ಶಕ್ತಿಯ ಜೀವನ ದೌರ್ಬಲ್ಯವೇ ಮರಣ 

ಬದುಕು ಎಂಬುದು ಹತ್ತಿಯಿದ್ದಂತೆ ಅದನ್ನು ಸಂತೋಷವೆಂಬ ಗಾಳಿಯಲ್ಲಿ ಊದಿ ಆದರೆ ಅದನ್ನು ದುಃಖವೆಂಬ ನೀರಿನಲ್ಲಿ ಅದ್ದಬೇಡಿ 

ಮನುಷ್ಯ ಉರಿಯುವ ದೀಪದಂತೆ  ಆಸಕ್ತಿ ಅದಕ್ಕೆ ಹಾಕುವ ಎಣ್ಣೆಯಂತೆ 

ನಕಾರಾತ್ಮಕ ಆಲೋಚನೆಗಳು ಮನುಷ್ಯನನ್ನು ಬಲಹೀನಗೊಳಿಸುತ್ತದೆ 

ಪ್ರತಿಯೊಬ್ಬ ಮಾನವನಲ್ಲೂ ಸುಪ್ತವಾಗಿರುವ ದೈವೀ ಶಕ್ತಿಯನ್ನು ಪ್ರಕಟಗೊಳಿಸಿ ಪ್ರಕಾಶಿಸುವಂತೆ ಮಾಡುವುದೇ ನಿಜವಾದ ಧರ್ಮ 

ಸಮುದ್ರದ ದೃಶ್ಯ ಆನಂದಮಯ , ಆದರೆ ದಡದ ಮೇಲಿಂದ ನೋಡುವವರಿಗೇ ಹೊರತೂ ಮುಳುಗುವವರಿಗಲ್ಲ 

ನಮ್ಮಲ್ಲಿ ನಮಗೆ ಶ್ರದ್ಧೆಯಿರಲಿ , ಸಕಲ ಶಕ್ತಿಯೂ ಅಡಗಿದೆ ನಮ್ಮಲ್ಲಿ  ಇದನ್ನರಿತು ಭಾವಿಸುತ್ತಾ ಆ ಶಕ್ತಿಯನ್ನು ಪ್ರಕಟಗೊಳಿಸಿಕೊಳ್ಳಿರಿ ನಮ್ಮವ್ಯಕ್ತಿತ್ವದಲ್ಲಿ ಹೇಳಿಕೊಳ್ಳಿ