ಪ್ರಕಾಶ್ ವೀರ್ ನಿರ್ದೇಶನದ ‘ಡೆವಿಲ್’ ಸಿನಿಮಾ ಚಿತ್ರೀಕರಣ ಸದ್ಯ ಥಾಯ್ಲೆಂಡ್‌ನಲ್ಲಿ ನಡೀತಿದೆ. ಕಲರ್‌ಫುಲ್ ಸಾಂಗ್ ಅನ್ನು ಅಲ್ಲಿ ಚಿತ್ರತಂಡ ಸೆರೆ ಹಿಡಿಯುತ್ತಿದೆ. ನಟ ದರ್ಶನ್, ನಾಯಕಿ ರಚನಾ ರೈ ಸೇರಿ ಹಲವರು ಅಲ್ಲಿದ್ದಾರೆ. ಇತ್ತ ಚಿತ್ರದ ಹೊಸ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.Devil motion poster Dboss
ದರ್ಶನ್ ಸಿಗರೇಟ್ ಸೇದುತ್ತಾ ಖಡಕ್ ಲುಕ್‌ನಲ್ಲಿರುವ ಪೋಸ್ಟರ್ ಗಮನ ಸೆಳೆಯುತ್ತಿದೆ. ಎಂಬ್ರಾಡರಿ ಡಿಸೈನ್ ಇರುಬ ಸೂಟ್ ಬ್ಲೇಸರ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿ ದರ್ಶನ್ ಮಿಂಚಿದ್ದಾರೆ. ಸನ್ ಗ್ಲಾಸ್ ತೊಟ್ಟು ಖಡಕ್ ಲುಕ್‌ನಲ್ಲಿ ‘ಡೆವಿಲ್’ ದರ್ಶನ್ ದರ್ಶನ ಕೊಟ್ಟಿದ್ದಾರೆ. ಅತ್ತಿಬೆಲೆಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಮೋಷನ್ ಪೋಸ್ಟರ್ ಅನಾವರಣ ಮಾಡಲಾಗಿದೆ.
ಅಜನೀಶ್ ಲೋಕನಾಥ್ ಬಿಜಿಎಂ ಜೊತೆಗೆ ‘ಡೆವಿಲ್’ ಮೋಷನ್ ಪೋಸ್ಟರ್ ಕಿಕ್ ಕೊಡ್ತಿದೆ. ಆದರೆ ಮುಖ್ಯವಾದ ವಿಚಾರವೇ ಅದರಲ್ಲಿ ಇಲ್ಲ. ಅದು ಚಿತ್ರದ ರಿಲೀಸ್ ಡೇಟ್. ಹೌದು ಮೋಷನ್ ಪೋಸ್ಟರ್‌ನಲ್ಲಿ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡ್ತಾರೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಅದು ಸುಳ್ಳಾಗಿದೆ. ಗ್ರಾಫಿಕ್ಸ್ ವರ್ಕ್ ಹೆಚ್ಚು ಇರುವುದರಿಂದ ಪೋಸ್ಟ್ ಪ್ರೊಡಕ್ಷನ್ ಯಾವಾಗ ಮುಗಿಯುತ್ತದೆ ಎಂದು ಚಿತ್ರತಂಡಕ್ಕೆ ಗೊತ್ತಿಲ್ಲ. ಹಾಗಾಗಿ ರಿಲೀಸ್ ಡೇಟ್ ಘೋಷಣೆ ಮಾಡಲು ಹಿಂದು ಮುಂದು ನೋಡುವಂತಾಗಿದೆ.
ಅಕ್ಟೋಬರ್ ಕೊನೆಗೆ ‘ಡೆವಿಲ್’ ಬೆಳ್ಳಿ ಪರದೆಗೆ ಬರಬಹುದು ಎಂದು ನಿರೀಕ್ಷಿಸಲಾಗುತ್ತಿದೆ.Devil motion poster Dboss
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ಸಿನಿಮಾ ಬಿಡುಗಡೆ ಆಗಬೇಕಿತ್ತು. ಶೂಟಿಂಗ್ ತಡವಾಗಿ ಈ ವರ್ಷ ಸಿನಿಮಾ ಬಿಡುಗಡೆ ಮಾಡುವಂತಾಗಿದೆ. ಈಗಾಗಲೇ ಟಾಕಿ ಭಾಗದ ಚಿತ್ರೀಕರಣ ಮುಗಿದಿದೆ. ಥಾಯ್ಲೆಂಡ್ ಸಾಂಗ್ ಶೂಟ್ ಮುಗಿದರೆ ಕುಂಬಳಕಾಯಿ. ಸಂತು ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಸಾಂಗ್ ಶೂಟಿಂಗ್ ನಡೀತಿದೆ.
‘ಕಾಟೇರ’ ಬಳಿಕ ದರ್ಶನ್ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಹಾಗಾಗಿ ‘ಡೆವಿಲ್’ ಸಿನಿಮಾ ಮೇಲೆ ಬಹಳ ನಿರೀಕ್ಷೆಯಿದೆ.’ಕಾಟೇರ’ ಸಿನಿಮಾ ಬಳಿಕ ದರ್ಶನ್ ಭಾರೀ ಸಂಭಾವನೆ ಪಡೆದು ‘ಡೆವಿಲ್’ ಚಿತ್ರದಲ್ಲಿ ನಟಿಸಿದ್ದಾರೆ. ಅದಕ್ಕೆ ತಕ್ಕಂತೆ ಪ್ರೀ ರಿಲೀಸ್ ಬ್ಯುಸಿನೆಸ್ ಪ್ಲ್ಯಾನ್ ನಡೀತಿದೆ. ಸರೆಗಮ ಕಂಪನಿಗೆ ಚಿತ್ರದ ಆಡಿಯೋ ರೈಟ್ಸ್ ಮಾರಾಟವಾಗಿದೆ. ಓಟಿಟಿ ರೈಟ್ಸ್ ಬಗ್ಗೆ ಕೂಡ ಭಾರೀ ಲೆಕ್ಕಾಚಾರ ಶುರುವಾಗಿದೆ ಎನ್ನಲಾಗ್ತಿದೆ.