ಈ ವಾರ ಕನ್ನಡ ಚಿತ್ರರಂಗದಲ್ಲಿ ಎರಡು ಸಿನಿಮಾಗಳು ರಿಲೀಸ್ ಆಗಿವೆ. ಎರಡೂ ಸಿನಿಮಾಗಳು ಕೂಡ ಯುವ ನಟರದ್ದು ಅನ್ನೋದು ವಿಶೇಷ. ಯುವ ರಾಜ್‌ಕುಮಾರ್ ನಟನೆಯ ‘ಎಕ್ಕ’.Yuva Rajkumar-Kireeti ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿಯ ಚೊಚ್ಚಲ ಸಿನಿಮಾ ‘ಜೂನಿಯರ್’ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಯುವ ಹಾಗೂ ಕಿರೀಟಿ ಇಬ್ಬರೂ ತಮ್ಮ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದಾರೆ.
ಯುವ ರಾಜ್‌ಕುಮಾರ್‌ಗೆ ‘ಎಕ್ಕ’ ಎರಡನೇ ಸಿನಿಮಾ. ಕಿರೀಟಿಗೆ ‘ಜೂನಿಯರ್’ ಚೊಚ್ಚಲ ಸಿನಿಮಾ. ಇಬ್ಬರೂ ಕನ್ನಡ ಚಿತ್ರರಂಗದ ಮುಂದಿನ ಸೂಪರ್‌ಸ್ಟಾರ್‌ಗಳು ಆಗಬಹುದೇ? ‘ಎಕ್ಕ’ ಸಿನಿಮಾದಿಂದ ಯುವ ಕರಿಯರ್‌ಗೆ ಬೂಸ್ಟ್ ಕೊಡುತ್ತಾ? ಇನ್ನೊಂದು ಕಡೆ ‘ಜೂನಿಯರ್’ ಸಿನಿಮಾ ಕಿರೀಟಿಗೆ ವೃತ್ತಿ ಬದುಕಿಗೆ ಕಿಕ್ ಸ್ಟಾರ್ಟ್ ಕೊಡುತ್ತಾ? ಇಬ್ಬರು ಯುವ ನಟರ ಸಿನಿಮಾಗಳಲ್ಲಿ ಏನೇನು ವಿಶೇಷತೆಗಳು ಇವೆ.
ಸ್ಯಾಂಡಲ್‌ವುಡ್‌ಗೆ ಯುವ ನಟರ ಅವಶ್ಯಕತೆಯಿದೆ. ಸೂಪರ್‌ಸ್ಟಾರ್‌ಗಳನ್ನೇ ನಂಬಿಕೊಂಡರೇ ಕನ್ನಡ ಚಿತ್ರರಂಗಕ್ಕೆ ಹಿನ್ನೆಡೆಯಾಗೋದು ಸಿನಿಮಾ ಮಂದಿಗೆ ಮನವರಿಕೆಯಾಗಿದೆ. ಆದರೆ, ಕಳೆದ ಎರಡು ಮೂರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಯುವ ನಟರು ಗಟ್ಟಿಯಾಗಿ ನೆಲೆಯೂರುತ್ತಿಲ್ಲ. ಹೀಗಾಗಿ ಯುವ ಹಾಗೂ ಕಿರೀಟಿ ಮೇಲೆ ಸಿನಿಮಾ ಮಂದಿ ಕಣ್ಣಿಟ್ಟಿದ್ದಾರೆ. ಹಾಗಿದ್ದರೆ, ಇವರಿಬ್ಬರಲ್ಲಿ ಗೆದ್ದವರು ಯಾರು?
Yuva Rajkumar-Kireeti ಯುವ ಮಾಸ್ ಅವತಾರಕ್ಕೆ ಏನಂದ್ರು ಫ್ಯಾನ್ಸ್?
‘ಎಕ್ಕ’ ಯುವ ರಾಜ್‌ಕುಮಾರ್ ಅಭಿನಯದ ಎರಡನೇ ಸಿನಿಮಾ. ಮೂರು ನಿರ್ಮಾಣ ಸಂಸ್ಥೆಗಳು ಸೇರಿ ನಿರ್ಮಿಸಿರುವ ಈ ಸಿನಿಮಾ ಇಂದು (ಜುಲೈ 18) ರಿಲೀಸ್ ಆಗಿದೆ. ಎರಡನೇ ಸಿನಿಮಾದಲ್ಲೇ ಯುವ ಕ್ಲಾಸ್‌ನಿಂದ ಮಾಸ್ ಹೀರೋ ಆಗಿ ಬದಲಾಗಿದ್ದಾರೆ. ಯುವ ಮ್ಯಾನರಿಸಂ ಹಾಗೂ ನಟನೆಯ ಬಗ್ಗೆ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯುವ ರಾಜ್‌ಕುಮಾರ್‌ನಲ್ಲಿ ಅಪ್ಪುವನ್ನು ಕಾಣುತ್ತಿರುವ ಅಭಿಮಾನಿಗಳು ‘ಎಕ್ಕ’ ನೋಡಿ ಏನು ಅಭಿಪ್ರಾಯ ವ್ಯಕ್ತಪಡಿಸಿದ್ರು?
