‘ನಂದ ಲವ್ಸ್ ನಂದಿತಾ’ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಇಬ್ಬರು ಪ್ರತಿಭೆಗಳನ್ನು ಹುಟ್ಟಾಕಿತ್ತು. ಒಬ್ಬರು ಲೂಸ್ ಮಾದ ಯೋಗಿ. ಇನ್ನೊಬ್ಬರು ಶ್ವೇತಾ. ಯೋಗಿ ದುನಿಯಾದಲ್ಲಿ ನಟಿಸಿದ್ದರೂ, ಹೀರೋ ಆಗಿದ್ದು ಈ ಸಿನಿಮಾ ಮೂಲಕವೇ. ಹಾಗೇ ಶ್ವೇತಾಗೂ ಇದು ಚೊಚ್ಚಲ ಸಿನಿಮಾ. Nandita Swetha beauty secret ಬಳಿಕ ಜಿಂಕೆಮರಿ ಶ್ವೇತಾ, ನಂದಿತಾ ಶ್ವೇತಾ ಅಂತಲೇ ಜನಪ್ರಿಯರಾದರು. ಕನ್ನಡದಲ್ಲಿ ಮತ್ತೆ ನಟಿಸದೇ ಹೋದರೂ, ತಮಿಳು, ತೆಲುಗಿನಲ್ಲಿ ಭಾರೀ ಬ್ಯೂಸಿಯಾಗಿ ಬಿಟ್ಟರು.
ಈಗ ಶ್ವೇತಾ 17 ವರ್ಷಗಳ ಬಳಿಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ‘ಪೆಪೆ’ ಸಿನಿಮಾ ನಿರ್ದೇಶಿಸಿದ್ದ ಶ್ರೀಲೇಶ್ ಎಸ್ ನಾಯರ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾದಲ್ಲಿ ಶ್ವೇತಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ, ಮತ್ತೆ ಜಿಂಕೆಮರಿಯಂತಹ ಪಾತ್ರದಲ್ಲಿ ನಟಿಸುತ್ತಿಲ್ಲ. ‘ಬೆನ್ನಿ’ ಸಿನಿಮಾದಲ್ಲಿ ಇವರು ರಗಡ್ ರೋಲ್. ಈಗಾಗಲೇ ಟೀಮ್ ಫಸ್ಟ್‌ಲುಕ್ ಬಿಟ್ಟು ಕಿಕ್ ಮತ್ತೆ ಕನ್ನಡ ಚಿತ್ರರಂಗಕ್ಕೆ ವೆಲ್‌ಕಮ್ ಮಾಡಿದೆ.
ಇದೇ ಖುಷಿಯಲ್ಲಿ ನಂದಿತಾ ಶ್ವೇತಾ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಆ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಶ್ವೇತಾ ಸೌಂದರ್ಯವನ್ನು ಹಾಡಿ ಹೊಗಳುತ್ತಿದ್ದಾರೆ. ಇಷ್ಟು ವರ್ಷ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವುದಕ್ಕೆ ಅಭಿನಯದ ಜೊತೆ ಇವರ ಸೌಂದರ್ಯವು ಕೂಡ ಅಷ್ಟೇ ಕಾರಣ. ಹಾಗಿದ್ದರೆ, ಜಿಂಕೆ ಮರಿ ನಟಿಯ ಬ್ಯೂಟಿ ಸೀಕ್ರೆಟ್ ಏನು? ಈ ಹಿಂದೆ ತಮ್ಮದೇ ನಂದಿತಾ ಶ್ವೇತಾ ಯೂಟ್ಯೂಬ್ ಚಾನೆಲ್‌ನಲ್ಲಿ ಆ ಸೀಕ್ರೆಟ್ ಅನ್ನು ರಿವೀಲ್ ಮಾಡಿದ್ದಾರೆ.
ಕನ್ನಡ ಚಿತ್ರರಂಗದಿಂದ ದೂರವಾಗಿದ್ದೇಕೆ ಜಿಂಕೆ ಮರಿ ? ನಂದ ಲವ್ಸ್ ನಂದಿತಾ ನಂತರ 04 ವರ್ಷ ಖಾಲಿ ಕುಳಿತಿದ್ದೇಕೆ ಶ್ವೇತಾ..? Nandita Swetha beauty secret
ಸುಮಾರು ಎರಡು ದಶಕಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿದ ನಟಿಗೆ ತನ್ನ ಸೌಂದರ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಅನ್ನೋದು ಸೀಕ್ರೆಟ್ ಗೊತ್ತಿದೆ. ಅದನ್ನು ತನ್ನ ಅಭಿಮಾನಿಗಳ ಜೊತೆ ಜಿಂಕೆ ಮರಿ ಶ್ವೇತಾ ಹಂಚಿಕೊಂಡಿದ್ದಾರೆ. ತಮ್ಮ ಡೈಲಿ ರೊಟೀನ್ ಅನ್ನು ಒಂದೊಂದಾಗಿಯೇ ರಿವೀಲ್ ಮಾಡಿದ್ದಾರೆ. ವರ್ಕ್‌ಔಟ್‌ನಿಂದ ಹಿಡಿದು ಸ್ಕಿನ್ ಕೇರ್ ಬಗ್ಗೆ ಸೀಕ್ರೆಟ್ ಅನ್ನು ಹಂಚಿಕೊಂಡಿದ್ದಾರೆ.
ನಂದಿತಾ ಶ್ವೇತಾ ಪ್ರತಿದಿನ ಇನ್‌ಡೋರ್ ಅಥವಾ ಔಟ್ ಡೋರ್‌ನಲ್ಲಿ ವರ್ಕ್‌ಔಟ್ ಮಾಡುತ್ತಾರೆ. ಜಿಮ್ ಅಥವಾ ಯೋಗಾ ಇವರ ಫೇವರಿಟ್. ಯೋಗಾ ಅಂತ ಬಂದರೆ, ಸೂರ್ಯ ನಮಸ್ಕಾರ ಹಾಗೂ ಯೋಗಾ ಥೆರಪಿ ಮಾಡುತ್ತಾರೆ. ಇನ್‌ಡೋರ್ ಔಟ್‌ಡೋರ್ ಯಾವುದೇ ಇದ್ದರೂ ಸ್ಕಿನ್ ಕೇರ್ ಅನ್ನು ಹಚ್ಚಿಕೊಳ್ಳುವುದನ್ನು ಮರೆಯುವುದಿಲ್ಲ. ವರ್ಕ್‌ಔಟ್ ಬಳಿಕ ಸ್ನಾನ. ಅದಾದ್ಮೇಲೆ ಕೂದಲಿನ ಆರೋಗ್ಯಕ್ಕೆ ಹಾಗೂ ಬೆಳವಣಿಗೆಗೆ ಸ್ಕಾಲ್ಪ್ ಸೆರಮ್ ಹಚ್ಚಿಕೊಳ್ಳುತ್ತಾರೆ. ಈ ಮೂಲಕ ಕೂದಲಿನ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ.