. 

ಹಸಿರು ಸೊಪ್ಪು, ತರಕಾರಿಗಳನ್ನು ಸೇವಿಸಿ ವಿವಿಧ ರೀತಿಯ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. ಅವುಗಳ ಸೇವನೆಯಿಂದ ರಕ್ಷಣಾತ್ಮಕ ಫೈಟಿಕೆಮಿಕಲ್​ಗಳು ಮತ್ತು ಅತ್ಯುತ್ತಮವಾದ ಚಯಾಪಚಯ ಕ್ರಿಯೆಗೆ ಅಗತ್ಯವಿರುವ ಸೂಕ್ಷ್ಮ ಪೋಷಕಾಂಶಗಳು ಸಿಗುತ್ತವೆ. 

ಆಹಾರ ಸೇವನೆ ಕೆಲವು ಪ್ರೋಟೀನ್, ಕಾರ್ಬೋಹೈಡ್ರೇಟ್​ಗಳು ಮತ್ತು ಉತ್ತಮ ಕೊಬ್ಬನ್ನು ಒಳಗೊಂಡಿರುವ ಆರೋಗ್ಯಕರ ಆಹಾರವನ್ನು ಸೇವಿಸಿ. ತಾಜಾ ಹಣ್ಣು ಮತ್ತು ಡ್ರೈಫ್ರೂಟ್ಸ್​ಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. 

ಹೈಡ್ರೇಟ್ ಆಗಿರಿ ನಿರ್ಜಲೀಕರಣವು ಆಯಾಸಕ್ಕೆ ಪ್ರಮುಖ ಕಾರಣವಾಗಿದೆ. ದಿನನಿತ್ಯದ ಚಟುವಟಿಕೆಯ ಜೊತೆಯಲ್ಲಿ ನೀರು ಅಥವಾ ಇತರ ಆರೋಗ್ಯಕರ ನೀರಿನಾಂಶ ಹೊಂದಿರುವ ಆಹಾರವನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.