ಆಡಿಯನ್ಸ್ ಹೇಳಿದ್ದು ಏನು?
ಯುವ ರಾಜ್‌ಕುಮಾರ್ ನಟನೆ ಸುಧಾರಣೆ ಕಂಡಿದೆ.
ಜಾಲಿ ಸೀನ್‌ಗಳಲ್ಲಿ ಯುವ ರಾಜ್‌ಕುಮಾರ್ ಇಷ್ಟ ಆಗ್ತಾರೆ
ಡೈಲಾಗ್ ಡಿಲೇವರಿಯಲ್ಲಿ ಇನ್ನೂ ಸ್ವಲ್ಪ ಮಾಗಬೇಕು
ಯುವ ಹಾಗೂ ಸಂಪದ ಲವ್ ಸ್ಟೋರಿ ಮೆಚ್ಚಿದ ಪ್ರೇಕ್ಷಕರು
ಕಿರೀಟಿ ಸಿನಿಮಾಗೆ ಪ್ರೇಕ್ಷಕರು ಏನಂದ್ರು?
ಇನ್ನು ‘ಜೂನಿಯರ್’ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಕಿರೀಟಿಗೆ ಪ್ರೇಕ್ಷಕರಿಂದ ಸಪೋರ್ಟ್ ಸಿಕ್ಕಿದೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದರಿಂದ ‘ಜೂನಿಯರ್’ ಗೆ ಎರಡು ಭಾಷೆಯ ಪ್ರೇಕ್ಷಕರಿಂದ ಪ್ರತಿಕ್ರಿಯೆ ಸಿಕ್ಕಿದೆ. ಒಂದ್ಕಡೆ ಕನ್ನಡದ ಪ್ರೇಕ್ಷಕರು ಅಭಿಪ್ರಾಯ ಸಿಕ್ಕಿದರೆ, ಇನ್ನೊಂದು ಕಡೆ ತೆಲುಗು ಆಡಿಯನ್ಸ್ ಒಪಿನಿಯನ್ ಕೊಟ್ಟಿದ್ದಾರೆ.
ಗೆದ್ದವರು ಯಾರು?
ಕಿರೀಟಿಗೆ ಹೋಲಿಸಿದರೆ, ಯುವ ರಾಜ್‌ಕುಮಾರ್ ಸೀನಿಯರ್. ‘ಎಕ್ಕ’ ಯುವರಾಜ್‌ಕುಮಾರ್ ಅಭಿನಯದ ಎರಡನೇ ಸಿನಿಮಾ. ಇದು ಮಾಸ್ ಸಿನಿಮಾ ಆಗಿದ್ದು, ಲೋಕಲ್ ಕಂಟೆಂಟ್ ಇಟ್ಕೊಂಡು ಕಥೆ ಹೆಣೆಯಲಾಗಿದೆ. ಯುವ ರಾಜ್‌ಕುಮಾರ್ ನಟನೆಯಲ್ಲಿ ಸುಧಾರಣೆ ಕಂಡಿದ್ದಕ್ಕೆ ಖುಷಿ ಪಟ್ಟಿದ್ದಾರೆ. ಬಾಕ್ಸಾಫೀಸ್‌ನಲ್ಲೂ ‘ಜೂನಿಯರ್’ಗೆ ಹೋಲಿಸಿದರೆ ‘ಎಕ್ಕ’ಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಹಾಗಂತ ಕಿರೀಟಿಗೆ ಡ್ಯಾನ್ಸ್‌ಗೆ, ಫೈಟ್‌ಗೆ, ಡೆಡಿಕೇಷನ್‌ಗೆ ಭಾರೀ ಮೆಚ್ಚುಗೆ ಸಿಗುತ್ತಿದೆ. ಫಸ್ಟ್ ಡೇ ಫಸ್ಟ್ ಶೋ ಕರ್ನಾಟಕದಲ್ಲಿ ಯುವ ರಾಜ್‌ಕುಮಾರ್ ಮುಂದಿನ ದಿನಗಳಲ್ಲಿ ಈ ಟ್ರೆಂಡ್ ಬದಲಾದರೂ ಅಚ್ಚರಿ ಪಡಬೇಕಿಲ್ಲ.